ತನ್ನ 30ನೇ ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದ 'ಗೇಮ್ ಆಫ್ ಥಾರ್ನ್ಸ್' ನಟ

ಡನ್ಬರ್ ಹಲವಾರು ಹಿಟ್  ಯೋಜನೆಗಳ ಮೇಲೆ ಕಾರ್ಯ ನಿರ್ವಹಿಸಿದ್ದಾರೆ. ಅವುಗಳಲ್ಲಿ 'ಲೈನ್ ಆಫ್ ಡ್ಯೂಟಿ' ಕೂಡ ಶಾಮೀಲಾಗಿದೆ.

Written by - Nitin Tabib | Last Updated : Dec 29, 2019, 04:57 PM IST
ತನ್ನ 30ನೇ ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದ 'ಗೇಮ್ ಆಫ್ ಥಾರ್ನ್ಸ್' ನಟ title=

ನವದೆಹಲಿ: ಖ್ಯಾತ ಹಿಟ್ ಸಿರೀಜ್ 'ಗೇಮ್ ಆಫ್ ಥಾರ್ನ್ಸ್'ನಲ್ಲಿ ಅಲ್ಫಿನ್ ಅಲನ್ ಮುಖಾಂತರ ನಿರ್ವಹಿಸಲ್ಪಟ್ಟ ಥಿಯೋನ್ ಗ್ರೆಜೋಯ್ ಅವರ ಬಾಡಿ ಡಬಲ್ ಮಾಡುವುದರಿಂದ ಖ್ಯಾತರಾದ ಹಾಲಿವುಡ್ ನಟ ಆಂಡ್ರೂ ಡನ್ಬರ್ ಕೊನೆಯುಸಿರೆಳೆದಿದ್ದಾರೆ. ಬೆಲಾಫಾಸ್ಟ್ ಲಿವೆ ನೀಡಿರುವ ವರದಿ ಪ್ರಕಾರ ಕ್ರಿಸ್ಮಸ್ ನ ಒಂದು ದಿನಕ್ಕೂ ಮುನ್ನವೆ ಸಂಜೆ ಬೆಲಾಫಾಸ್ಟ್ ನಲ್ಲಿರುವ ತಮ್ಮ ಸ್ವಂತ ನಿವಾಸದಲ್ಲಿ ಆಂಡ್ರೂ ನಿಧನರಾಗಿದ್ದಾರೆ ಎನ್ನಲಾಗಿದೆ. ಅವರ ವಯಸ್ಸು 30ರ ಆಸುಪಾಸಿನಲ್ಲಿತ್ತು. ಡನ್ಬರ್ ಇತರೆ ಕೆಲ ಹಿಟ್ ಪ್ರಾಜೆಕ್ಟ್ ಗಳಿಗೂ ಸಹ ಕೆಲಸ ಮಾಡಿದ್ದು, ಅವುಗಳಲ್ಲಿ 'ಲೈನ್ ಆಫ್ ಡ್ಯೂಟಿ' ಕೂಡ ಶಾಮೀಲಾಗಿದೆ. ಅಷ್ಟೇ ಅಲ್ಲ ಅವರು ಓರ್ವ DJ ಆಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ.

ಸ್ನೇಹಿತರಿಂದ ಶ್ರದ್ಧಾಂಜಲಿ
ಮಿರರ್ ಡಾಟ್ ಕೋ ಡಾಟ್ ಯುಕೆ ನೀಡಿರುವ ರಿಪೋರ್ಟ್ ಪ್ರಕಾರ, ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಸ್ನೇಹಿತರು ಹಾಗೂ ಸಹವರ್ತಿಗಳು ಡನ್ಬರ್ಗ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ ಎನ್ನಲಾಗಿದೆ. ಅವರ ಸಾವಿಗೆ ಬೆಲಾಪಾಸ್ಟ ಲೈವ್ ಗೆ  ಪ್ರತಿಕ್ರಿಯೆ ನೀಡಿರುವ ಅವರ ಸಹವರ್ತಿ ಆಂಡಿ ಮೈಕಕ್ಲೋ " ಆಂಡ್ರೂ ಅವರನ್ನು ಎಲ್ಲರು ಇಷ್ಟಪಡುತ್ತಿದ್ದರು. ಅವರಲ್ಲಿ ಒಂದು ವಿಶೇಷ ವ್ಯಕಿತ್ವ ಅಡಗಿತ್ತು. ಅವರ ಇರುವಿಕೆ ಅಕ್ಕಪಕ್ಕದ ಜನರಿಗೆ ಖುಷಿ ಕೊಡುತ್ತಿತ್ತು ಹಾಗೂ ಅವರ ಜೊತೆ ಕೆಲಸ ಮಾಡಲು ಎಲ್ಲರು ಖುಷಿಯಿಂದ ಒಪ್ಪಿಕೊಳ್ಳುತ್ತಿದ್ದರು" ಎಂದಿದ್ದಾರೆ.

"ಸೆಟ್ ನಲ್ಲಿ ಯಾವಾಗಲು ಆಂಡ್ರೂ ಮೇಲೆ ಇತರರು ಗಮನ ಕೆಂದ್ರೀಕರಿಸುತ್ತಿದ್ದರು
"ನಾವು ಸೆಟ್ ಮೇಲೆ ಇರುವಾಗ ನಮ್ಮಲ್ಲಿನ ಬಹುತೇಕರಿಗೆ ಇದೇ ರೀತಿ ಅನಿಸಿರಬಹುದು, ಆಂಡ್ರೂ ಅಲ್ಲಿ ಇರಬೇಕು ಅಂತ ಎಲ್ಲರಿಗೂ ಅನಿಸುತಿತ್ತು. ನಾವು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೆವು. ಆತ ಓರ್ವ ಕಾರಾಗ್ರಹದಂತಿದ್ದ. ಎಲ್ಲರನ್ನು ತನ್ನ ಜೊತೆಗೆಯೇ ಇಡುತ್ತಿದ್ದ" ಎಂದು ಮೈಕಕ್ಲೋ ಸ್ಮರಿಸಿಕೊಂಡಿದ್ದಾರೆ. 

Trending News