ಬೆಂಗಳೂರು : ಮಂಗಳೂರು – ಬೆಂಗಳೂರು ನಡುವಿನ ಸುಬ್ರಹ್ಮಣ್ಯ ರೈಲು ನಿಲ್ದಾಣ ಸಮೀಪದ ಎಡಕುಮೇರಿ – ಕಡಗರವಳ್ಳಿ ನಡುವಿನ ದೋಣಿಗಲ್ ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲು ಸಂಚಾರ ಸ್ಥಗಿತವಾಗಿದ್ದು, ದುರಸ್ಥಿ ಕಾರ್ಯ ಭರದಿಂದ ಸಾಗಿದೆ.
ಆಗಸ್ಟ್ 4 ವರೆಗೂ ರದ್ದು :
ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು - ಕಣ್ಣೂರು ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಆಗಸ್ಟ್ 4 ವರೆಗೂ ರದ್ದು ಮಾಡಲಾಗಿದೆ. ಮುರ್ಡೇಶ್ವರ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ ಸೇರಿ ಎಲ್ಲಾ ರೈಲುಗಳ ಸಂಚಾರ ಆಗಸ್ಟ್ ಮೂರರವರೆಗೆ ರದ್ದು ಮಾಡಲಾಗಿದೆ.
ಇದನ್ನೂ ಓದಿ : Arecanut Price July 29th: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?
ರದ್ದಾದ ರೈಲುಗಳು :
ರೈಲು ಸಂಖ್ಯೆ 16511 ಬೆಂಗಳೂರು - ಕಣ್ಣೂರು ಎಕ್ಸ್ಪ್ರೆಸ್ ಇಂದಿನಿಂದ ಆಗಸ್ಟ್ 3 ರವರೆಗೆ ಸಂಚಾರ ರದ್ದು
ರೈಲು ಸಂಖ್ಯೆ 1652 ಕಣ್ಣೂರು - ಬೆಂಗಳೂರು ಎಕ್ಸ್ಪ್ರೆಸ್ ನಾಳೆಯಿಂದ ರಿಂದ ಆಗಸ್ಟ್ 4 ರವರೆಗೆ ಸಂಚಾರ ರದ್ದು
ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ - ವಿಜಯಪುರ ಸ್ಪೆಷಲ್ ಎಕ್ಸ್ಪ್ರೆಸ್ ಜುಲೈ 30 ರಿಂದ ಆಗಸ್ಟ್ 4 ರವರೆಗೆ ಸಂಚಾರ ರದ್ದು
ರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್
ಇಂದಿನಿಂದ ಆಗಸ್ಟ್ 3 ರವರೆಗೆ ಸಂಚಾರ ರದ್ದು
ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಮುರ್ಡೇಶ್ವರ ಎಕ್ಸ್ಪ್ರೆಸ್ ಆಗಸ್ಟ್ 3 ರವರೆಗೆ ರದ್ದು.
ರೈಲು ಸಂಖ್ಯೆ 16586 ಮುರ್ಡೇಶ್ವರ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ ನಾಳೆಯಿಂದ ಆಗಸ್ಟ್ 4 ರದ್ದು
ರೈಲು ಸಂಖ್ಯೆ 16595 ಬೆಂಗಳೂರು - ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್
ರೈಲು ಸಂಖ್ಯೆ 16596 ಕಾರವಾರ -ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್
ನಾಳೆಯಿಂದ ಆಗಸ್ಟ್ 4 ರವರೆಗೆ ರದ್ದು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮುಖೇಶ್ ಅಂಬಾನಿಯ ಆಂಟಿಲಿಯಾಕ್ಕಿಂತ ದುಬಾರಿ ಈ ಮನೆ ! ಇದು ಭಾರತೀಯ ಮಹಿಳೆಗೆ ಸೇರಿದ ಮನೆ ! ಯಾರು ಆ ಸಿರಿವಂತೆ ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.