ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..! ಶೀಘ್ರದಲ್ಲೇ ಈ ಖ್ಯಾತ ನಟಿಯನ್ನು ಮದುವೆಯಾಗಲಿರುವ ಡಾರ್ಲಿಂಗ್!?

Prabhas Marriage: ಪ್ಯಾನ್ ಇಂಡಿಯಾ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ.. ನಟ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.. ಹಾಗಾದ್ರೆ ಯಾರೊಂದಿಗೆ? ಇಲ್ಲಿದೆ ನೋಡಿ ಉತ್ತರ..

Written by - Savita M B | Last Updated : Oct 10, 2024, 01:21 PM IST
  • ಸದ್ಯ ಪ್ರಭಾಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..
  • ಇದೀಗ ಅವರ ಅಭಿಮಾನಿಗಳೆಲ್ಲಾ ಫುಲ್ ಖುಷ್ ಆಗಿದ್ದಾರೆ.
ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..! ಶೀಘ್ರದಲ್ಲೇ ಈ ಖ್ಯಾತ ನಟಿಯನ್ನು ಮದುವೆಯಾಗಲಿರುವ ಡಾರ್ಲಿಂಗ್!?  title=

Pan India Star Prabhas: ಸದ್ಯ ಪ್ರಭಾಸ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಆದ್ರೆ, ಇಂಡಸ್ಟ್ರಿಯಲ್ಲಿ ಮೋಸ್ಟ್ ಬ್ಯಾಚುಲರ್ ಪಟ್ಟಿಯಲ್ಲಿ ಪ್ರಭಾಸ್ ಹೆಸರು ಮುಂದಿದೆ. ಏಕೆಂದರೆ ಅವನಿಗಿಂತ ಚಿಕ್ಕವರು ಈಗಾಗಲೇ ಮದುವೆಯಾಗಿದ್ದಾರೆ. ಆದರೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆಯಾಗದೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 ಇಲ್ಲಿಯವರೆಗೂ ಪ್ರಭಾಸ್ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ, ಇತ್ತೀಚೆಗಷ್ಟೇ ಮತ್ತೊಂದು ಸುದ್ದಿ ವೈರಲ್ ಆಗಿದೆ. ಮತ್ತೊಮ್ಮೆ ಪ್ರಭಾಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ಈ ಹಿಂದೆ ಕಲ್ಕಿ ಸಿನಿಮಾ ಪ್ರಮೋಷನ್‌ ಸಮಯದಲ್ಲಿ ಪ್ರಭಾಸ್ ಮದುವೆಯಾಗುವ ಬಗ್ಗೆ ನನ್ನ ಮದುವೆಯಿಂದ ನನ್ನ ಅಭಿಮಾನಿಗಳಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ ನಾನು ಮದುವೆಯಾಗುತ್ತಿಲ್ಲ ಎಂದು ತಮಾಷೆಯಾಗಿ ಹೇಳಿದ್ದರು..

ಇದನ್ನೂ ಓದಿ-ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!

 ಆದರೆ, ಪ್ರಭಾಸ್ ಅಭಿಮಾನಿಗಳ ಬಹು ನಿರೀಕ್ಷಿತ ಮದುವೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ.. ಹೌದು ಪ್ರಭಾಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ವಿಷಯವನ್ನು ಸ್ವತಃ ಡಾರ್ಲಿಂಗ್ ದೊಡ್ಡಮ್ಮ ಶ್ಯಾಮಲಾದೇವಿ ಹೇಳಿರುವುದು ಗಮನಾರ್ಹ. 

ಇದನ್ನೂ ಓದಿ-BBK 11: “ಬಿಗ್ ಬಾಸ್..." ಅಂತಾ ಪ್ರತಿದಿನ ಕಾರ್ಯಕ್ರಮದಲ್ಲಿ ಕೇಳಿ ಬರುವ ಹಿನ್ನಲೆ ಧ್ವನಿ ಯಾರದ್ದು ಗೊತ್ತಾ? ಪ್ರಖ್ಯಾತ ನಟನೇ ಆ ಗತ್ತಿನ ಧ್ವನಿಯ ʼಸರದಾರʼ

ಇತ್ತೀಚೆಗೆ ವಿಜಯವಾಡದ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಈ ವೇಳೆ ಆಕೆಗೆ ಪ್ರಭಾಸ್ ಮದುವೆ ಬಗ್ಗೆ ಪ್ರಶ್ನೆಗಳು ಬಂದಿದ್ದವು. ಮದುವೆಯ ಸಂಭ್ರಮವನ್ನು ಪ್ರಭಾಸ್ ದೊಡ್ಡಮ್ಮ ಬಿಚ್ಚಿಟ್ಟಿದ್ದಾರೆ. ಸದ್ಯದಲ್ಲೇ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ವಧು ಯಾರು, ಮದುವೆ ಯಾವಾಗ ಎಂಬ ವಿವರಗಳನ್ನು ಹೇಳದ ಪ್ರಭಾಸ್ ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಅವರ ಅಭಿಮಾನಿಗಳೆಲ್ಲಾ ಫುಲ್ ಖುಷ್ ಆಗಿದ್ದಾರೆ.

 ಸದ್ಯ ಪ್ರಭಾಸ್ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಮಾರುತಿ ನಿರ್ದೇಶನದಲ್ಲಿ ಹಾರರ್ ಮತ್ತು ಕಾಮಿಡಿ ಎಂಟರ್‌ಟೈನರ್ ಆಗಿ ತೆರೆಗೆ ಬರಲಿರುವ ಸಲಾರ್ 2, ರಾಜಾ ಸಾಬ್ ಚಿತ್ರಗಳಿವೆ. ಹನು ರಾಘವಪುಡಿ ನಿರ್ದೇಶನದಲ್ಲಿ ಫೌಜಿ ಸಿನಿಮಾ ಕೂಡ ಮಾಡಲಿದ್ದಾರೆ. ಇವುಗಳ ಜೊತೆಗೆ ಇನ್ನೂ ಕೆಲವು ಚಿತ್ರಗಳೂ ಇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News