ನವದೆಹಲಿ: ಗಾಂಧಿ ಕುಟುಂಬದ ಸದಸ್ಯರ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ರಕ್ಷಣೆ ಹಿಂತೆಗೆದುಕೊಂಡಿರುವ ವಿಚಾರವಾಗಿ ಮಾತನಾಡುತ್ತಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ನಿರ್ಧಾರವು ರಾಜಕೀಯದ ಭಾಗ ಮತ್ತು ಇದು ನಡೆಯುತ್ತಲೇ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸೋನಿಯಾ ಗಾಂಧಿ, ವಯನಾಡ್ ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಇದ್ದ ಎಸ್‌ಪಿಜಿ ರಕ್ಷಣೆಯನ್ನು ಹಿಂತೆಗೆದುಕೊಂಡು ಜೆಡ್ ಪ್ಲಸ್ ರಕ್ಷಣೆಯನ್ನು ನೀಡಿತ್ತು.ನವೆಂಬರ್ 8 ರಂದು ಗೃಹ ಸಚಿವಾಲಯ ಗಾಂಧಿ ಕುಟುಂಬಕ್ಕೆ ನೀಡಿರುವ ಎಸ್‌ಪಿಜಿ ಕವರ್ ಹಿಂಪಡೆಯಲು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಒದಗಿಸಿದ 'Z ಡ್ ಪ್ಲಸ್' ಭದ್ರತೆಯನ್ನು ನೀಡಲು ನಿರ್ಧರಿಸಿತು.
Congress leader Priyanka Gandhi Vadra on 'removal of SPG cover from her, Sonia Gandhi & Rahul Gandhi': That's a part of politics. It keeps happening. pic.twitter.com/8HlR2tVlws
— ANI (@ANI) November 21, 2019
ವಿವಿಧ ಏಜೆನ್ಸಿಗಳಿಂದ ಗಾಂಧಿ ಕುಟುಂಬಕ್ಕೆ ಬೆದರಿಕೆ ಮೌಲ್ಯಮಾಪನ ಮಾಡಿದ ನಂತರ ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುಪ್ತಚರ ದಳದ ಪ್ರಕಾರ ಗಾಂಧಿ ಕುಟುಂಬಕ್ಕೆ ನೇರ ಬೆದರಿಕೆ ಇಲ್ಲ ಎನ್ನಲಾಗಿದೆ. ಗಾಂಧಿ ಕುಟುಂಬ ಸದಸ್ಯರಿಗೆ ಇದ್ದ ಎಸ್ಪಿಜಿ ಸೌಲಭ್ಯ ಹಿಂತೆಗೆದುಕೊಂಡ ನಂತರ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದುವರೆಗೆ ತಮ್ಮ ರಕ್ಷಣೆ ಶ್ರಮಿಸಿದ ಸಿಬ್ಬಂಧಿಗೆ ಕೃತಜ್ಞತೆ ಸಲ್ಲಿಸಿದ್ದರು.