ಟ್ರೆಂಡಿಂಗ್‌‌ನಲ್ಲಿ ಕೋಟಿಯ 'ಮಾತು ಸೋತು'ಹಾಡು

ಕೋಟಿ ಸಿನಿಮಾದ 'ಮಾತು ಸೋತು' ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗ್ತಾ ಇದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.‌ 

Written by - YASHODHA POOJARI | Edited by - Ranjitha R K | Last Updated : May 27, 2024, 04:47 PM IST
  • ಒಂದು ವಾರದಿಂದ 'ಟ್ರೆಂಡಿಂಗ್'ನಲ್ಲಿರುವ ಈ ಹಾಡು
  • ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬಿನಲ್ಲಿ ಟ್ರೆಂಡ್
  • ಯೂಟ್ಯೂಬ್ ಶಾರ್ಟ್ಸಲ್ಲೂ ಟ್ರೆಂಡಿಂಗ್ ಆಗ್ತಾ ಇದೆ.
ಟ್ರೆಂಡಿಂಗ್‌‌ನಲ್ಲಿ ಕೋಟಿಯ 'ಮಾತು ಸೋತು'ಹಾಡು  title=

ಬೆಂಗಳೂರು : ಕೋಟಿ ಸಿನಿಮಾದ 'ಮಾತು ಸೋತು' ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗ್ತಾ ಇದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.‌ 

ಇನ್ಸ್ಟಾಗ್ರಾಮ್‌ನಲ್ಲಿ ಕಳೆದ ಒಂದು ವಾರದಿಂದ 'ಟ್ರೆಂಡಿಂಗ್'ನಲ್ಲಿರುವ ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿ, ಯೋಗರಾಜ್ ಭಟ್ ಬರೆದು, ಅರ್ಮಾನ್ ಮಲಿಕ್ ಹಾಡಿದ್ದಾರೆ‌.ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬಿನಲ್ಲಿ ಹದಿನಾಲ್ಕು ಲಕ್ಷದಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯೂಟ್ಯೂಬ್ ಶಾರ್ಟ್ಸಲ್ಲೂ ಟ್ರೆಂಡಿಂಗ್ ಆಗ್ತಾ ಇದೆ.

ಇದನ್ನೂ ಓದಿ : Actress Madhubala: ನೆನಪಿದ್ದಾರಾ ರವಿಚಂದ್ರನ್‌ ʼಅಣ್ಣಯ್ಯʼಸಿನಿಮಾ ನಟಿ; ಈಕೆ ಮದುವೆಯಾಗಿದ್ದು ಯಾರನ್ನ ಗೊತ್ತಾ?

ಈ ಹಾಡಿನ ಸಂಯೋಜಕರಾದ ವಾಸುಕಿ ವೈಭವ್ "ಮಾತು ಸೋತು ಟ್ರೆಂಡ್ ಆಗ್ತಿರೋದು ಖುಷಿ ನೀಡಿದೆ.‌ ಇದು ಇನ್ನೂ ಪಿಕ್ ಆಗೋ ಭರವಸೆ ಇದೆ. ಇಷ್ಟಪಟ್ಟು ಮಾಡಿದ ಹಾಡುಗಳು ಹೀಗೆ ಜನರನ್ನು ತಲುಪಿದಾಗ ಆಗೋ ಖುಷಿ ವಿಶೇಷವಾದದ್ದು" ಎಂದರು.

ಕೋಟಿ ಸಿನಿಮಾದ ನಿರ್ದೇಶಕರಾದ ಪರಮ್ ಅವರು "ನನ್ನ ಮೊದಲ ಸಿನಿಮಾದ ಮೊದಲ ಹಾಡು ಈ ಮಟ್ಟಿಗಿನ ಸದ್ದು ಮಾಡುತ್ತಿರುವುದು ನೋಡಿ ಖುಷಿ ಆಗಿದೆ. ದಿನಾಲೂ ಸಾವಿರಾರು ರೀಲ್ಸ್‌ಗಳು ಅಪ್ಲೋಡ್ ಆಗುತ್ತಿದ್ದು, ಟ್ರೆಂಡಿಂಗ್ ಹೀಗೆ ಮುಂದುವರಿಯುವ ಭರವಸೆ ಇದೆ" ಎಂದರು.

ಈ ಹಾಡಿನ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ “ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಬಾಲಿವುಡ್ ನತ್ತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ! EXCLUSIVE ಮಾಹಿತಿ ಇದು

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ. 

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News