ಬಾಲಿವುಡ್ ನ ಈ ಬೆಡಗಿಯ ಅದಾ ಮೇಲೆ ಫಿದಾ ಆದ ನೆಟ್ಟಿಗರು

ಖ್ಯಾತ ಬಾಲಿವುಡ್ ಬೆಡಗಿ ಊರ್ವಸಿ ರೌತೆಲಾ ಸದ್ಯ ಸಾಮಾಜಿಕ ಜಾಲತಾಣದ ಮೇಲೆ ತನ್ನ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದು, ಇದುವರೆಗೆ ಅವರ ಈ ಚಿತ್ರಗಳಿಗೆ 6 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

Last Updated : Jan 13, 2020, 01:06 PM IST
ಬಾಲಿವುಡ್ ನ ಈ ಬೆಡಗಿಯ ಅದಾ ಮೇಲೆ ಫಿದಾ ಆದ ನೆಟ್ಟಿಗರು title=

ನವದೆಹಲಿ: ಖ್ಯಾತ ಬಾಲಿವುಡ್ ಬೆಡಗಿ ಊರ್ವಶಿ ರೌತೆಲಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ಮೇಲೆ ತನ್ನ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಅವರು ಹಂಚಿಕೊಂಡಿರುವ ಈ ಫೋಟೋಗಳಿಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇವುಗಳಲ್ಲಿ ಕೆಲ ಫೋಟೋಗಳು ಸದ್ಯ ಸಕತ್ ವೈರಲ್ ಆಗುತ್ತಿದ್ದು, ಫೋಟೋಗಳಲ್ಲಿ ಉರ್ವಸಿ ಬಿಳಿ ಮತ್ತು ನೀಲಿ ಬಣ್ಣದ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಉರ್ವಸಿ ತಮ್ಮ ಊರ್ವಶಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಫೋಟೋಗಳು ಇದೀಗ ಭಾರಿ ಹವಾ ಸೃಷ್ಟಿಸಿದ್ದು, ಈ ಫೋಟೋಗಳನ್ನು ಮೆಚ್ಚಿಕೊಂಡ ನೆಟ್ಟಿಗರು ಒಳ್ಳೆಯ ಕಾಮೆಂಟ್ ಗಳನ್ನು ಸಹ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಇದುವರೆಗೆ ಅವರ ಈ ಫೋಟೋಗಳಿಗೆ 6 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

'ಪಾಗಲಪಂತಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಊರ್ವಶಿ

ಕಳೆದ ವರ್ಷ ನವೆಂಬರ್ ನಲ್ಲಿ ತೆರೆಕಂಡಿದ್ದ 'ಪಾಗಲಪಂತಿ' ಚಿತ್ರದಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು

'ಬಿಜಲಿ ಕಿ ತಾರ್' ಹಾಡಿನ ಮೂಲಕ ಭಾರಿ ಹವಾ ಸೃಷ್ಟಿಸಿದ್ದರು

ಇದನ್ನು ಹೊರತುಪಡಿಸಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟೋನಿ ಕಕ್ಕಡ  ಅವರ ಮ್ಯೂಸಿಕ್ ವಿಡಿಯೋ 'ಬಿಜಲಿ ಕಿ ತಾರ್' ನಲ್ಲಿಯೂ ಕೂಡ ಊರ್ವಶಿ ಕಾಣಿಸಿಕೊಂಡಿದ್ದರು. ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು.

ಈ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ

2015ರಲ್ಲಿ 'ಮಿಸ್ ದಿವಾ 2015' ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ಊರ್ವಶಿ 'ಮಿಸ್ ಯುನಿವರ್ಸ್ 2015 ಪೆಜೆಂಟ್' ನಲ್ಲಿಯೂ ಕೂಡ ಭಾರತವನ್ನು ಪ್ರತಿನಿಧಿಸಿದ್ದರು.

ಇದು ಊರ್ವಶಿಯ ಮೊದಲ ಚಿತ್ರ

2013ರಲ್ಲಿ ಬಿಡುಗಡೆಯಾಗಿದ್ದ 'ಸಿಂಗ್ ಸಾಹಬ್ ದಿ ಗ್ರೇಟ್' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದ ಊರ್ವಶಿ, ಬಳಿಕ 'ಸನಮ್ ರೇ', 'ಕಾಬಿಲ್','ಗ್ರೇಟ್ ಗ್ರ್ಯಾಂಡ್ ಮಸ್ತಿ' ಹಾಗೂ 'ಹೇಟ್ ಸ್ಟೋರಿ 4' ರಲ್ಲಿ ಅಭಿನಯಿಸಿದ್ದಾರೆ.

ಹಲವು ಡಾನ್ಸ್ ನಂಬರ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ

ಬಾಲಿವುಡ್ ನ ಹಲವು ಡಾನ್ಸ್ ನಂಬರ್ ಗಳಲ್ಲಿಯೂ ಕೂಡ ಊರ್ವಶಿ ಕಾಣಿಸಿಕೊಂಡಿದ್ದಾರೆ (ಚಿತ್ರ ಕೃಪೆ- ಈ ಎಲ್ಲ ಛಾಯಾಚಿತ್ರಗಳನ್ನು ಊರ್ವಶಿ ರೌತೆಲಾ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆಯಲಾಗಿದೆ)

Trending News