Sanju Samson 110 Meter Six Video: ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಿತು. ಟಾಸ್ ಗೆದ್ದ ಜಿಂಬಾಬ್ವೆ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 167 ರನ್ ಗಳಿಸಿತ್ತು.
ಇದನ್ನೂ ಓದಿ: ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡಿದ ಯುವರಾಜ್ ಸಿಂಗ್: ಸ್ನೇಹಿತನಿಗೇ ಇಲ್ಲ ಸ್ಥಾನ!?
ಭಾರತವನ್ನು ಈ ಸ್ಕೋರ್ಗೆ ಕೊಂಡೊಯ್ಯುವಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ದೊಡ್ಡ ಕೊಡುಗೆ ನೀಡಿದರು. 45 ಎಸೆತಗಳನ್ನು ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್ಗಳನ್ನು ಒಳಗೊಂಡ 58 ರನ್’ಗಳ ಇನ್ನಿಂಗ್ಸ್ಆಡಿದರು. ಈ ಇನ್ನಿಂಗ್ಸ್’ನಲ್ಲಿ ಸಂಜು ಅವರ ಬ್ಯಾಟ್’ನಿಂದ 110 ಮೀಟರ್’ಗಳ ಅತಿದೊಡ್ಡ ಸಿಕ್ಸರ್ ಬಾರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 3.5 ಓವರ್’ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಅಷ್ಟೇ ಅಲ್ಲ, ಗಿಲ್ ಕೂಡ ಬೇಗನೆ ಔಟಾದರು ಮತ್ತು ಐದು ಓವರ್ಗಳ ನಂತರ ತಂಡದ ಸ್ಕೋರ್ 40/3 ಆಯಿತು. ಗಿಲ್ ಔಟಾದ ಬಳಿಕ ಸ್ಯಾಮ್ಸನ್ ಜತೆ ರಿಯಾನ್ ಪರಾಗ್ ಕ್ರೀಸ್’ಗೆ ಬಂದರು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಯಾರಿದು? ಈತನ ಹಿನ್ನೆಲೆ ಏನು?
12ನೇ ಓವರ್’ನಲ್ಲಿ ಬ್ರ್ಯಾಂಡನ್ ಮಾವುಟಾ ವಿರುದ್ಧ ಸತತ ಸಿಕ್ಸರ್ ಬಾರಿಸಿ 30 ರನ್ ಪೂರೈಸಿದರು ಸಂಜು ಸ್ಯಾಮ್ಸನ್. ಮಾವುಟಾ ವಿರುದ್ಧದ ಅವರ ಮೊದಲ ಸಿಕ್ಸರ್ 110 ಮೀಟರ್ ದೂರಕ್ಕೆ ಹೋಗಿ, ಬಾಲ್ ಮೈದಾನದಿಂದ ಹೊರಬಿತ್ತು. ಇದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
.@IamSanjuSamson launches one into the orbit 💥🥵
A 1️⃣1️⃣0️⃣M hit by the wicketkeeper 🔥#SonySportsNetwork #ZIMvIND #TeamIndia | @BCCI pic.twitter.com/hjXmgOnnSS
— Sony Sports Network (@SonySportsNetwk) July 14, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ