ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!

Highest team score in Test matches: ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 4ನೇ ದಿನ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಬೆಟ್ಟದಷ್ಟು ಸ್ಕೋರ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನದ 556 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ಅನ್ನು 823/7ಕ್ಕೆ ಡಿಕ್ಲೇರ್ ಮಾಡಿಕೊಂಡಿದೆ.

Written by - Puttaraj K Alur | Last Updated : Oct 10, 2024, 05:25 PM IST
  • ಪಾಕಿಸ್ತಾನದ ವಿರುದ್ಧ ಮುಲ್ತಾನ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್‌
  • ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ದಾಖಲೆಯ ಜೊತೆಯಾಟಕ್ಕೆ ಪಾಕ್‌ ತತ್ತರ
  • ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಸೋಲಿನ ಭೀತಿಯಲ್ಲಿರುವ ಪಾಕಿಸ್ತಾನ!
ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್! title=
ಹೊಸ ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್!

Pakistan vs England, 1st Test: ಪಾಕಿಸ್ತಾನದ ನೆಲದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಕಷ್ಟು ರನ್‌ಗಳ ಮಳೆಯೇ ಹರಿದಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 149 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 556 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಪ್ರವಾಸಿ ತಂಡ ಇಂಗ್ಲೆಂಡ್ 150 ಓವರ್‌ಗಲ್ಲಿ 7 ವಿಕೆಟ್ ಕಳೆದುಕೊಂಡು 823 ರನ್ ಗಳಿಸಿ ಡಿಕ್ಲೇರ್‌ ಘೋಷಿಸಿತು.

ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್(317) ಅದ್ಭುತ ತ್ರಿಶತಕ ಬಾರಿಸಿ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದರು. ಇದಕ್ಕೂ ಮೊದಲು ಮುಲ್ತಾನ್‌ನಲ್ಲಿ ಸೆಹ್ವಾಗ್ 309 ರನ್‌ಗಳ ಇನಿಂಗ್ಸ್ ಆಡಿದ್ದರು. ಈಗ ಹ್ಯಾರಿ ಬ್ರೂಕ್ ಅವರು 317 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಇಂಗ್ಲೆಂಡ್‌ನ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Rohit Sharma: ಜೂನಿಯರ್ ಹಿಟ್‌ಮ್ಯಾನ್ ಎಂಟ್ರಿ ಫಿಕ್ಸ್?!.. ಎರಡನೇ ಬಾರಿಗೆ ತಂದೆಯಾಗಲಿರುವ ರೋಹಿತ್ ಶರ್ಮಾ!!

ಬ್ರೂಕ್ ಮತ್ತು ರೂಟ್ ಹೊಸ ಇತಿಹಾಸ!  

ಹ್ಯಾರಿ ಬ್ರೂಕ್ ಬ್ಯಾಟಿಂಗ್‌ಗೆ ಬಂದಾಗ ಇಂಗ್ಲೆಂಡ್‌ನ 3 ವಿಕೆಟ್‌ಗಳು 249 ರನ್‌ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು. ನಂತರ ಬ್ರೂಕ್ ರೂಟ್ ಅವರೊಂದಿಗೆ 4ನೇ ವಿಕೆಟ್‌ಗೆ 454 ರನ್‌ಗಳ ದಾಖಲೆಯ ಜೊತೆಯಾಟವನ್ನಾಡಿದರು. ಪರಿಣಾಮ ಆಂಗ್ಲರು ಬೃಹತ್‌ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಬ್ರೂಕ್ ತ್ರಿಶತಕ ಗಳಿಸಿದರೆ, ರೂಟ್ ಅದ್ಭುತ ದ್ವಿಶತಕ ಗಳಿಸಿದರು. ರೂಟ್ 262 ರನ್ ಗಳಿಸಿ ಪೆವಿಲಿಯನ್‌ ಸೇರಿದರು. ಈ ಮೂಲಕ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 823/7 ಸ್ಕೋರ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ತಂಡ 66 ವರ್ಷಗಳ ಹಳೆಯ ದಾಖಲೆಯನ್ನು ಧೂಳಿಪಟ ಮಾಡಿದೆ.

ವಾಸ್ತವವಾಗಿ ಇಂಗ್ಲೆಂಡ್ ತಂಡದ ಈ ಸ್ಕೋರ್ 66 ವರ್ಷಗಳ ನಂತರ ಟೆಸ್ಟ್‌ನಲ್ಲಿ ಮಾಡಿದ ಅತಿದೊಡ್ಡ ಸ್ಕೋರ್ ಆಗಿದೆ. ಇದಕ್ಕೂ ಮೊದಲು 1958ರಲ್ಲಿ ಕಿಂಗ್‌ಸ್ಟನ್‌ನಲ್ಲಿ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್ 790/3 ರನ್‌ಗಳ ಸ್ಕೋರ್‌ನಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಮೂರು ಬಾರಿ 800ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿರುವ ವಿಶ್ವದ ಏಕೈಕ ತಂಡ ಇಂಗ್ಲೆಂಡ್ ಆಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 2 ತಂಡಗಳು ಮಾತ್ರ 900ಕ್ಕೂ ಹೆಚ್ಚು ರನ್ ಗಳಿಸಲು ಶಕ್ತವಾಗಿವೆ. ಇದರಲ್ಲಿ ಶ್ರೀಲಂಕಾ ಮೊದಲ ಸ್ಥಾನದಲ್ಲಿದ್ದು, ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ. 

ಟೆಸ್ಟ್ ಪಂದ್ಯಗಳಲ್ಲಿ ತಂಡದ ಗರಿಷ್ಠ ಸ್ಕೋರ್

952/6- ಭಾರತದ ವಿರುದ್ಧ ಶ್ರೀಲಂಕಾ, ಕೊಲಂಬೊ (RPS), 1997
903/7- ಆಸ್ಟ್ರೇಲಿಯಾದ ವಿರುದ್ಧ ಇಂಗ್ಲೆಂಡ್, ಓವಲ್, 1938
849-  ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್, ಕಿಂಗ್ಸ್ಟನ್, 1930
823/7- ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್, ಮುಲ್ತಾನ್, 2024
790/3- ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್, ಕಿಂಗ್ಸ್ಟನ್, 1958
765/6- ಶ್ರೀಲಂಕಾದ ವಿರುದ್ಧ ಪಾಕಿಸ್ತಾನ, ಕರಾಚಿ, 2009

ಇದನ್ನೂ ಓದಿ: ತೀರಿಸಲಾಗದ ಋಣ... ಭಾರತೀಯ ಕ್ರಿಕೆಟ್‌ ಲೋಕಕ್ಕೆ ರತನ್‌ ಟಾಟಾ ಕೊಡುಗೆ ಒಂದಾ... ಎರಡಾ? ಈ ಕ್ರಿಕೆಟಿಗರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ರತನ್‌ ಅವರಿಂದ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News