ಫೆಬ್ರವರಿ ಮೊದಲ ವಾರಕ್ಕೆ `ಸಂಹಾರ' ಚಿತ್ರ ಬಿಡುಗಡೆ ಸಾಧ್ಯತೆ

ನಟ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಚಿತ್ರವು ಸದ್ಯದಲ್ಲೇ ಸೆನ್ಸಾರ್ ಆಗಲಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Last Updated : Jan 5, 2018, 12:48 PM IST
ಫೆಬ್ರವರಿ ಮೊದಲ ವಾರಕ್ಕೆ `ಸಂಹಾರ' ಚಿತ್ರ ಬಿಡುಗಡೆ ಸಾಧ್ಯತೆ title=

ಬೆಂಗಳೂರು : ನಟ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಚಿತ್ರವು ಸದ್ಯದಲ್ಲೇ ಸೆನ್ಸಾರ್ ಆಗಲಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಕಣ್ಣಿನ ದೃಷ್ಟಿ ಕಳೆದುಕೊಂಡ ಕುರುಡನ ಪಾತ್ರದಲ್ಲಿ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟ ಉರುಳಿ ಚಿತ್ರದ ಥೀಂ ಟೀಸರ್ ಬಿಡುಗಡೆ ಮಾಡಿದ್ದಾರೆ. 

ಈ ಚಿತ್ರವನ್ನು ಗಿರು ದೇಶಪಾಂಡೆ ನಿರ್ದೇಶಿಸಿ, ಚಿತ್ರಕಥೆ ರಚಿಸಿದ್ದಾರೆ. ರವಿ ಬಸ್ರೂರು ಸಂಗೀತ ಹಾಗೂ ಜಗದೀಶ್‌ ವಾಲಿ ಛಾಯಾಗ್ರಹಣ ಮಾಡಿದ್ದಾರೆ.

ನಟಿ ಹರಿಪ್ರಿಯ ಮತ್ತು ಕಾವ್ಯಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸದಾ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿಕ್ಕಣ್ಣ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ರಾಜಾ ಹುಲಿಯಾಗಿ ಕಾಣಿಸಿಕೊಂಡಿದ್ದು ಇವರ ಅಭಿನಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 

Trending News