ದಿಲೀಪ್ ಕುಮಾರ್-ಸಾಯಿರಾ ಬಾನೋ ಕುರಿತ ಈ ಘಟನೆ ನಿಮಗೆ ಗೊತ್ತೇ?

ಬಾಲಿವುಡ್ ನಲ್ಲಿ 'ಜೂಬಿಲಿ ಕುಮಾರ್' ಎಂದೇ ಖ್ಯಾತ ಹಿರಿಯ ನಟ ರಾಜೇಂದ್ರ ಕುಮಾರ್ ಜೊತೆ 'ಆಯಿ ಮಿಲನ್ ಕಿ ಬೇಲಾ' ಚಿತ್ರದಲ್ಲಿ ನಟಿಸಿದ ಬಳಿಕ ರಾಜೇಂದ್ರ ಕುಮಾರ್ ಹಾಗೂ ಸಾಯರಾ ಬಾನೋ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗಲೇ ಮದುವೆಯಾಗಿದ್ದ ರಾಜೇಂದ್ರ ಕುಮಾರ್ ಗೆ ಸಾಯರಾ ಮದುವೆಗಾಗಿ ಒತ್ತಾಯಿಸಿದ್ದರು. ಈ ವೇಳೆ ಸ್ವತಃ ದಿಲೀಪ್ ಕುಮಾರ್ ಅವರೇ ಮುಂದಾಗಿ ಸಾಯಿರಾ ಮನವೊಲಿಸಿದ್ದರು.

Last Updated : Dec 11, 2019, 01:57 PM IST
ದಿಲೀಪ್ ಕುಮಾರ್-ಸಾಯಿರಾ ಬಾನೋ ಕುರಿತ ಈ ಘಟನೆ ನಿಮಗೆ ಗೊತ್ತೇ? title=

ನವದೆಹಲಿ: ಬಾಲಿವುಡ್ ಮೊಟ್ಟಮೊದಲ ಸೂಪರ್ ಸ್ಟಾರ್ ಹಾಗೂ ಟ್ರ್ಯಾಜಿಡಿ ಕಿಂಗ್ ಎಂದ ಖ್ಯಾತ ದಿಲೀಪ್ ಕುಮಾರ್ ಇಂದು (ಡಿಸೆಂಬರ್ 11) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಅನೇಕ ದಿನಗಳಿಂದ ಅವರು ಚಿತ್ರೋದ್ಯೋಮದಿಂದ ದೂರವಿದ್ದಾರೆ. ದಿಲೀಪ್ ಕುಮಾರ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿರದ ಕಾರಣ ಅವರು ಮಾಯಾನಗರಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ತಮ್ಮ 44ನೇ ವಯಸ್ಸಿನಲ್ಲಿ ಅವರು 22ರ ಹರೆಯದ ಸಾಯರಾ ಬಾನು ಜೊತೆ ವಿವಾಹವಾಗಿದ್ದರು. ಆ ವೇಳೆ ಸಾಯರಾ ಬಾನು ಅತಿ ದೊಡ್ಡ ಸ್ಟಾರ್ ಆಗಿದ್ದರು. 'ಜಂಗ್ಲಿ', 'ಏಪ್ರಿಲ್ ಫೂಲ್', 'ಪಡೋಸನ್', 'ಝುಕ್ ಗಯಾ ಆಸಮಾನ್', 'ಪೂರಬ್ ಔರ್ ಪಶ್ಚಿಮ್', 'ವಿಕ್ಟೋರಿಯಾ 203' ಗಳಂತಹ ಚಿತ್ರಗಳಲ್ಲಿ ನಟಿಸಿದ್ದ ಸಾಯರಾ, ಕೀರ್ತಿಯ ಉತ್ತುಂಗದಲ್ಲಿದ್ದರು. ಈ ಇಬ್ಬರ ನಡುವೆ ಇರುವ ಪ್ರೇಮದ ಕಾರಣ ಅವರ ಸಂಬಂಧ ಇಂದಿಗೂ ಕೂಡ ಗಟ್ಟಿಯಾಗಿದೆ. ಆದರೆ, ಈ ಜೋಡಿಯೋ ಕೂಡ ಒಂದು ಬಾರಿ ತಮ್ಮ ಪ್ರೇಮ ನಿರೂಪಿಸಲು ಅಗ್ನಿ ಪರೀಕ್ಷೆ ನೀಡಿದ್ದಾರೆ.

ಎರಡನೇ ಬಾರಿಗೆ ದಿಲೀಪ್ ಮದುವೆಯಾಗಿದ್ದರು
ಈ ಕುರಿತು ತಮ್ಮ ಅಟೋಬಯಾಗ್ರಾಫಿ 'THE SUBSTANCE AND THE SHADOW' ನಲ್ಲಿ ಬರೆದುಕೊಂಡಿರುವ ದಿಲೀಪ್ ಕುಮಾರ್ 1972ರಲ್ಲಿ ಸಾಯರಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದರು. ಆದರೆ, ಅಧಿಕ ರಕ್ತದೊತ್ತಡದ ಹಿನ್ನೆಲೆ ಅವರು ಮಗುವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರು. ಈ ಘಟನೆಯ ನಂತರ ಸಾಯಿರಾ ತಾಯಿಯಾಗುವ ಭಾಗ್ಯ ಕಳೆದುಕೊಂಡಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಈ ಘಟನೆಯ ಬಳಿಕ ಮಗು ಪಡೆಯುವುದಕ್ಕೊಸ್ಕರ ದಿಲೀಪ್ ಕುಮಾರ್ ಆಸಮಾ ಹೆಸರಿನ ಮಹಿಳೆಯ ಜೊತೆ ವಿವಾಹವಾಗಿದ್ದರು. ಆಸಮಾ ವಿವಾಹ ವಿಚ್ಛೇದನೆ ಪಡೆದುಕೊಂಡಿದ್ದರು ಮತ್ತು ದಿಲೀಪ್ ಕುಮಾರ್ ಅವರ ವಿಶ್ವಾಸ ಉಳಿಸಿಕೊಳ್ಳಲು ಅವರು ವಿಫಲರಾದರು. ತಮ್ಮ ತಪ್ಪಿನ ಅರಿವಾದ ದಿಲೀಪ್ ಕುಮಾರ್ ಆಸಮಾಗೆ ಡೈವೋರ್ಸ್ ನೀಡಿ ಮತ್ತೆ ಸಾಯಿರಾ ಬಳಿ ಮರಳಿದ್ದರು.

ತಮ್ಮ 12ನೆ ವಯಸ್ಸಿನಲ್ಲಿಯೇ ಅವರು ದಿಲೀಪ್ ಅವರನ್ನು ಮೆಚ್ಚಿಕೊಂಡಿದ್ದರು
ಸಾಯಾರಾ ಬಾನು ತಮ್ಮ 12ನೇ ವಯಸ್ಸಿನಲ್ಲಿರುವಾಗಲೇ ದಿಲೀಪ್ ಕುಮಾರ್ ಅವರನ್ನು ಮೆಚ್ಚಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಸಾಯರಾ ತಾಯಿ ನಸೀಮ್ ಬಾನೋ ತಮ್ಮ ಕಾಲದ ಖ್ಯಾತ ನಟಿಯಾಗಿದ್ದರು ಮತ್ತು ಅವರ ಅಜ್ಜಿ ಛಮಿಯಾ ಬಾಯಿ ಅಂದರೆ ಶಂಶಾದ್ ಬೇಗಂ ದೆಹಲಿಯಲ್ಲಿ ಖ್ಯಾತ ಗಾಯಕಿಯಾಗಿದ್ದರು. ಆ ಕಾಲದಲ್ಲಿ ಅತ್ಯಂತ ಸ್ಥಿತಿವಂತರಾಗಿದ್ದ ಎಹೆಸಾನ್ ಮಿಯಾ ಜೊತೆ ಸಾಯಿರಾ ತಾಯಿ ನಸೀಮಾ ಬಾನೋ ವಿವಾಹ ನೆರವೇರಿತ್ತು. ಆದರೆ, ದೇಶ ವಿಭಜನೆಯ ಬಳಿಕ ಸಾಯಿರಾ ತಂದೆ ಪಾಕಿಸ್ತಾನಕ್ಕೆ ಸೇರಿಕೊಂಡಿದ್ದು, ನಸೀಮಾ ಬಾನೋ ತಮ್ಮ ಮಕ್ಕಳ ಜೊತೆ ಲಂಡನ್ ತೆರಳಿದರು ಎನ್ನಲಾಗುತ್ತದೆ.

ಸಾಯಿರಾ ತಮ್ಮ ಹೆಚ್ಚಿನ ಸಮಯವನ್ನು ಲಂಡನ್ ನಲ್ಲಿಯೇ ಕಳೆದಿದ್ದರು. ಅಲ್ಲಿ ಅವರು ತಮ್ಮ ಶಿಕ್ಷಣ ಪೂರ್ಣಗೊಳಿಸಿ ಭಾರತಕ್ಕೆ ಮರಳಿ, ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಈ ವೇಳೆ ಸಾಯರಾ ಬಾನೋ ಹಾಗೂ ರಾಜೇಂದ್ರ ಕುಮಾರ್ ಪರಸ್ಪರ ಮೆಚ್ಚಿಕೊಳ್ಳಲಾರಂಭಿಸಿದ್ದರು. ಆದರೆ, ಆಗಲೇ ವಿವಾಹ ಬಂಧನದಲ್ಲಿದ್ದ ರಾಜೇಂದ್ರ ಕುಮಾರ್ ಜೊತೆ ಮದುವೆಗಾಗಿ ಸಾಯಿರಾ ಪಟ್ಟುಹಿಡಿದಿದ್ದರು. ಈ ವೇಳೆ ದಿಲೀಪ್ ಕುಮಾರ್ ಬಳಿ ತೆರಳಿದ್ದ ಸಾಯಿರಾ ತಾಯಿ ನಸೀಮಾ ಬಾನೋ ತಮ್ಮ ಅಭಿಮಾನಿಗೆ ಸಮಝಾಯಿಸಿ ಹೇಳುವಂತೆ ಮನವಿ ಮಾಡಿದ್ದರು. ಆದರೆ, ಆ ಹೊತ್ತಿಗೆ ದಿಲೀಪ್ ಕುಮಾರ್ ಮತ್ತು ಸಾಯಿರಾ ಮಧ್ಯೆ ಅಷ್ಟೊಂದು ಆತ್ಮೀಯತೆ ಇರಲಿಲ್ಲ ಹಾಗೂ ಇಬ್ಬರು ಪರಸ್ಪರ ಹೆಚ್ಚಾಗಿ ಕೆಲಸ ಕೂಡ ಮಾಡಿರಲಿಲ್ಲ. ಇಷ್ಟಾಗ್ಯೂ ಕೂಡ ದಿಲೀಪ್ ಕುಮಾರ್ ಸಾಯಿರಾ ಮನವೊಲಿಸಲು ಆಕೆಯ ಬಳಿ ತೆರಳಿದ್ದಾರೆ. ಈ ವೇಳೆ ಸಾಯರಾ 'ನೀವು ನನ್ನ ಜೊತೆ ಮದುವೆಯಾಗುವಿರಾ?' ಎಂದು ಪ್ರಶ್ನಿಸಿದ್ದಾರೆ. ಆ ವೇಳೆ ಮೌನಕ್ಕೆ ಶರಣಾದ ದಿಲೀಪ್ ನಂತರದ ದಿನಗಳಲ್ಲಿ ಸಾಯಿರಾ ಪ್ರೇಮಕ್ಕೆ ಮರುಳಾಗಿ ಅವಳ ಜೊತೆ ವಿವಾಹವಾಗಿದ್ದಾರೆ.

Trending News