Weekly Horoscope: ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ: ಈ ವಾರ 4 ರಾಶಿಯವರಿಗೆ ಆಸ್ತಿ ಖರೀದಿ ಯೋಗ, ಸಂಪತ್ತು ವೃದ್ಧಿ

Weekly Horoscope September 30th to October 06th: ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 22ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written by - Yashaswini V | Last Updated : Sep 30, 2024, 07:41 AM IST
  • ಈ ವಾರ ಸರ್ವಪಿತೃ ಏಕಾದಶಿ ಇರಲಿದೆ
  • ಮಹಾಲಯ ಅಮಾವಾಸ್ಯೆಯ ದಿನವೇ ಸೂರ್ಯಗ್ರಹಣವೂ ಸಂಭವಿಸಲಿದೆ.
  • ಈ ವಾರದ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
Weekly Horoscope: ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ:  ಈ ವಾರ 4 ರಾಶಿಯವರಿಗೆ ಆಸ್ತಿ ಖರೀದಿ ಯೋಗ, ಸಂಪತ್ತು ವೃದ್ಧಿ  title=

Varabhavishya in Kannada From September 30th to October 06th: ಈ ವಾರ ಮಹಾಲಯ ಅಮಾವಾಸ್ಯೆ ಸರ್ವ ಪಿತೃ ಪಕ್ಷದ ದಿನವೇ ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣ ಸಂಭವಿಸಲಿದೆ. ಈ ವಾರ ಕೆಲವು ರಾಶಿಯವರಿಗೆ ವಿದೇಶದಿಂದ ಉದ್ಯೋಗದ ಆಫರ್ ಬಂದ, ಇನ್ನೂ ಕೆಲವು ರಾಶಿಯ ಜನರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮೇಷ ರಾಶಿಯವರಿಗೆ ಈ ವಾರ ಗ್ರಹಗಳು ಅನುಕೂಲಕರವಾಗಿರುತ್ತದೆ. ಹಾಗಾಗಿ ಇಡೀ ವಾರ ಧನಾತ್ಮಕ ಫಲಗಳನ್ನು ತರಲಿದೆ. ಆದಾಯದ ಮೂಲಗ್ಲೌ ಹೆಚ್ಚಾಗಲಿದ್ದು, ಉದ್ಯೋಗದಲ್ಲಿ ನಿಮ್ಮೆಲ್ಲಾ ಪ್ರಯತ್ನಿಗಳಿಗೆ ಯಶಸ್ಸು ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಫಲಗಳನ್ನು ಅನುಭವಿಸುವಿರಿ. ವೈಯಕ್ತಿಕ ಸಮಸ್ಯೆಗಳು ಕಡಿಮೆಯಾಗಿ ಎಲ್ಲಾ ಆಯಾಮಗಳಲ್ಲೂ ಶುಭ ಫಲಗಳನ್ನು ಕಾಣುವಿರಿ. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯವರಿಗೆ ಈ ವಾರ ಹಣಕಾಸಿನ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ಯೋಜನೆಗಳನ್ನು ರೂಪಿಸಿ ಮುಂದುವರೆಯುವುದರಿಂದ ಹಣಕಾಸಿನ ಪರಿಸ್ಥಿತಿ ಹೆಚ್ಚು ಉತ್ತಮವಾಗಿರುತ್ತದೆ. ಸಂಬಂಧಿಕರಿಂದ ಆಸ್ತಿ ವ್ಯವಹಾರದಲ್ಲಿ ಶುಭ ಸುದ್ದಿಗಳನ್ನು ಕೇಳುವಿರಿ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಗಳು ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಸ್ಥಿರತೆ ಸೃಷ್ಟಿಯಾಗಿ ಕಷ್ಟ ನಷ್ಟಗಳು ಕಡಿಮೆಯಾಗಲಿವೆ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಗ್ರಹಗಳ ಹೊಂದಾಣಿಕೆಯಿಂದ ಈ ವಾರ ಮಿಥುನ ರಾಶಿಯ ಜನರಿಗೆ ಕೆಲಸ ಕಾರ್ಯಗಳಲ್ಲಿ ಪ್ರಯತ್ನಗಳು ಫಲ ನೀಡಲಿವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಅಧಿಕಾರಿಗಳಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿಗಳು ಹೆಗಲೇರಬಹುದು. ನಿರುದ್ಯೋಗಿಗಳಿವೆ ವಿದೇಶದಿಂದ ಒಳ್ಳೆಯ ಜಾಬ್ ಆಫರ್ ಬರಬಹುದು. ಹಣಕಾಸಿನ ವ್ಯವಹಾರಗಳು ನಿರೀಕ್ಷಿತ ಫಲಿತಾಂಶ ಪಡೆಯುವುದು ನೆಮ್ಮದಿಯನ್ನು ತರಲಿದೆ. ಪ್ರೀತಿ-ಪ್ರೇಮದಲ್ಲಿರುವವರು ಕುಟುಂಬಸ್ಥರೊಂದಿಗೆ ಈ ಬಗ್ಗೆ ಮಾತನಾಡುವುದನ್ನು ಪರಿಗಣಿಸಿ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಮಹಾಲಯ ಅಮಾವಾಸ್ಯೆಯ ದಿನವೇ ಸೂರ್ಯಗ್ರಹಣ ಸಂಭವಿಸುತ್ತಿರುವುದು ಈ ರಾಶಿಯಯ್ವರಿಗೆ ಆದಾಯವನ್ನು ಹೆಚ್ಚಿಸಲಿದೆ.  ವೃತ್ತಿ ಮತ್ತು ಉದ್ಯೋಗದಲ್ಲಿ ಅನುಕೂಲಕರ ಫಲಗಳನ್ನು ಅನುಭವಿಸುವಿರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ಕೆಲವು ವೈಯಕ್ತಿಕ ಸಮಸ್ಯೆಗಳು ಅನಿರೀಕ್ಷಿತವಾಗಿ ಪರಿಹಾರಗೊಳ್ಳುತ್ತವೆ. ನಿರುದ್ಯೋಗಿಗಳಿದೆ ಒಳ್ಳೆಯ ಉದ್ಯೋಗಾವಕಾಶಗಳು ಸಿಗಬಹುದು. ಕೌಟುಂಬಿಕ ವಿಚಾರದಲ್ಲಿ ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ವಿದೇಶದಲ್ಲಿರುವ ಮಕ್ಕಳಿಂದ ಶುಭ ವಾರ್ತೆ ಕೇಳಬಹುದು. 

ಇದನ್ನೂ ಓದಿ- ಪಿತೃ ಪಕ್ಷದಲ್ಲಿ ಸೂರ್ಯಗ್ರಹಣ: ನಿಮ್ಮ ರಾಶಿಗನುಗುಣವಾಗಿ ಇವುಗಳನ್ನು ದಾನ ಮಾಡಿದ್ರೆ ಶುಭ! 

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸರ್ವಪಿತೃ ಪಕ್ಷದ ದಿನವೇ ಸೂರ್ಯಗ್ರಹಣ ಸಿಂಹ ರಾಶಿಯವರಿಗೆ ಸ್ವಲ್ಪ ಪ್ರಯತ್ನದಿಂದ ಆದಾಯವು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ಆದರೆ, ಭವಿಷ್ಯದ ದೃಷ್ಟಿಯಿಂದ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಉತ್ತಮ. ಪ್ರತಿಯೊಂದು ಪ್ರಮುಖ ವಿಷಯದಲ್ಲೂ ಎಚ್ಚರಿಕೆಯಿಂದ ಮುಂದುವರೆಯಿರಿ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯವರು ಈ ವಾರ ಇಡೀ ಒಳ್ಳೆಯ ಫಲಗಳನ್ನು ಅನುಭವಿಸುವಿರಿ. ಸ್ವಲ್ಪ ಪ್ರಯತ್ನಪಟ್ಟರೂ ಕೂಡ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚುವರಿ ಆದಾಯದಿಂದ ವೈಯಕ್ತಿಕ ಸಮಸ್ಯೆಗಳು ಕೂಡ ಬಗೆಹರಿದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವಿರಿ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಉದ್ಯೋಗದಲ್ಲಿ ಕೆಲಸದ ಹೊರೆ ಹೆಚ್ಚಾಗುವುದರಿಂದ ಒತ್ತಡಭರಿತವಾದ ವಾರ. ಆದಾಗ್ಯೂ, ದಿಢೀರ್ ಧನಲಾಭದಿಂದ ಸಂತೋಷವಾಗಿರುವಿರಿ. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ಈ ವಾರ ಸರ್ವತೋಮುಖ ಬೆಳವಣಿಗೆಯನು ಕಾಣುವಿರಿ. ಹೆಚ್ಚಿನ ಆದಾಯ ಗಳಿಸುವ ನಿಮ್ಮ ಪ್ರಯತ್ನಗಳಿಗೆ ನಿರೀಕ್ಷಿತ ಫಲಿತಾಂಶಗಳು ದೊರೆಯಲಿವೆ. ಸಕಾರಾತ್ಮಕವಾಗಿ ಯಾವುದೇ ವಿಚಾರದಲ್ಲಿ ಮುಂದುವರೆದರೂ ಪ್ರಯತ್ನಗಳು ಒಳ್ಳೆಯ ಫಲಗಳನ್ನು ತರಲಿವೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸುವಿರಿ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಚಿಂತನಾಶೀಲರಾಗಿ ಮುಂದುವರೆಯುವುದು ಶುಭ.  ಹಣಕಾಸಿನ ಸಮಸ್ಯೆಗಳು ಸ್ವಲ್ಪ ಸುಧಾರಿಸುತ್ತವೆ. ವಿದ್ಯಾರ್ಥಿಗಳಿಗೂ ಉತ್ತಮವಾದ ವಾರ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ಮಹಾಲಯ ಅಮಾವಾಸ್ಯೆಯ ದಿನವೇ ಸಂಭವಿಸುತ್ತಿರುವ ಸೂರ್ಯಗ್ರಹಣವು ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಸಮಸ್ಯೆಗಳು, ಒತ್ತಡಗಳು ಮತ್ತು ತೊಂದರೆಗಳಿಂದ ಪರಿಹಾರವನ್ನು ನೀಡಲಿದೆ. ಉದ್ಯೋಗಸ್ಥರು ಸವಾಲುಗಳನ್ನು ಮೆಟ್ಟಿ ಪ್ರಗತಿ ಸಾಧಿಸುವರು. ಕೌಟುಂಬಿಕ ವ್ಯವಹಾರಗಳಲ್ಲಿ ಅನುಕೂಲತೆ ಇರಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗ ಪ್ರಾಪ್ತಿಯಾಗಲಿದ್ದು ಸಂತಸ ಹೆಚ್ಚಾಗಲಿದೆ. ಆದಾಯ ಹೆಚ್ಚಾಗಲಿದೆ. ಆರೋಗ್ಯ ಸಮಸ್ಯೆಗಳು ಕೂಡ ಬಗೆಹರಿಯುವ ವಾರ ಇದಾಗಿದೆ. 

ಇದನ್ನೂ ಓದಿ- ಈ ವಸ್ತುಗಳನ್ನು ದಿಂಬಿನ ಕೆಳಗಿಟ್ಟು ಮಲಗಿದ್ರೆ ಉತ್ತಮ ನಿದ್ರೆ ಜೊತೆಗೆ ಬೇಗನೆ ಶ್ರೀಮಂತರಾಗ್ತೀರಾ...! 

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯವರಿಗೆ ಗ್ರಹಗಳು ನಿಮ್ಮ ಪರವಾಗಿರುವುದರಿಂದ ಕೆಲಸ ಕಾರ್ಯಗಳು ವಾರ ಪೂರ್ತಿ ಸುಗಮವಾಗಿ ಸಾಗುತ್ತದೆ. ಹಣಕಾಸಿನ ಪರಿಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಲಿದೆ. ದಿನದಿಂದ ದಿನಕ್ಕೆ ಆದಾಯ ಹೆಚ್ಚಾಗುವುದರಿಂದ ಹಲವು ಸಮಸ್ಯೆಗಳು ಬಗೆಹರಿಯಲಿವೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ ಸಿಗಲಿದೆ. ಸಂಗಾತಿಯೊಂದಿಗೆ ಅನ್ಯೋನ್ಯತೆಯು ಹೆಚ್ಚಾಗಿ ದಾಂಪತ್ಯ ಜೀವನದಲ್ಲಿ ಸುಖವನ್ನು ಆನಂದಿಸುವಿರಿ. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರಿಗೆ ಈ ವಾರ ಕೇವಲ ಶ್ರಮದಿಂದ ಮಾತ್ರವಲ್ಲದೆ ಪ್ರಯತ್ನದಿಂದಲೂ ಆದಾಯ ಹೆಚ್ಚಾಗುತ್ತದೆ. ಇದರಿಂದಾಗಿ ವೃತ್ತಿ-ವ್ಯವಹರದಲ್ಲಿ ಪ್ರಗತಿ ಕಂಡುಬರಲಿದೆ. ಅಧಿಕಾರಿಗಳು ಕೆಲಸದಲ್ಲಿ ಹೆಚ್ಚಿನ ಆದ್ಯತೆ ನೀಡುವುದರಿಂದ ಏಳ್ಗೆಯನ್ನು ಕಾಣಬಹುದು. ಆಸ್ತಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದು.  ಬಂಧುಗಳಿಂದ ಶುಭ ಸುದ್ದಿ ಸಿಗಲಿದೆ. ಹೊಸ ಉದ್ಯೋಗ ಪ್ರಯತ್ನಗಳಿಗೆ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತದೆ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿದರೆ ಒಳ್ಳೆಯದು. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಈ ವಾರ ಕೌಟುಂಬಿಕ ಜೀವನ ಲವಲವಿಕೆಯಿಂದ ಕೂಡಿರುತ್ತದೆ. ನ್ಯಾಯಾಲಯದಲ್ಲಿರುವ ಆಸ್ತಿ ವ್ಯವಹಾರ ಪ್ರಕರಣಗಳು ಇತ್ಯರ್ಥವಾಗಲಿವೆ. ಮನೆ ಮತ್ತು ವಾಹನ ಖರೀದಿಸಲು ಯೋಚಿಸುತ್ತಿದ್ದರೆ ಈ ವಾರ ಅತ್ಯುತ್ತಮವಾಗಿದೆ. ಕೆಲವು ಸಂಬಂಧಿಕರಿಗೆ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಈ ಬಗ್ಗೆ ಜಾಗರೂಕರಗಿರಿ. ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭವು ಸ್ಥಿರವಾಗಿರುತ್ತದೆ. ಅವಿವಾಹಿತರು ಮದುವೆ ವಿಚಾರದಲ್ಲಿ ಮುಂದುವರೆಯಬಹುದು. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರಿಗೆ ಈ ವಾರ ಪೋಷಕರ ಮಧ್ಯಸ್ಥಿಕೆಯಿಂದ ಆಸ್ತಿ ವಿವಾದಗಳು ಬಗೆ ಹರಿಯಲಿದೆ.  ನಿರುದ್ಯೋಗಿಗಳಿಗೆ ವಿದೇಶದಿಂದ ಜಾಬ್ ಆಫರ್ ಬರಬಹುದು. ಹಣಕಾಸಿನ ಸ್ಥಿತಿ ಆಶಾದಾಯಕವಾಗಿರಲಿದೆ. ಆದಾಯ ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿಗಳು ಸುಧಾರಿಸಲಿದೆ. ಉದ್ಯೋಗಸ್ಥರಿಗೆ ನೀವು ಮಾಡುವ ಕೆಲಸಕ್ಕೆ ಮನ್ನಣೆ ದೊರೆಯಲಿದೆ. ಸಂಬಂಧಿಕರೊಂದಿಗೆ ಸೌಹಾರ್ದತೆ ಹೆಚ್ಚುತ್ತದೆ. ಪ್ರೀತಿಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಕೋಪದ ಕೈಗೆ ಬುದ್ದಿ ನೀಡಿವುದನ್ನು ತಪ್ಪಿಸಿದರೆ ಒಳಿತು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News