ನವದೆಹಲಿ: ಇತ್ತೀಚಿಗೆ ಬಾಲಿವುಡ್ ನಲ್ಲಿ ಜಾನ್ ಅಬ್ರಹಾಂ ತಮ್ಮ ದೇಶಭಕ್ತಿ ಬಿಂಬಿಸುವ ಚಿತ್ರಗಳ ಕಾರಣ ಸುದ್ದಿಯಲ್ಲಿದ್ದಾರೆ. ತುಂಬಾ ಚಾಕಚಕ್ಯತೆಯಿಂದ ಅವರು ಚಲನಚಿತ್ರಗಳ ಆಯ್ಕೆ ಮಾಡುತ್ತಿದ್ದಾರೆ. ಇಂದು ಡಿಸೆಂಬರ್ 17. ಜಾನ್ ಅಬ್ರಹಾಂ ಅವರ ಹುಟ್ಟುಹಬ್ಬ. ಜಾನ್ ಕುರಿತು ಮಾತನಾಡುವಾಗ ಬಿಪಾಷಾ ಅವರನ್ನು ಮರೆತರೆ ಹೇಗೆ. ಜಾನ್ ತಮ್ಮ ವೃತ್ತಿಜೀವನದಲ್ಲಿ ಸಂಘರ್ಷ ನಡೆಸುತ್ತಿದ್ದ ವೇಳೆ ಬಿಪಾಷಾ ಜೊತೆಗಿದ್ದರು. 9 ವರ್ಷಗಳವರೆಗೆ ಅವರ ಈ ಸಂಬಂಧ ಮುಂದುವರೆದಿತ್ತು. ಲಿವ್ ಇನ್ ನಲ್ಲಿ ವಾಸಿಸುತ್ತಿದ್ದ ಈ ಇಬ್ಬರು ಬಾಲಿವುಡ್ ನಲ್ಲಿ ಪರ್ಫೆಕ್ಟ್ ಕಪಲ್ ಎಂದೇ ಖ್ಯಾತರಾಗಿದ್ದರು. ಆದರೆ, ಇದಾದ ಬಳಿಕ ಆಕಸ್ಮಿಕವಾಗಿ ಬಿಪಾಷಾ ಅವರಿಂದ ದೂರ ಸರೆದು NRI ಪ್ರಿಯಾ ರುಂಚಾಲ್ ಜೊತೆ ಹಸೆಮಣೆ ಏರಿದರು. ಇವರ ಮಧ್ಯೆ ನಡೆದಿದ್ದಾದರು ಏನು?
ಮಾಡೆಲಿಂಗ್ ಹಿನ್ನೆಲೆಯಿಂದ ಬಂದ ಜಾನ್ ಹಾಗೂ ಬಿಪಾಷಾ ಮಧ್ಯೆ ಪ್ರೀತಿ ಚಿಗುರಿದ್ದು 'ಜಿಸ್ಮ್' ಚಿತ್ರದ ಮೂಲಕ ಎನ್ನಲಾಗುತ್ತದೆ. ಈ ಚಿತ್ರದಲ್ಲಿ ಸಕತ್ ಬೋಲ್ಡ್ ದೃಶ್ಯಗಳಿದ್ದವು ಹಾಗೂ ಅವುಗಳನ್ನು ಪರದೆಯ ಮೇಲೆ ನಿಭಾಯಿಸಲು ಬಿಪಾಷಾ ಸಾಕಷ್ಟು ಮುಜುಗರಪಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಜಾನ್ ಅವರೇ ಬಿಪಾಷಾ ಬೆಂಬಲಕ್ಕೆ ನಿಂತಿದ್ದರು. ಈ ವೇಳೆ ಇಬ್ಬರು ಪರಸ್ಪರ ಮೆಚ್ಚಿಕೊಳ್ಳಲಾರಂಭಿಸಿದ್ದರು. ಬಾಲಿವುಡ್ ನ ಪಾರ್ಟಿಗಳಲ್ಲಿಯೂ ಕೂಡ ಉಭಯರು ಒಟ್ಟಿಗೆ ಉಪಸ್ಥಿತಿ ದಾಖಲಿಸುತ್ತಿದ್ದರು ಹಾಗೂ ಪರಸ್ಪರರ ಜನ್ಮದಿನವನ್ನೂ ಕೂಡ ಗ್ರಾಂಡ್ ಆಗಿ ಆಚರಿಸುತ್ತಿದ್ದರು.
ಆದರೆ, ಆಕಸ್ಮಿಕವಾಗಿ ಈ ಇಬ್ಬರಲ್ಲಿ ಮನಸ್ತಾಪ ಉಂಟಾದ ಸುದ್ದಿಗಳು ಬರಲಾರಂಭಿಸಿದವು. ಬಳಿಕ ಜಾನ್ ಅವರು ಪ್ರಿಯಾ ರುಂಚಾಲ್ ಜೊತೆ ವೈವಾಹಿಕ ಜೀವನಕ್ಕೆ ಸುದ್ದಿ ಪ್ರಕಟವಾಯಿತು. ಬಿಪಾಶಾಗೆ ಹೊಸ ವರ್ಷದ ಶುಭಾಷಯ ಕೋರಿದ್ದ ಜಾನ್ ಅಬ್ರಹಾಂ, ಶುಭಾಷಯ ಪತ್ರದಲ್ಲಿ 'ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು. 2014ರ ವರ್ಷ ನಿಮ್ಮ ಜೀವನದಲ್ಲಿ ಪ್ರೀತಿ, ಉತ್ತಮ ಭವಿಷ್ಯ ಹಾಗೂ ಸಂತೋಷದ ಕ್ಷಣಗಳನ್ನು ತರಲಿ. ವಿಥ್ ಲವ್ ಜಾನ್ ಹಾಗೂ ಪ್ರಿಯಾ ಅಬ್ರಾಹಂ' ಎಂದು ಬರೆದಿದ್ದರು.
ಆದರೆ, ಮೀಡಿಯಾ ವರದಿಗಳ ಪ್ರಕಾರ ಜಾನ್ ಮದುವೆಯಾಗಿರುವ ವಿಚಾರ ಬಿಪಾಷಾಗೆ ತಿಳಿದಿರಲಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಪಾಷಾ, ತಮಗೆ ಈ ಶಾಕ್ ನಿಂದ ಹೊರಬರಲು ಹಲವು ತಿಂಗಳುಗಳೇ ಬೇಕಾದವು ಎಂದಿದ್ದರು. ಇನ್ನೊಂದೆಡೆ ಜಾನ್ ಇರುವ ಕಾರಣ ಬಿಪಾಷಾ ಇತರರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದೂ ಕೂಡ ಹೇಳಲಾಗುತ್ತದೆ. ಆ ಬಳಿಕ ಬಿಪಾಷಾ ಕಿರುತೆರೆ ನಟ ಕರಣ್ ಸಿಂಗ್ ಗ್ರೋವರ್ ಜೊತೆ ವಿವಾಹವಾಗಿದ್ದಾರೆ.
ತಮ್ಮ ಪತ್ನಿ ಪ್ರಿಯಾ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜಾನ್, ಪ್ರಿಯಾ ತುಂಬಾ ಖಾಸಗಿ ವ್ಯಕ್ತಿಯಾಗಿದ್ದಾರೆ. ಬಿಸನೆಸ್ ಸ್ಕೂಲ್ ಆಫ್ ಲಂಡನ್ ನಲ್ಲಿ ಅವರು ತಮ್ಮ ವ್ಯಾಸಂಗ ಮುಗಿಸಿದ್ದ ಪಿರ್ಯಾ ಬಳಿಕ ಲಾಸ್ ಎಂಜಲಿಸ್ ನಲ್ಲಿ ವಾಸವಾಗಿದ್ದರು. ಜೊತೆಗೆ ಜಾನ್ ಅವರ ಫುಟ್ ಬಾಲ್ ತಂಡ ನಾರ್ಥ್-ಈಸ್ಟ್ ಯುನೈಟೆಡ್ ಎಫಸಿ ಅನ್ನು ಕೂಡ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.