ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿಡಿ ಸಾಕು ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರುತ್ತದೆ..ಅಷ್ಟೈಶರ್ಯ ಹರಿದು ಬರುತ್ತದೆ!

VASTU TIPS: ಕೆಲವರು ಯಾವಾಗಲೂ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಎಷ್ಟೇ ದುಡಿದರೂ ತಿಂಗಳಾಂತ್ಯದಲ್ಲಿ ಸಾಲದ ಸುಳಿಗೆ ಸಿಲುಕುತ್ತಾರೆ. ನೀವು ಸಹ ಇಂತಹದ್ದೆ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಾ? ಇದಕ್ಕೆ ಪರಿಹಾರ ಇದೆ, ಲಕ್ಷ್ಮಿಯನ್ನು ನಿಮ್ಮತ್ತ ಎಳೆಯಲು ಈ ಯಾವುದೇ ಜಪ ತಪ ಬೇಡ, ಮನೆಯಲ್ಲಿ ಈ ವಸ್ತುಗಳನ್ನು ಮನೆಯಲ್ಲಿಡಿ ಸಾಕು ಅಷ್ಟೈಶರ್ಯ ನಿಮ್ಮ ಮನೆಯ ಬಾಗಿಲನ್ನು ಹುಡುಕುತ್ತಾ ಬರುತ್ತದೆ.

1 /7

VASTU TIPS: ಕೆಲವರು ಯಾವಾಗಲೂ ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಎಷ್ಟೇ ದುಡಿದರೂ ತಿಂಗಳಾಂತ್ಯದಲ್ಲಿ ಸಾಲದ ಸುಳಿಗೆ ಸಿಲುಕುತ್ತಾರೆ. ನೀವು ಸಹ ಇಂತಹದ್ದೆ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಾ? ಇದಕ್ಕೆ ಪರಿಹಾರ ಇದೆ, ಲಕ್ಷ್ಮಿಯನ್ನು ನಿಮ್ಮತ್ತ ಎಳೆಯಲು ಈ ಯಾವುದೇ ಜಪ ತಪ ಬೇಡ, ಮನೆಯಲ್ಲಿ ಈ ವಸ್ತುಗಳನ್ನು ಮನೆಯಲ್ಲಿಡಿ ಸಾಕು ಅಷ್ಟೈಶರ್ಯ ನಿಮ್ಮ ಮನೆಯ ಬಾಗಿಲನ್ನು ಹುಡುಕುತ್ತಾ ಬರುತ್ತದೆ.

2 /7

ಪ್ರತಿಯೊಬ್ಬರೂ ಉತ್ತಮ ಹಣವನ್ನು ಗಳಿಸಲು ಬಯಸುತ್ತಾರೆ. ಅದಕ್ಕಾಗಿಯೇ ಎಲ್ಲರೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ, ಕೆಲವರಿಗೆ ಎಷ್ಟೇ ಹಣ ಸಂಪಾದನೆ ಮಾಡಿದರೂ ಏನೂ ಉಳಿಯುವುದಿಲ್ಲ. ವಾಸ್ತು ಪ್ರಕಾರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು.. ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಸಂಪತ್ತಿಗೆ ಕೊರತೆಯಾಗುವುದಿಲ್ಲ ಎನ್ನುತ್ತಾರೆ ವಾಸ್ತು ಪಂಡಿತರು.

3 /7

ಪಿರಮಿಡ್  ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಿರಮಿಡ್ ಇರುವುದು ತುಂಬಾ ಒಳ್ಳೆಯದು. ಮನೆಯಲ್ಲಿ ಪಿರಮಿಡ್ ಇಡುವುದರಿಂದ ಕುಟುಂಬದ ಸದಸ್ಯರ ಆದಾಯ ಹೆಚ್ಚಾಗುತ್ತದೆ. ಮನೆಯಲ್ಲಿ ಪಿರಮಿಡ್ ಇರುವುದರಿಂದ ಕುಟುಂಬದ ಸದಸ್ಯರು ಆರೋಗ್ಯ ಮತ್ತು ಸಂತೋಷದಿಂದ ಇರುತ್ತಾರೆ ಎಂದು ವಾಸ್ತು ಪಂಡಿತರು ಹೇಳುತ್ತಾರೆ.  ವಾಸ್ತು ನಿಯಮಗಳ ಪ್ರಕಾರ, ಮನೆಯಲ್ಲಿ ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದಿಂದ ಮಾಡಿದ ಪಿರಮಿಡ್‌ಗಳನ್ನು ಹೊಂದಿರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.  ಪಿರಮಿಡ್ ಅನ್ನು ಯಾವಾಗಲೂ ಮನೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು ಇದರಿಂದ ಐಶ್ವರ್ಯ ಹೆಚ್ಚಾಗುತ್ತದೆ.

4 /7

ಪಾಂಡೆಮುಖ ಆಂಜನೇಯ ಸ್ವಾಮಿ ವಾಸ್ತು ಪ್ರಕಾರ ಮನೆಯಲ್ಲಿ ಪಂಚಮುಖ ಆಂಜನೇಯ ಸ್ವಾಮಿಯ ಚಿತ್ರವಿದ್ದರೆ ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ. ಈ ಫೋಟೋ ಇರುವುದರಿಂದ ಆ ಮನೆಯಲ್ಲಿ ಯಾವತ್ತೂ ಐಶ್ವರ್ಯಕ್ಕೆ ಕೊರತೆಯಾಗುವುದಿಲ್ಲ ಎನ್ನಲಾಗಿದೆ. ಹಾಗಾಗಿ ಪ್ರತಿಯೊಬ್ಬರು ಮನೆಯಲ್ಲಿ ಪಂಚಮುಖ ಆಂಜನೇಯ ಸ್ವಾಮಿಯ ಭಾವಚಿತ್ರ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ.

5 /7

ಲಕ್ಷ್ಮಿ ದೇವಿ ಮನೆಯಲ್ಲಿ ಕುಟುಂಬದ ಸದಸ್ಯರ ನಡುವೆ ಯಾವುದೇ ಜಗಳಗಳು ಮತ್ತು ಹಣಕಾಸಿನ ತೊಂದರೆಗಳನ್ನು ತಪ್ಪಿಸಲು, ಪದ್ಮದ ಮೇಲೆ ಕುಳಿತಿರುವ ಲಕ್ಷ್ಮಿ ದೇವಿಯ ಚಿತ್ರವನ್ನು ಪೂಜಾ ಕೋಣೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಆ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ ಎನ್ನುತ್ತಾರೆ ವಿದ್ವಾಂಸರು. 

6 /7

ಕೆಲವು ಮಹಿಳೆಯರು ರಾತ್ರಿಯಲ್ಲಿ ಅಡುಗೆಮನೆಯಲ್ಲಿ ಖಾಲಿ ಪಾತ್ರೆಗಳನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮಾಡಲೇಬಾರದು. ತೊಟ್ಟಿಗಳಲ್ಲಿ ನೀರು ಸದಾ ತುಂಬಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ .  

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.