India lockdown: ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದು ಹೇಗೆ?

ಕೊರೊನಾ ವೈರಸ್ ಭೀತಿಯ ಹಿನ್ನೆಲೆ ದೇಶಾದ್ಯಂತ ಸುಮಾರು 97 ಪಟ್ಟಣಗಳನ್ನು ಲಾಕ್ ಡೌನ್ ಮಾಡಲಾಗಿದೆ. ಕೇವಲ ಅತ್ಯಾವಶ್ಯಕ ವಸ್ತುಗಳನ್ನು ಮಾತ್ರ ಹೊರತುಪಡಿಸಲಾಗಿದೆ. ಇವುಗಳಲ್ಲಿ ಬ್ಯಾಂಕ್ ಸೇವೆ ಕೂಡ ಒಂದಾಗಿದೆ. ಆದರೆ ಲಾಕ್ ಡೌನ್ ಸ್ಥಿತಿಯಲ್ಲಿ ಬ್ಯಾಂಕಿಂಗ್ ಸೇವೆ ಹೇಗಿರಲಿದೆ.

Last Updated : Mar 23, 2020, 03:04 PM IST
India lockdown: ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದು ಹೇಗೆ? title=

ಕೊರೊನಾ ವೈರಸ್ ನಿಂದ ದೇಶಾದ್ಯಂತ ಪಸರಿಸುತ್ತಿರುವ ಭೀತಿಯ ಹಿನ್ನೆಲೆ ದೇಶದ ಬಹುತೇಕ ರಾಜ್ಯಗಳು ಸದ್ಯ ಹೈ ಅಲರ್ಟ್ ಮೇಲಿವೆ. 10ಕ್ಕೂ ಅಧಿಕ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಮಾರ್ಚ್ 31ರವರೆಗೆ ದೇಶದ ಸುಮಾರು 75 ದೊಡ್ಡ ಪಟ್ಟಣಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಕೇವಲ ಅತ್ಯಾವಶ್ಯಕ ವಸ್ತುಗಳನ್ನು ಲಾಕ್ ಡೌನ್ ನಿಂದ ಹೊರತುಪಡಿಸಲಾಗಿದೆ. ಇವುಗಳಲ್ಲಿ ಬ್ಯಾಂಕಿಂಗ್ ಸೇವೆ ಕೂಡ ಶಾಮೀಲಾಗಿದೆ. ಆದರೆ ಲಾಕ್ ಡೌನ್ ಸ್ಥಿತಿಯಲ್ಲಿ ಬ್ಯಾಂಕಿಂಗ್ ಸೇವೆ ಹೇಗಿರಲಿದೆ? ವಿಪತ್ತಿನ ಪರಿಸ್ಥಿತಿಯಲ್ಲಿ ಒಂದು ವೇಳೆ ನಿಮಗೆ ಹಣಕಾಸಿನ ಅವಶ್ಯಕತೆ ಎದುರಾದರೆ ನೀವು ಏನು ಮಾಡುವಿರಿ. ಈ ವೇಳೆ ನಿಮ್ಮ ಬ್ಯಾಂಕ್ ನಿಮಗೆ ನಿಮ್ಮ ಮನೆಬಾಗಿಲಿಗೆ ನಿಮ್ಮ ಹಣ ತಲುಪಿಸಲಿದೆ. ಭಾರತೀಯ ಸ್ಟೇಟ್ ಬ್ಯಾಂಕ್, ICICI ಬ್ಯಾಂಕ್, HDFC ಬ್ಯಾಂಕ್, AXIS ಬ್ಯಾಂಕ್ ಹಾಗೂ ಕೊಟಕ್ ಮಹಿಂದ್ರಾಗಳಂತಹ ಅನೇಕ ಬ್ಯಾಂಕ್ ಗಳು ತಮ್ಮ ತಮ್ಮ ಗ್ರಾಹಕರಿಗೆ ಈ ಸೌಲಭ್ಯ ಒದಗಿಸುತ್ತವೆ.

SBI ನೀಡುತ್ತದೆ ಈ ಸೇವೆ 
ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಖಾತೆದಾರರಿಗೆ ಕ್ಯಾಶ್ ಆನ್ ಡಿಮಾಂಡ್ ಸೌಕರ್ಯ ಒದಗಿಸುತ್ತದೆ. ಡೋರ್ ಸ್ಟೆಪ್ ಡಿಲೆವರಿ ಅಡಿ ಬ್ಯಾಂಕ್ ತನ್ನ ಗ್ರಾಹಕರ ಮನೆ ಬಾಗಿಲಿಗೆ ಈ ಸೇವೆ ತಲುಪಿಸುತ್ತದೆ. ಒಂದು ವೇಳೆ ನೀವು ನಿಮ್ಮ ಹಣ ಡಿಪಾಸಿಟ್ ಮಾಡಲು ಸಹ ಬಯಸಿದರೆ ಈ ಸೌಕರ್ಯ ಕೂಡ ಲಭ್ಯವಿರಲಿದೆ. ಆದರೆ, ಈ ಸೇವೆ ಕೇವಲ ಹಿರಿಯ ನಾಗರಿಕರು, ದಿವ್ಯಾಂಗ ಅಥವಾ ವಿಶೇಷ ನೊಂದಾಯಿತ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಆದರೆ, ತುರ್ತು ಪರಿಸ್ಥಿತಿ, ಮೆಡಿಕಲ್ ಎಮರ್ಜೆನ್ಸಿ ಪರಿಸ್ಥಿತಿಗಳಲ್ಲಿ ಈ ಸೇವೆಯ ಲಾಭವನ್ನು ಬ್ಯಾಂಕ್ ನ ಯಾವುದೇ ಗ್ರಾಹಕರು ಪಡೆಯಬಹುದು.ಆದರೆ, ಇದಕ್ಕಾಗಿ ನೀವು ರೂ.100 ಶುಲ್ಕ ಪಾವತಿಸಬೇಕು.

HDFC ಕೂಡ ನೀಡುತ್ತದೆ ಈ ಸೇವೆ 
ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ HDFC ಬ್ಯಾಂಕ್ ಕೂಡ ಕ್ಯಾಶ್ ಆನ್ ಡಿಮಾಂಡ್ ಸೌಕರ್ಯ ಒದಗಿಸುತ್ತದೆ. ಈ ಸೇವೆಯ ಅಡಿ ಬ್ಯಾಂಕ್ ಮನೆ ಬಾಗಿಲಿಗೆ ನಿಮ್ಮ ಹಣ ನಿಮಗೆ ತಲುಪಿಸುತ್ತದೆ. ಆದರೆ, ಇದರ ಅಡಿ ನೀವು ಕೇವಲ 5 ರಿಂದ 25 ಸಾವಿರ ರೂ. ಹಣ ಮಾತ್ರ ಪಡೆಯಬಹುದಾಗಿದೆ. ಇದಕ್ಕಾಗಿ ಬ್ಯಾಂಕ್ ನಿಮ್ಮ ಬಳಿಯಿಂದ ರೂ.100 ರಿಂದ ರೂ.200 ಶುಲ್ಕ ಪಡೆದುಕೊಳ್ಳುತ್ತದೆ. AXIS ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳೂ ಕೂಡ ಕೆಲ ಶರತ್ತುಗಳ ಅಡಿ ಇಂತಹ ಸೇವೆ ಒದಗಿಸುತ್ತವೆ. ಬ್ಯಾಂಕ್ ಆಪ್ ಬಳಸಿ ನೀವು ಈ ಸೇವೆಯ ಲಾಭ ಪಡೆಯಬಹುದಾಗಿದೆ.

ICICI ನಿಂದ ಹಣ ಹೀಗೆ ತರಿಸಿಕೊಳ್ಳಬಹುದು
ICICI ಬ್ಯಾಂಕ್ ಕೂಡ ಮನೆಗೆ ಕ್ಯಾಶ್ ಡಿಲೆವರಿ ಸೌಲಭ್ಯ ಒದಗಿಸುತ್ತದೆ. ಇದಕ್ಕಾಗಿ ಬ್ಯಾಂಕ್ ನ ವೆಬ್ಸೈಟ್ ಮೇಲೆ ನೆಡಲಾಗಿರುವ Bank@homeservice ಲಿಂಕ್ ಮೇಲೆ ಕ್ಲಿಕ್ಕಿಸಬೇಕು. ಕಸ್ಟಮರ್ ಕೇರ್ ಸರ್ವಿಸ್ ಗೂ ಕಾಲ್ ಮಾಡಿ ನೀವು ಈ ಸೇವೆಯ ಲಾಭ ಪಡೆಯಬಹುದು. ನಗದು ಹಣ  ಪಡೆಯಲು ಬೆಳಗ್ಗೆ 9 ರಿಂದ 2 ಗಂಟೆಯವರೆಗೆ ಅಪ್ಲೈ ಮಾಡಬಹುದು. ಕೇವಲ ಎರಡೇ ಗಂಟೆಗಳಲ್ಲಿ ನಿಮ್ಮ ಹಣ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ. ICICI ಇದರ ಮಿತಿಯನ್ನು 2 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ನಿಗದಿಪಡಿಸಿದೆ. ಆದರೆ, ಈ ಸೇವೆಗೆ ನೀವು ಪ್ರತ್ಯೇಕ ಶುಲ್ಕ ಪಾವತಿಸಬೇಕು. ಇದಕ್ಕಾಗಿ ನೀವು ಪ್ರತ್ಯೇಕ ರೂ.50 ಹಾಗೂ ಶೇ.18ರಷ್ಟು ಸೇವಾ ಶುಲ್ಕ ಪಾವತಿಸಬೇಕು.

ನೀವು ಇನ್ಸ್ಟಂಟ್ ಲೋನ್ ಕೂಡ ಪಡೆಯಬಹುದು
ಎಮೆರ್ಜೆನ್ಸಿ ಸಂದರ್ಭದಲ್ಲಿ ಒಂದು ವೇಳೆ ನಿಮ್ಮ ಬಳಿ ಹಣ ಇಲ್ಲ ಎಂದಾದಲ್ಲಿ. ಬ್ಯಾಂಕ್ ಖಾತೆಯಲ್ಲಿಯೂ ಕೂಡ ಹಣ ಇಲ್ಲ ಎಂದಾದಲ್ಲಿ ನೀವು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಲೋನ್ ಪಡೆಯಬಹುದಾಗಿದೆ. ದೇಶಾದ್ಯಂತ ಹಲವು FINTECH ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕಂಪನಿಗಳು ನಿಮಗೆ ಈ ಸೇವೆ ಒದಗಿಸುತ್ತವೆ. ಯಾವುದೇ ಗ್ರಾಹಕರು ಈ ಕಂಪನಿಗಳಿಂದ ಕೇವಲ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ 12 ರಿಂದ 24ಗಂಟೆಗಳಲ್ಲಿ ಲೋನ್ ಪಡೆಯಬಹುದಾಗಿದೆ. ಆದರೆ ನಿಮ್ಮ ಲೋನ್ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ. ಆ ನಂತರ ಮನೆಯಲ್ಲಿಯೇ ಕುಳಿತು ನೀವು ನಿಮ್ಮ ಹಣವನ್ನು ಬ್ಯಾಂಕ್ ನಿಂದ ಪಡೆಯಬಹುದು.
 

Trending News