ಬೆಂಗಳೂರು: ಸ್ವಂತ ಮನೆಯ ಕನಸು ಪ್ರತಿಯೊಬ್ಬ ಮನುಷ್ಯನ ಜೀವನದ ಬಹುದೊಡ್ಡ ಆಸೆಯಾಗಿರುತ್ತದೆ. ಎಷ್ಟೇ ದುಡಿದರೂ ಸ್ವಂತ ಮನೆಯಲ್ಲಿ ಬದುಕುವ ಸಂತೃಪ್ತಿ ಬಾಡಿಗೆ ಮನೆಯಲ್ಲಿ ವಾಸಿಸುವಾಗ ಸಿಗುವುದಿಲ್ಲ. ಸ್ವಂತದ್ದೊಂದು ಮನೆ ಹೊಂದುವ ಕನಸನ್ನು ನನಸಾಗಿಸಲು ಅನೇಕರು ಹಲವು ವರ್ಷಗಳವರೆಗೆ ದುಡಿದು ಹಣ ಕೂಡಿಡುತ್ತಾರೆ. ಮಾಸಿಕ ಇಎಂಐ ರೂಪದಲ್ಲಿ ಹಣ ಪಾವತಿಸಿ ಸ್ವಂತ ಮನೆ ಕನಸು ನನಸಾಗಿಸಿಕೊಂಡರೆ ಸಾಕು ಎಂಬ ಆಲೋಚನೆ ಹಲವರದ್ದು. ಅನೇಕರು ಇದಕ್ಕಾಗಿ ಗೃಹ ಸಾಲ ಪಡೆಯುವರು.
ಬ್ಯಾಂಕ್ ಗಳ ಜತೆಗೆ ಹಲವು ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತವೆ. ಕೆಲವೊಮ್ಮೆ ವಿಶೇಷ ಕೊಡುಗೆಗಳನ್ನು ನೀಡುತ್ತಾರೆ. ಇತ್ತೀಚೆಗೆ ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಗೃಹ ಸಾಲ ಪಡೆಯುವವರಿಗೆ ಶುಭ ಸುದ್ದಿ ನೀಡಿದೆ. ಕಂಪನಿಯು ತನ್ನ 35 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಗೃಹ ಸಾಲ ಪ್ರಕ್ರಿಯೆ ಶುಲ್ಕದಲ್ಲಿ 35 ಪ್ರತಿಶತ ರಿಯಾಯಿತಿಯನ್ನು ಘೋಷಿಸಿದೆ.
ಇದನ್ನೂ ಓದಿ: ಚಿನ್ನದ ಬೆಲೆ ಮತ್ತಷ್ಟು ಕುಸಿತ, ಇಂದು 10 ಗ್ರಾಂ ಬಂಗಾರದ ದರ ಎಷ್ಟು ಇಲ್ಲಿ ತಿಳಿಯಿರಿ
LIC HFL ಜೂನ್ 19 ರಿಂದ ಜೂನ್ 25, 2024 ರವರೆಗೆ ಮಂಜೂರಾದ ಗೃಹ ಸಾಲಗಳಿಗೆ ಸಂಸ್ಕರಣಾ ಶುಲ್ಕದ ಮೇಲೆ 35 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ. LIC HFL ಭಾರತದ ಅತಿದೊಡ್ಡ ಸ್ವತಂತ್ರ ವಸತಿ ಹಣಕಾಸು ಕಂಪನಿ. ತನ್ನ 35 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಈ ಕೊಡುಗೆಯನ್ನು ಪ್ರಾರಂಭಿಸಿದೆ. ಕಂಪನಿಯ ಪ್ರಸ್ತುತ ಗೃಹ ಸಾಲದ ಬಡ್ಡಿ ದರವು ರೂ.2 ಕೋಟಿವರೆಗಿನ ಸಾಲದ ಮೇಲೆ ಶೇಕಡಾ 8.50 ರಿಂದ ಪ್ರಾರಂಭವಾಗುತ್ತದೆ.
LIC HFL MD ಮತ್ತು CEO ತ್ರಿಭುವನ್, ನಮ್ಮ ಯಶಸ್ಸಿಗೆ ನಮ್ಮ ಗ್ರಾಹಕರ ಅಚಲವಾದ ನಂಬಿಕೆ ಮತ್ತು ನಮ್ಮ ಉದ್ಯೋಗಿಗಳ ಸಮರ್ಪಣೆ ಕಾರಣ ಎಂದು ವಿವರಿಸಿದರು. ಗೃಹಸಾಲ ಮಾರುಕಟ್ಟೆಯು ಕ್ರಿಯಾತ್ಮಕ ಬೆಳವಣಿಗೆಗೆ ಸಜ್ಜಾಗಿದೆ ಮತ್ತು ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಲು ಬಯಸುವವರಿಗೆ LIC HFL ಅಗತ್ಯ ಬೆಂಬಲವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: Zelio Ebikes: ಬಜೆಟ್ ಬೆಲೆಗೆ 80KM ಮೈಲೇಜ್ ನೀಡುವ ರಿವರ್ಸ್ ಗೇರ್ ಎಲೆಕ್ಟ್ರಿಕ್ ಸ್ಕೂಟರ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.