ಸಾವರ್ಕರ್ ಅವರ ಮೊಮ್ಮಗ ಆಸ್ಪತ್ರೆಗೆ ದಾಖಲು

ಹಿಂದುತ್ವ ವಿಚಾರವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಅಧಿಕ ರಕ್ತದೊತ್ತಡದ ಬಗ್ಗೆ ದೂರು ನೀಡಿ ಶುಕ್ರವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Last Updated : Jan 4, 2020, 10:39 AM IST
ಸಾವರ್ಕರ್ ಅವರ ಮೊಮ್ಮಗ ಆಸ್ಪತ್ರೆಗೆ ದಾಖಲು  title=
Photo courtesy: ANI

ನವದೆಹಲಿ: ಹಿಂದುತ್ವ ವಿಚಾರವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಅಧಿಕ ರಕ್ತದೊತ್ತಡದ ಬಗ್ಗೆ ದೂರು ನೀಡಿ ಶುಕ್ರವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸಂಯೋಜಿತ ಸೇವಾ ದಳ ವಿತರಿಸಿದ ಕಿರುಪುಸ್ತಕವೊಂದು ದೇಶಭಕ್ತನಾಗಿ ಸಾವರ್ಕರ್ ಅವರ ರುಜುವಾತುಗಳನ್ನು ಮತ್ತು ಶೌರ್ಯದ ಖ್ಯಾತಿಯನ್ನು ಪ್ರಶ್ನಿಸಿದ ನಂತರ ಈ ವಿವಾದ ಭುಗಿಲೆದ್ದಿತು. ಇದಾದ ನಂತರ ರಂಜಿತ್  ಟೆಲಿವಿಷನ್ ಸ್ಟುಡಿಯೋಗಳಲ್ಲಿ ಈ ವಿಚಾರವಾಗಿ ಮಾತನಾಡಲು  ಭೇಟಿ ನೀಡುತ್ತಿದ್ದಾರೆ.ಇದು ಅವರ ಆರೋಗ್ಯದ ಮೇಲೆ ಪ್ರಭಾವ ಬಿರಿದೆ. ಕಳೆದ ರಾತ್ರಿ ಅವರ ರಕ್ತದೊತ್ತಡ 220 ಕ್ಕೆ ಏರಿತು, ನಂತರ ಅವರನ್ನು ಮಹೀಮ್‌ನ ರಹೇಜಾ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಮೂಲವೊಂದು ತಿಳಿಸಿದೆ.

ರಂಜಿತ್ ಸಾವರ್ಕರ್ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು, ಆದರೆ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಅವರು ಹೇಳಿದರು. "ವೀರ್ ಸಾವರ್ಕರ್, ಕಿತ್ನೆ ವೀರ್?" ಎಂಬ ಶೀರ್ಷಿಕೆಯೊಂದಿಗೆ ಹಿಂದಿ ಕಿರುಪುಸ್ತಕದಲ್ಲಿ ಸಾವರ್ಕರ್ ಮತ್ತು ಮಹಾತ್ಮ ಗಾಂಧಿಯವರ ಕೊಲೆಗಾರ ನಾಥುರಾಮ್ ಗೋಡ್ಸೆ ಅವರ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದರು ಎಂದು ಪ್ರಸ್ತಾಪಿಸಲಾಗಿತ್ತು. ಈಗ ಈ ಕಿರು ಪುಸ್ತಕವು ಈಗ ಬಿಜೆಪಿ ಮತ್ತು ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಾಂಗ್ರೆಸ್ ತನ್ನ "ದುಷ್ಟ" ಮನಸ್ಸನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ, ಅಂತಹ ಕಿರುಹೊತ್ತಿಗೆಯನ್ನು ಪ್ರಸಾರ ಮಾಡುವ ಮೂಲಕ ಅದರ "ಬೌದ್ಧಿಕ ದಿವಾಳಿತನವನ್ನು" ಒತ್ತಿಹೇಳುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಿವಸೇನೆ ಸಂಸದ ಸಂಜಯ್ ರೌತ್ ಶುಕ್ರವಾರ "ವೀರ್ ಸಾವರ್ಕರ್ ಒಬ್ಬ ಮಹಾನ್ ವ್ಯಕ್ತಿ ಮತ್ತು ಒಬ್ಬ ಮಹಾನ್ ವ್ಯಕ್ತಿಯಾಗಿ ಉಳಿಯುತ್ತಾರೆ.ಒಂದು ವಿಭಾಗವು ಅವರ ವಿರುದ್ಧ ಮಾತನಾಡುತ್ತಲೇ ಇರುತ್ತದೆ. ಇದು ಅವರ ಮನಸ್ಸಿನಲ್ಲಿರುವ ಕೊಳೆಯನ್ನು ತೋರಿಸುತ್ತದೆ" ಎಂದು ಹೇಳಿದರು.

Trending News