ಮಲಪ್ಪುರಂ (ಕೇರಳ): ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 (ಎ) ಅಡಿಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ (ಧರ್ಮ, ಜನಾಂಗ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆ).
ಏನಿದು ಪ್ರಕರಣ?
ಜನವರಿ 22 ರಂದು "ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ಬೆಂಬಲಿಸಿದ್ದರಿಂದ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್ನ ಹಿಂದೂಗಳಿಗೆ ನೀರು ಸರಬರಾಜು ನಿರಾಕರಿಸಲಾಗಿದೆ" ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು.
Malappuram District police chief Abdul Kareem: Case registered against BJP MP Shobha Karandlaje under IPC sec 153(A), 120,& 34. She spread misleading and incorrect information & tried to destroy communal harmony. The water shortage was existing even before CAA was passed. https://t.co/pAaFQ8hRAw
— ANI (@ANI) January 24, 2020
ಕರಂದ್ಲಾಜೆ ಟ್ವೀಟ್ ಮಾಡಿದ ನಂತರ, ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿತು. ನಂತರ, ಮಲಪ್ಪುರಂ ಮೂಲದ ಸುಭಾಷ್ ಚಂದ್ರನ್.ಕೆ.ಆರ್ ಎಂಬ ಸುಪ್ರೀಂಕೋರ್ಟ್ ವಕೀಲ ಮತ್ತು ಅವರು ಟ್ವೀಟ್ ಕುಟ್ಟಿಪ್ಪುರಂನ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತದೆ ಎಂದು ಉಲ್ಲೇಖಿಸಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ಮೊದಲ ಆರೋಪಿ ಶೋಭಾ ಕರಂದ್ಲಾಜೆ ಮತ್ತು ಇತರರ ವಿರುದ್ಧವೂ ಸಹ ಅವರು ದೂರು ನೀಡಿದ್ದರು.
ಪೊಲೀಸರ ಪ್ರಕಾರ, ಈ ಪ್ರದೇಶವು ಕಳೆದ ಕೆಲವು ತಿಂಗಳುಗಳಿಂದ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಹತ್ತಿರದ ವಸಾಹತು ಜನರು ಖಾಸಗಿ ವ್ಯಕ್ತಿಯ ಬೋರ್ ಬಾವಿ ನೀರನ್ನು ಬಳಸುತ್ತಿದ್ದರು ಎನ್ನಲಾಗಿದೆ.
ಕೃಷಿ ಉದ್ದೇಶಗಳಿಗಾಗಿ ಇದನ್ನು ಬಳಸಿದರೆ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿಯಿಂದ ಎಚ್ಚರಿಕೆ ನೀಡಿದ ನಂತರ ವ್ಯಕ್ತಿಯು ನೀರು ಪಂಪ್ ಮಾಡುವುದನ್ನು ನಿಲ್ಲಿಸಿದ್ದಾನೆ. ಸೇವಾಭಾರತಿ ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಸಂಸದರು ಅದನ್ನು ಟ್ವೀಟ್ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮತ್ತೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, # CAA2019 ಅನ್ನು ಸಂಸತ್ತಿನ ಉಭಯ ಸದನಗಳು ಒಪ್ಪಿಕೊಂಡಿವೆ. #CAA ಅನ್ನು ಬೆಂಬಲಿಸುತ್ತಿರುವ ಜನರನ್ನು ವ್ಯವಹಾರದಿಂದ ಬಹಿಷ್ಕರಿಸಲಾಗುತ್ತಿದೆ, ಮೂಲ ಸೌಲಭ್ಯಗಳು ಮತ್ತು ಉದ್ಯೋಗಗಳನ್ನು ನಿರಾಕರಿಸಲಾಗಿದೆ. ಕೇರಳದಾದ್ಯಂತ ನಡೆಯುತ್ತಿರುವ ಈ ಎಲ್ಲ ಕೃತ್ಯಗಳನ್ನು ನೋಡಿಯೂ ಸಿಪಿಎಂ ಸರ್ಕಾರ ಕುರುಡಾಗಿದೆ, ಆದರೆ ಸತ್ಯವನ್ನು ಹೇಳಿದ್ದಕ್ಕಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತದೆ ಎಂದು ಕಿಡಿಕಾರಿದ್ದಾರೆ.