NIRF Ranking 2024: ಯಾವ ವಿಶ್ವವಿದ್ಯಾನಿಲಯ,ಯಾವ ಕಾಲೇಜು ಭಾರತದಲ್ಲಿ ನಂಬರ್-1, ಇಂದು ಹೊರ ಬರಲಿದೆ ಸರ್ಕಾರದ ಪಟ್ಟಿ

NIRF ranking 2024: ಭಾರತದ ಅತ್ಯುತ್ತಮ ಸಂಸ್ಥೆಗಳ ಶ್ರೇಯಾಂಕವನ್ನು  ಇಂದು ಮಧ್ಯಾಹ್ನ ಪ್ರಕಟಿಸಲಾಗುವುದು. ಈ ಲಿಸ್ಟ್   nirf.org ನಲ್ಲಿ ಲಭ್ಯವಿರಲಿದೆ. 

Written by - Ranjitha R K | Last Updated : Aug 12, 2024, 10:54 AM IST
  • ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ NIRF Ranking 2024 ಇಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ
  • ಪಟ್ಟಿ ಬಿಡುಗಡೆ ಮಾಡಲಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
  • ದೇಶಾದ್ಯಂತ ಇರುವ ಸಂಸ್ಥೆಗಳನ್ನು 13 ವಿವಿಧ ವಿಭಾಗಗಳಲ್ಲಿ ಶ್ರೇಯಾಂಕ
NIRF Ranking 2024: ಯಾವ ವಿಶ್ವವಿದ್ಯಾನಿಲಯ,ಯಾವ ಕಾಲೇಜು ಭಾರತದಲ್ಲಿ ನಂಬರ್-1, ಇಂದು ಹೊರ ಬರಲಿದೆ ಸರ್ಕಾರದ ಪಟ್ಟಿ title=

Top University College India Ranking 2024 NIRF: ಐಐಟಿಗಳು, ಐಐಎಂಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಇತರ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ NIRF Ranking 2024 ಇಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಲಿದೆ.ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಲಿದ್ದಾರೆ. ಐಐಟಿ ಮದ್ರಾಸ್ 2019 ರಿಂದ 2023 ರವರೆಗೆ ನಿರಂತರವಾಗಿ ಒಟ್ಟಾರೆ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ.ಇಂಜಿನಿಯರಿಂಗ್ ವಿಭಾಗದಲ್ಲಿಯೂ ಈ ಸಂಸ್ಥೆಯು 2016 ರಿಂದ 2023 ರವರೆಗೆ ತನ್ನ ಮೊದಲ ಸ್ಥಾನವನ್ನು ಕಾಯ್ದು ಕೊಂಡೆ ಬಂದಿದೆ. 

ದೇಶಾದ್ಯಂತ ಇರುವ ಸಂಸ್ಥೆಗಳನ್ನು 13 ವಿವಿಧ ವಿಭಾಗಗಳಲ್ಲಿ ಶ್ರೇಯಾಂಕ ನೀಡಲಾಗುವುದು. ಅವುಗಳಲ್ಲಿ 'ವಿಶ್ವವಿದ್ಯಾಲಯ ಕೂಡಾ ಒಂದು. ಕಳೆದ ಮೂರು ವರ್ಷಗಳಿಂದ, ಕರ್ನಾಟಕದ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ದೇಶದ ಅಗ್ರ ವಿಶ್ವವಿದ್ಯಾನಿಲಯವಾಗಿ ಹೊರ ಹೊಮ್ಮಿದೆ. ಸಂಸ್ಥೆಯು ವಿಜ್ಞಾನ, ಎಂಜಿನಿಯರಿಂಗ್ ಮತ್ತು ಇತರ ವಿಷಯಗಳಲ್ಲಿ ಸಂಶೋಧನೆ ನಡೆಸುತ್ತದೆ. ಗಮನಾರ್ಹವಾಗಿ, IISc ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ ಅತ್ಯುತ್ತಮ ಭಾರತೀಯ ಸಂಸ್ಥೆಯಾಗಿ ಕೂಡಾ ಸ್ಥಾನ ಪಡೆದಿದೆ. 

ಇದನ್ನೂ ಓದಿ : ಯಾವುದೇ ಪರೀಕ್ಷೆ ಇಲ್ಲದೆ ಇಲ್ಲಿದೆ ಸರ್ಕಾರಿ ನೌಕರಿ..! ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆ ದಿನ..!

NIRF 2024: ಮುಕ್ತ ವಿಶ್ವವಿದ್ಯಾಲಯ ಕೂಡಾ ಈ ಬಾರಿ ಗಣನೆಗೆ : 
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) ಅಡಿಯಲ್ಲಿ ನೀಡಲಾದ ಶ್ರೇಯಾಂಕದಲ್ಲಿ ಕೆಲವು ಹೊಸ ವಿಭಾಗಗಳನ್ನು ಸೇರಿಸಲಾಗಿದೆ. ಈ ಬಾರಿ 6500ಕ್ಕೂ ಹೆಚ್ಚು ಸಂಸ್ಥೆಗಳು ದಾಖಲೆ ಪ್ರಮಾಣದಲ್ಲಿ ಭಾಗವಹಿಸಿದೆ.ಉನ್ನತ ಶಿಕ್ಷಣ ಸಂಸ್ಥೆಗಳು ಇಂಜಿನಿಯರಿಂಗ್, ಫಾರ್ಮಸಿ, ಮ್ಯಾನೇಜ್‌ಮೆಂಟ್, ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್, ಕೃಷಿ ಮತ್ತು ಅಲೈಡ್ ಸೆಕ್ಟರ್, ಕಾನೂನು, ವೈದ್ಯಕೀಯ, ದಂತ ವೈದ್ಯಕೀಯ, ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಥಾನ ಪಡೆಯಲಿವೆ.ಮುಕ್ತ ವಿವಿ ಮತ್ತು ಸಾಮಾನ್ಯ ಪದವಿ ಕಾಲೇಜುಗಳೂ ಈ ಬಾರಿ ರ‍್ಯಾಂಕಿಂಗ್ ಗೆ ಅರ್ಜಿ ಸಲ್ಲಿಸಿವೆ.

ಇದನ್ನೂ ಓದಿ : ನೀವು ಸಹ ಪತ್ರಕರ್ತರಾಗಬೇಕೆ? ಹಾಗಿದ್ದಲ್ಲಿ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ...!

NIRF ಇಂಡಿಯಾ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕವನ್ನು 2016 ರಿಂದ ನಿರಂತರವಾಗಿ ನೀಡಲಾಗುತ್ತಿದೆ.ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (ಎನ್‌ಬಿಎ) ಅಧ್ಯಕ್ಷ ಪ್ರೊಫೆಸರ್ ಅನಿಲ್ ಸಹಸ್ರಬುದ್ಧೆ ಮಾತನಾಡಿ, ಪ್ರತಿ ವರ್ಷ ಭಾರತದ ಶ್ರೇಯಾಂಕಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಅದರ ಪರಿಣಾಮವು ಅಂತರರಾಷ್ಟ್ರೀಯ ರ‍್ಯಾಂಕಿಂಗ್ ನಲ್ಲಿಯೂ ಗೋಚರಿಸುತ್ತದೆ ಎಂದಿದ್ದಾರೆ. 

ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುವ ಶ್ರೇಯಾಂಕದಲ್ಲಿ ಭಾರತೀಯ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಿದೆ.ಕಳೆದ ವರ್ಷ, ಟಾಪ್ 10 ರಲ್ಲಿ 7 ಐಐಟಿಗಳು ಇದ್ದವು ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್)ನ ಶ್ರೇಯಾಂಕ  9 ರಿಂದ 6 ನೇ ಸ್ಥಾನಕ್ಕೆ ಏರಿತ್ತು. ದೇಶದ ಅಗ್ರ 10 ಸಂಸ್ಥೆಗಳಲ್ಲಿ ಮೂರು ಸಂಸ್ಥೆಗಳು ದೆಹಲಿಯದ್ದಾದರೆ  ಜೆಎನ್‌ಯು ಕೂಡಾ ಟಾಪ್ 10 ರಲ್ಲಿ ಸ್ಥಾನ ಪಡೆದಿತ್ತು.

NIRF ಶ್ರೇಯಾಂಕ 2024 ವಿಶ್ವವಿದ್ಯಾಲಯ: ಕಳೆದ 10 ವರ್ಷಗಳಲ್ಲಿ ಟಾಪ್ 10 ವಿಶ್ವವಿದ್ಯಾಲಯಗಳು   :

ಕಳೆದ ಮೂರು ವರ್ಷಗಳಲ್ಲಿ ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು ಈ ಕೆಳಗಿನಂತಿವೆ: 
1. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (2023) 
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (2022) 
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (2021)

2.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (2023)
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (2022)
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (2021)

3.ಜಾಮಿಯಾ ಮಿಲಿಯಾ ಇಸ್ಲಾಮಿಯಾ (2023)
ಜಾಮಿಯಾ ಮಿಲಿಯಾ ಇಸ್ಲಾಮಿಯಾ (2022)
ಬನಾರಸ್ ಹಿಂದೂ ವಿಶ್ವವಿದ್ಯಾಲಯ (2021)

4. ಜಾದವ್‌ಪುರ ವಿಶ್ವವಿದ್ಯಾಲಯ (2023)
ಜಾದವ್‌ಪುರ ವಿಶ್ವವಿದ್ಯಾಲಯ (2022)
ಕಲ್ಕತ್ತಾ ವಿಶ್ವವಿದ್ಯಾಲಯ (2021)

5. ಬನಾರಸ್ ಹಿಂದೂ ವಿಶ್ವವಿದ್ಯಾಲಯ (2023)
ಅಮೃತ ವಿಶ್ವ ವಿದ್ಯಾಪೀಠಂ (2022)
ಅಮೃತ ವಿಶ್ವ ವಿದ್ಯಾಪೀಠಂ(2021)

6. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (2023)
ಬನಾರಸ್ ಹಿಂದೂ ವಿಶ್ವವಿದ್ಯಾಲಯ (2022)
ಜಾಮಿಯಾ ಮಿಲಿಯಾ ಇಸ್ಲಾಮಿಯಾ (2021)

7. ಅಮೃತ ವಿಶ್ವ ವಿದ್ಯಾಪೀಠಂ(2023)
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (2022)
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (2021)

8. ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (2023)
ಕಲ್ಕತ್ತಾ ವಿಶ್ವವಿದ್ಯಾಲಯ (2022)
ಜಾದವ್‌ಪುರ ವಿಶ್ವವಿದ್ಯಾಲಯ (2021)

9. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (2023)
ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (2022)
ಹೈದರಾಬಾದ್ ವಿಶ್ವವಿದ್ಯಾಲಯ (2021)

10. ಹೈದರಾಬಾದ್ ವಿಶ್ವವಿದ್ಯಾಲಯ (2023)
ಹೈದರಾಬಾದ್ ವಿಶ್ವವಿದ್ಯಾಲಯ (2022)
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (2021)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News