ಬೆಂಗಳೂರು : ಜ್ಯೋತಿಷ್ಯದ ಪ್ರಕಾರ,ಯಾವುದೇ ವ್ಯಕ್ತಿಯ ಭವಿಷ್ಯ,ಸ್ವಭಾವ ಮತ್ತು ವ್ಯಕ್ತಿತ್ವವನ್ನು ಅವನ ರಾಶಿಯ ಮೂಲಕ ತಿಳಿದುಕೊಳ್ಳಬಹುದು.ಕೆಲವು ರಾಶಿಯವರು ಹುಟ್ಟಿನಿಂದ ಸಾಯುವವರೆಗೆ ಕಷ್ಟದಲ್ಲಿಯೇ ಕೈ ತೊಳೆಯುತ್ತಿರುತ್ತಾರೆ.ಇನ್ನು ಕೆಲವರಿಗೆ ಜೀವನದ ಎಲ್ಲಾ ಐಶಾರಾಮ ಬಹಳ ಸುಲಭವಾಗಿ ಸಿಕ್ಕಿ ಬಿಡುತ್ತದೆ.ಇದಕ್ಕೆಲ್ಲಾ ಅವರ ಜನ್ಮ ರಾಶಿಯೇ ಕಾರಣವಾಗಿರುತ್ತದೆ.
ಕೆಲವು ರಾಶಿಯವರು ತಮ್ಮ ಇಡೀ ಜೀವನವನ್ನು ಬಹಳ ಐಷಾರಾಮಿಯಾಗಿ ಕಳೆಯುತ್ತಾರೆ. ಜ್ಯೋತಿಷ್ಯದ ಪ್ರಕಾರ,ಪ್ರತಿಯೊಂದು ರಾಶಿಯು ತನ್ನದೇ ಆದ ಅಧಿಪತಿ ಗ್ರಹವನ್ನು ಹೊಂದಿದೆ. ಆ ಪ್ರಕಾರವಾಗಿ ಕೆಲವು ಹುಟ್ಟುತ್ತಾ ಬಡತನದಲ್ಲಿ ಇದ್ದರೂ ನೋಡ ನೋಡುತ್ತಾ ಎಲ್ಲಾ ರೀತಿಯ ಸವಲತ್ತು ಸಂಪತ್ತನ್ನು ಪಡೆದು ಪ್ರಗತಿ ಹೊಂದುತ್ತಾರೆ. ಜ್ಯೋತಿಷ್ಯದ ಪ್ರಕಾರ ಅಂಥಹ ಅದೃಷ್ಟ ರಾಶಿಗಳು ಯಾವುವು ನೋಡೋಣ.
ಮಿಥುನ ರಾಶಿ :
ಈ ರಾಶಿಯವರು ಭವಿಷ್ಯದ ಯೋಜನೆಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ.ಈ ಕಾರಣಕ್ಕಾಗಿ ಅವರು ಹೂಡಿಕೆ ಮಾಡುವುದರಲ್ಲಿ ನಂಬಿಕೆ ಇಟ್ಟಿರುತ್ತಾರೆ.ಅಷ್ಟೇ ಅಲ್ಲ,ಈ ರಾಶಿಯವರಿಗೆ ಹೂಡಿಕೆಯ ಬಗ್ಗೆ ಉತ್ತಮ ತಿಳುವಳಿಕೆ ಕೂಡಾ ಇರುತ್ತದೆ. ಅದರಿಂದ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಮಿಥುನ ರಾಶಿಯವರಿಗೆ ಎಂದಿಗೂ ಹಣದ ಕೊರತೆಯಾಗುವುದೇ ಇಲ್ಲ.
ಸಿಂಹ ರಾಶಿ :
ಜ್ಯೋತಿಷ್ಯದ ಪ್ರಕಾರ,ಸಿಂಹ ರಾಶಿಯ ಜನರು ಹಣಕಾಸಿನ ವಿಷಯಗಳಲ್ಲಿ ಬಹಳ ಅದೃಷ್ಟವಂತರು.ಈ ರಾಶಿಯವರು ಅದ್ಭುತ ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾರೆ.ಈ ರಾಶಿಯವರು ಕೂಡಾ ಹೂಡಿಕೆಯಲ್ಲಿ ಪರಿಣಿತರು ಮತ್ತು ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತಾರೆ.ಇವರು ಕಡಿಮೆ ಹೂಡಿಕೆಯಲ್ಲಿ ಉತ್ತಮ ಹಣವನ್ನು ಗಳಿಸುತ್ತಾರೆ.ಇವರು ತಮ್ಮದೇ ಆದ ಗುರುತನ್ನು ಹೊಂದಿರುತ್ತಾರೆ. ವಿಶೇಷ ಆಕರ್ಷಣೆಯ ವ್ಯಕ್ತಿತ್ವ ಇವರದ್ದು.
ಇದನ್ನೂ ಓದಿ : 12ವರ್ಷಗಳ ಬಳಿಕ ಮಿಥುನ ರಾಶಿಗೆ ಗುರು ಪ್ರವೇಶ, 2025ರಲ್ಲಿ ಈ 3 ರಾಶಿಯವರಿಗೆ ಗುರು ದೆಸೆ
ಮಕರ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಈ ರಾಶಿಯವರು ಗಳಿಸಿದ ಹಣವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.ಆದರೆ, ಅವರ ಮಕ್ಕಳು ಅಥವಾ ಸಂಬಂಧಿಕರು ಅವರ ಹಣದ ಲಾಭವನ್ನು ಪಡೆದುಕೊಳ್ಳುತ್ತಾರೆ.ಮಕರ ರಾಶಿಯವರು ದುಬಾರಿ ವಸ್ತುಗಳಿಗೆ ಖರ್ಚು ಮಾಡುವುದಿಲ್ಲ.ಈ ರಾಶಿಯವರು ತಾವು ಗಳಿಸಿದ ಹಣವನ್ನು ಅನಗತ್ಯವಾಗಿ ಖರ್ಚು ಮಾಡುವ ಬದಲು ಉಳಿತಾಯದಲ್ಲಿ ನಂಬಿಕೆಯುಳ್ಳವರು.
ವೃಷಭ ರಾಶಿ :
ಈ ರಾಶಿಯವರು ಆರ್ಥಿಕ ಯೋಜನೆಯನ್ನು ರೂಪಿಸುವಲ್ಲಿ ಮತ್ತು ಅಳವಡಿಸಿಕೊಳ್ಳುವಲ್ಲಿ ತುಂಬಾ ಪ್ರಬಲರು. ದುಬಾರಿ ಹವ್ಯಾಸಗಳನ್ನು ಹೊಂದಿರುತ್ತಾರೆ.ಇದರ ಹೊರತಾಗಿಯೂ,ಈರಾಶಿಯವರು ಉತ್ತಮ ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತಾರೆ.ವೃಷಭ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಯಾವಾಗಲೂ ಉತ್ತಮವಾಗಿರುತ್ತದೆ.ಜ್ಯೋತಿಷ್ಯದ ಪ್ರಕಾರ,ಅವರಿಗೆ ಹಣದ ಬಗ್ಗೆ ಯಾವುದೇ ಟೆನ್ಶನ್ ಇರುವುದಿಲ್ಲ.
(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Channel- bit.ly/46lENGm
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.