Pawan Kalyan on Sanatan Dharma : ಆಂಧ್ರಪ್ರದೇಶದ ತಿರುಪತಿಯಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವ ಲಡ್ಡುವಿನಲ್ಲಿ ಹಸುವಿನ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ಸುದ್ದಿ ದೊಡ್ಡ ವಿವಾಧ ಸೃಷ್ಠಿಸಿತ್ತು.. ಇದನ್ನು ವಿವಿಧ ಪಕ್ಷಗಳು ಖಂಡಿಸಿವೆ. ಇದಕ್ಕಾಗಿ ನಟ ಹಾಗೂ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಉಪವಾಸ ವ್ರತ ಆಚರಿಸಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಳಿಕ ನಿನ್ನೆ ತಿರುಪತಿಯಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು. ಈ ಸಾರ್ವಜನಿಕ ಸಭೆಯಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ಪರೋಕ್ಷವಾಗಿ ಗುಡುಗಿದರು..
ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಅವರು ʼನಾನು ತಮಿಳಿನಲ್ಲಿ ಮಾತನಾಡುತ್ತಿದ್ದೇನೆ ಏಕೆಂದರೆ ಇಲ್ಲಿ ಸಾಕಷ್ಟು ತಮಿಳು ಜನರು ಇದ್ದಾರೆ. ತಮಿಳುನಾಡಿನ ಯುವ ನಾಯಕರೊಬ್ಬರು ಸನಾತನಂ ಧರ್ಮವನ್ನು ನಾಶ ಮಾಡಬೇಕು ಹೇಳಿಕೆ ನೀಡಿದ್ದರು.. ನೆನಪಿಡಿ. ಇದನ್ನು ಯಾರು ಹೇಳಿದರೂ ಹೇಳಲಿ. ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ನಾಶ ಮಾಡಲು ಯತ್ನಿಸಿದರೆ ನೀವೇ ನಾಶವಾಗುವಿರಿ. ಏಳು ಬೆಟ್ಟದ ಒಡೆಯನ ಪಾದ ಸ್ಪರ್ಷಿಸಿದ ಸ್ಥಳದಿಂದ ಈ ಮಾತನ್ನು ನಾನು ನಿಮಗೆ ಹೇಳುತ್ತೇನೆ. ನಿಮ್ಮಂತೆ ಅನೇಕರು ಬಂದು ಹೋಗಿದ್ದಾರೆ. ಆದರೆ ಸನಾತನ ಧರ್ಮ ಹಾಗೆಯೇ ಉಳಿದಿದೆ'' ಎಂದು ಪವನ್ ಕಲ್ಯಾಣ್ ಪರೋಕ್ಷವಾಗಿ ಉದಯನಿಧಿ ಅವರನ್ನು ಟೀಕಿಸಿದರು.
ಮುಂದುವರಿದು ಮಾತನಾಡಿದ ಅವರು, “ಭಾರತದ ಎಲ್ಲಾ ದೇವಾಲಯಗಳಲ್ಲಿ ನೀಡುವ ನೈವೇದ್ಯದಲ್ಲಿ ಬಳಸುವ ವಸ್ತುಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸನಾತನ ಧರ್ಮ ಪ್ರಮಾಣೀಕರಣವನ್ನು ಜಾರಿಗೊಳಿಸಬೇಕು. ಈ ಪ್ರಮಾಣಪತ್ರವು ದೇವಾಲಯದ ಆಚರಣೆಗಳ ಪವಿತ್ರತೆಯನ್ನು ಕಾಪಾಡುತ್ತದೆ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಸಂರಕ್ಷಿಸುತ್ತದೆ ಎಂದರು..
ಅಲ್ಲದೆ, ಸನಾತನ ಧರ್ಮದ ತತ್ವಗಳನ್ನು ರಕ್ಷಿಸಲು ಮತ್ತು ದೇಶಾದ್ಯಂತ ಅದರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸನಾತನ ಧರ್ಮ ಸಂರಕ್ಷಣಾ ಮಂಡಳಿಯನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಾಪಿಸಬೇಕು. ಸನಾತನ ಧರ್ಮವನ್ನು ರಕ್ಷಿಸಲು ಮತ್ತು ಅದರ ನಂಬಿಕೆಗಳಿಗೆ ಹಾನಿಕಾರಕ ಕೃತ್ಯಗಳನ್ನು ತಡೆಯಲು ಬಲವಾದ ರಾಷ್ಟ್ರೀಯ ಕಾನೂನು ಅಗತ್ಯವಿದೆ ಎಂದು ಒತ್ತಾಯಿಸಿದರು..
ಈ ಕಾನೂನನ್ನು ಕೂಡಲೇ ಜಾರಿಗೊಳಿಸಿ ದೇಶಾದ್ಯಂತ ಏಕರೂಪವಾಗಿ ಜಾರಿಗೆ ತರಬೇಕು. ಈ ಕಾಯಿದೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಈ ಮಂಡಳಿ ಮತ್ತು ಅದರ ಚಟುವಟಿಕೆಗಳನ್ನು ಬೆಂಬಲಿಸಲು ವಾರ್ಷಿಕ ನಿಧಿಯನ್ನು ನಿಗದಿಪಡಿಸಬೇಕು ಎಂದು ಡಿಸಿಎಂ ಪವನ್ ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.