JEE Advanced: ಜೆಇಇ ಅಡ್ವಾನ್ಸ್ಡ್ 2024 answer key ನಾಳೆ ರಿಲೀಸ್‌.. ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

JEE Advanced  answer key: ಜೆಇಇ ಅಡ್ವಾನ್ಸ್ಡ್ 2024 ಆನ್ಸರ್‌ ಕೀ ನಾಳೆ ಜೂನ್ 2 ರಂದು ಬಿಡುಗಡೆ ಆಗಲಿದೆ. 

Written by - Chetana Devarmani | Last Updated : Jun 1, 2024, 02:00 PM IST
  • ಜೆಇಇ ಅಡ್ವಾನ್ಸ್ಡ್ 2024
  • ಜೆಇಇ ಅಡ್ವಾನ್ಸ್ಡ್ 2024 ಆನ್ಸರ್‌ ಕೀ
  • answer key ಡೌನ್‌ಲೋಡ್ ಮಾಡುವುದು ಹೇಗೆ?
JEE Advanced: ಜೆಇಇ ಅಡ್ವಾನ್ಸ್ಡ್ 2024 answer key ನಾಳೆ ರಿಲೀಸ್‌.. ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ  title=

JEE Advanced 2024: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ ಜೂನ್ 2, 2024 ರಂದು JEE ಅಡ್ವಾನ್ಸ್ಡ್ 2024 ಆನ್ಸರ್‌ ಕೀ ಯನ್ನು ಬಿಡುಗಡೆ ಮಾಡಲಿದೆ. JEE ಅಡ್ವಾನ್ಸ್ಡ್ 2024 ಗೆ ಹಾಜರಾಗಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeeadv.ac.in ನಲ್ಲಿ ಆನ್ಸರ್‌ ಕೀ ಡೌನ್‌ಲೋಡ್ ಮಾಡಬಹುದು. ತಾತ್ಕಾಲಿಕ ಆನ್ಸರ್‌ ಕೀ ಡೌನ್‌ಲೋಡ್ ಮಾಡಲು ಲಿಂಕ್ ನಾಳೆ ಬೆಳಿಗ್ಗೆ 10 ಗಂಟೆಗೆ ಸಕ್ರಿಯಗೊಳ್ಳುತ್ತದೆ. 

JEE ಅಡ್ವಾನ್ಸ್ಡ್ 2024 ಆನ್ಸರ್‌ ಕೀ ಡೌನ್‌ಲೋಡ್ ಮಾಡುವುದು ಹೇಗೆ? 

- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://jeeadv.ac.in/.

- ಮುಖಪುಟದಲ್ಲಿ, "ಡೌನ್‌ಲೋಡ್ JEE ಅಡ್ವಾನ್ಸ್ಡ್ 2024 ಕೀ ಆನ್ಸರ್‌" ಎಂಬ ಲಿಂಕ್‌ ಹುಡಿಕಿ ಕ್ಲಿಕ್‌ ಮಾಡಿ.

- ಅಪ್ಲಿಕೇಶನ್/ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಲಾಗಿನ್ ವಿವರಗಳನ್ನು ನಮೂದಿಸಿ.

- ನಿಮ್ಮ JEE ಅಡ್ವಾನ್ಸ್ಡ್ 2024 ಕೀ ಆನ್ಸರ್‌ ಪರದೆಯ ಮೇಲೆ ಗೋಚರಿಸುತ್ತದೆ. ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

JEE ಅಡ್ವಾನ್ಸ್ಡ್ 2024 ಫಲಿತಾಂಶ ಜೂನ್ 9, 2024 ರಂದು (ಭಾನುವಾರ) ಪ್ರಕಟವಾಗಲಿದೆ. ಫಲಿತಾಂಶಗಳನ್ನು ಘೋಷಿಸಿದ ನಂತರ ಯಶಸ್ವಿ ಅಭ್ಯರ್ಥಿಗಳ ವರ್ಗವಾರು ಅಖಿಲ ಭಾರತ ಶ್ರೇಣಿಗಳು (AIR) JEE (Advanced) 2024 ಆನ್‌ಲೈನ್ ಪೋರ್ಟಲ್ ನಲ್ಲಿ ಲಭ್ಯವಿರುತ್ತದೆ. ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಸಂದೇಶಗಳನ್ನು ಸಹ ಕಳುಹಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು JEE ಅಡ್ವಾನ್ಸ್‌ಡ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು. 

ಇದನ್ನೂ ಓದಿ:  ಶಾಲಾ ಪ್ರಾರಂಭೋತ್ಸವಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದ ಜಿಲ್ಲಾಧಿಕಾರಿ..!

ಮೇ 31 ರಂದು ಸಂಜೆ 5 ಗಂಟೆಗೆ ರೆಸ್ಪಾನ್ಸ್‌ ಶೀಟ್‌ ಬಿಡುಗಡೆ ಆಗಿದೆ. JEE ಅಡ್ವಾನ್ಸ್ಡ್ 2024 ರ ರೆಸ್ಪಾನ್ಸ್‌ ಶೀಟ್‌ ಪ್ರವೇಶ ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳು ಗುರುತಿಸಿದ ಉತ್ತರಗಳನ್ನು ಹೊಂದಿರುತ್ತದೆ. ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್‌ನಲ್ಲಿ ತಮ್ಮ ಸಂಭವನೀಯ ಸ್ಕೋರ್ ಅನ್ನು ರೆಸ್ಪಾನ್ಸ್‌ ಶೀಟ್‌ ಮತ್ತು ಅಧಿಕಾರಿಗಳು ಬಿಡುಗಡೆ ಮಾಡಿದ ಕೀ ಆನ್ಸರ್‌ಗೆ ಹೋಲಿಸಿ ಲೆಕ್ಕ ಹಾಕಬಹುದು. ಪರೀಕ್ಷೆಯನ್ನು ಮೇ 26, 2024 ರಂದು ಭಾರತದಾದ್ಯಂತ ನಡೆಸಲಾಯಿತು. IIT ಮದ್ರಾಸ್ JEE ಅಡ್ವಾನ್ಸ್ಡ್ 2024 ಅನ್ನು ನಡೆಸುತ್ತದೆ.  

ಜೆಇಇ ಅಡ್ವಾನ್ಸ್ಡ್‌ನಲ್ಲಿ ಸಂಭವನೀಯ ಸ್ಕೋರ್ ಅನ್ನು ಹೇಗೆ ಲೆಕ್ಕ ಹಾಕುವುದು? 

ಹಂತ 1: ಅಧಿಕೃತ ವೆಬ್‌ಸೈಟ್ jeeadv.ac.in ಮೂಲಕ JEE ಅಡ್ವಾನ್ಸ್ಡ್‌ನ ರೆಸ್ಪಾನ್ಸ್‌ ಶೀಟ್‌ ಮತ್ತು ಕೀ ಆನಸರ್‌ ಡೌನ್‌ಲೋಡ್ ಮಾಡಿ.

ಹಂತ 2: ರೆಸ್ಪಾನ್ಸ್‌ ಶೀಟ್‌ ಮತ್ತು ಕೀ ಆನ್ಸರ್‌ ಪಿಡಿಎಫ್ ತೆರೆಯಿರಿ

ಹಂತ 3: ಕೀ ಆನ್ಸರ್‌ ಪಿಡಿಎಫ್‌ನಿಂದ ಸರಿಯಾದ ಆಯ್ಕೆಯ ಐಡಿ ಮತ್ತು ಪ್ರಶ್ನೆ ಐಡಿಯನ್ನು ಗಮನಿಸಿ 

ಹಂತ 4: ರೆಸ್ಪಾನ್ಸ್‌ ಶೀಟ್‌ PDF ನಿಂದ ಆಯ್ಕೆ ID ಗಳು ಅದೇ ಪ್ರಶ್ನೆ ID ಗಳಿಗೆ ಸಂಬಂಧಿಸಿವೆಯೇ ಎಂದು ಈಗ ಪರಿಶೀಲಿಸಿ.

ಹಂತ 5: ಐಡಿ ಆಯ್ಕೆಯು ಹೊಂದಾಣಿಕೆಯಾದರೆ, ಅಂಕಗಳನ್ನು ಸೇರಿಸಿ.

ಹಂತ 6: ಆಯ್ಕೆ ಐಡಿ ಹೊಂದಿಕೆಯಾಗದಿದ್ದರೆ, ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ:  ಶೇಕಡಾ 7.8 ರಷ್ಟು ಬೆಳವಣಿಗೆ ಕಂಡ ಭಾರತದ ಜಿಡಿಪಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News