/kannada/photo-gallery/gruhalakshmi-money-release-date-this-month-249277 ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? 249277

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಅವನೇ ಶ್ರೀಮನ್ನಾರಾಯಣ'

ಶುಕ್ರವಾರ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರ ಮೊದಲ ದಿನವೇ 12 ಕೋಟಿ ಕಲೆಕ್ಷನ್​ ಮಾಡಿತ್ತು.

Last Updated : Dec 30, 2019, 05:01 PM IST
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ  'ಅವನೇ ಶ್ರೀಮನ್ನಾರಾಯಣ' title=
Photo Courtesy: Twitter

ಬೆಂಗಳೂರು: ಮೂರು ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಮೂಲಕ ಅದ್ದೂರಿಯಾಗಿ ತೆರೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರ ಮೊದಲ ದಿನವೇ 12 ಕೋಟಿ ಕಲೆಕ್ಷನ್​ ಮಾಡಿತ್ತು. ಈಗಲೂ ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರುವ  'ಅವನೇ ಶ್ರೀಮನ್ನಾರಾಯಣ' ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ.

'ಅವನೇ ಶ್ರೀಮನ್ನಾರಾಯಣ' ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಈವರೆಗೂ 25 ಕೋಟಿಗೂ ಹೆಚ್ಚು ಲೂಟಿ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡು ಎಲ್ಲರ ಮನಗೆದ್ದಿದ್ದಾರೆ. ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿಗೆ ಜೊತೆಯಾಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಂಡಿದ್ದು ಈ ಜೋಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ವಿಟ್ಟರ್​ನಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ಮಾತು ಕೇಳಿ ಬರುತ್ತಿದೆ.

ಮೊದಲ ಶೋಗೆ ಟಿಕೆಟ್ ಸಿಗಲಿಲ್ಲ ಆದ್ರೂ ನಿಂತು ಎರಡನೇ ಶೋಗೆ ಮೊದಲು ಟಿಕೆಟ್ ತಗೊಂಡು ಇವತ್ತು ನೋಡ್ದೆ, ಸಿನಿಮಾ ತುಂಬಾನೆ ಇಷ್ಟ ಆಯಿತು. ನೋಡಿದ ಮೇಲೆ ಗೊತ್ತಾಯ್ತು ಇದು ಕನ್ನಡ ಭಾಷೆಯಲ್ಲೇ 100 ಕೋಟಿ ಮುಟ್ಟೆ ಮುಟ್ಟುತ್ತೆ ಅಂತ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಸಂಭಾಷಣೆಗಳಲ್ಲಿ ಅಥವಾ ಅವರ ಚಲನಚಿತ್ರಗಳಲ್ಲಿ ಅವರ ಕರಕುಶಲತೆಯ ಮೇಲಿನ ಪ್ರೀತಿ ಮತ್ತು ಉತ್ಸಾಹ ಯಾವಾಗಲೂ ಹೊಳೆಯುತ್ತದೆ. ಉಪಶೀರ್ಷಿಕೆಗಳ ರೂಪದಲ್ಲಿ ಅವರ #ASN ಪ್ರೀತಿಯ ದೈತ್ಯ ಶ್ರಮಕ್ಕೆ ಒಂದು ಸಣ್ಣ ಕೊಡುಗೆ ನೀಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅಂತಹ ಚಾಲಿತ ಮತ್ತು ಕಠಿಣ ಕೆಲಸ ಮಾಡುವ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಕೃತಜ್ಞರಾಗಿರಬೇಕು ಎಂದು ಇನ್ನೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಸ್ನೇಹಿತ ಹಾಗೂ ನಟ ರಿಷಬ್ ಶೆಟ್ಟಿ  'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.  'ಅವನೇ ಶ್ರೀಮನ್ನಾರಾಯಣ' ಇತಿಹಾಸವನ್ನು ರಚಿಸಲು ಆಲ್ ದಿ ಬೆಸ್ಟ್. ನಾನು ದೊಡ್ಡವನಾದ ಮೇಲೆ ಈ ಬಗ್ಗೆ ಖಚಿತವಾಗಿ ಓದುತ್ತೇನೆ - ರಣವಿತ್ ಶೆಟ್ಟಿ ಎಂದು ಮಗನಿಂದ ಡಾನ್ಸ್ ಮಾಡಿಸುವ ಮೂಲಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.