ಒಂದೇ ಓವರ್‌ನಲ್ಲಿ 4 ವಿಕೆಟ್‌... ಸಿರಾಜ್‌ ವಿಶ್ವದಾಖಲೆಯ ಅಬ್ಬರಕ್ಕೆ ಕ್ರಿಕೆಟ್‌ ಲೋಕವೇ ತಬ್ಬಿಬ್ಬು! ಈ ದಿಗ್ಗಜನ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌ ವೇಗಿ

Mohammad Siraj World Record: ಏಷ್ಯಾ ಕಪ್ 2023ರ ಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಕಿಲ್ಲಿಂಗ್‌ ಬೌಲಿಂಗ್ ಅಬ್ಬರ ಎಷ್ಟಿತ್ತೆಂದರೆ, ಅತ್ತ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಅಳುವುದೊಂದೇ ಬಾಕಿ ಎಂಬಂತಿತ್ತು.

Written by - Bhavishya Shetty | Last Updated : Oct 10, 2024, 09:09 PM IST
    • ಕ್ರಿಕೆಟ್ ಆಟದಲ್ಲಿ ಹ್ಯಾಟ್ರಿಕ್ ವಿಕೆಟ್‌ ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ
    • ಕೆಲವೇ ಕೆಲವು ಬೌಲರ್‌ಗಳು ಮಾತ್ರ ಈ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ
    • ಏಷ್ಯಾಕಪ್‌ನಲ್ಲಿ ಸಿರಾಜ್‌ ಶ್ರೀಲಂಕಾ ತಂಡದ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು
ಒಂದೇ ಓವರ್‌ನಲ್ಲಿ 4 ವಿಕೆಟ್‌... ಸಿರಾಜ್‌ ವಿಶ್ವದಾಖಲೆಯ ಅಬ್ಬರಕ್ಕೆ ಕ್ರಿಕೆಟ್‌ ಲೋಕವೇ ತಬ್ಬಿಬ್ಬು! ಈ ದಿಗ್ಗಜನ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌ ವೇಗಿ title=
Mohammad Siraj

Unique Cricket Records: ಕ್ರಿಕೆಟ್ ಆಟದಲ್ಲಿ ಹ್ಯಾಟ್ರಿಕ್ ವಿಕೆಟ್‌ ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ. ಆದರೆ ಇಲ್ಲಿಯವರೆಗೆ ಇತಿಹಾಸದಲ್ಲಿ ಕೆಲವೇ ಕೆಲವು ಬೌಲರ್‌ಗಳು ಮಾತ್ರ ಈ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಬ್ಬರು ಮೊಹಮ್ಮದ್‌ ಸಿರಾಜ್.‌ 2023ರ ಏಷ್ಯಾಕಪ್‌ನಲ್ಲಿ ಸಿರಾಜ್‌ ಶ್ರೀಲಂಕಾ ತಂಡದ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.

ಇದನ್ನೂ ಓದಿ: ಅಂದು ಥೂ..! ಕರಾಬ್‌ ಲುಕ್‌ ಗುರು.. ಅಂದವರು ಇಂದು ಪ್ಲೀಸ್‌.. ಪ್ಲೀಸ್‌ ಒಂದು ಸೆಲ್ಫಿ ಅಂತ ಈಕೆ ಹಿಂದೆ ಬಿದ್ದಿದ್ದಾರೆ..!

ಏಷ್ಯಾ ಕಪ್ 2023ರ ಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಕಿಲ್ಲಿಂಗ್‌ ಬೌಲಿಂಗ್ ಅಬ್ಬರ ಎಷ್ಟಿತ್ತೆಂದರೆ, ಅತ್ತ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಅಳುವುದೊಂದೇ ಬಾಕಿ ಎಂಬಂತಿತ್ತು. ಅಂದು ಸಿರಾಜ್ 7 ಓವರ್‌ಗಳಲ್ಲಿ 21 ರನ್ ನೀಡಿ 6 ವಿಕೆಟ್ ಪಡೆದಿದ್ದರು.  6 ವಿಕೆಟ್‌ಗಳ ಸಾಧನೆ ಸಾಮಾನ್ಯ ವಿಷಯಲ್ಲ. ಆದರೆ ಅದಕ್ಕೂ ಮುನ್ನ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದರು ಎಂಬುದು ಗಮನಾರ್ಹ ವಿಷಯ.

ಇದನ್ನೂ ಓದಿ: ನವರಾತ್ರಿಯ ಪ್ರಯುಕ್ತ ಮನರಂಜನೆಯ ಹೂರಣವನ್ನು ಹೊತ್ತು ಬರ್ತಿದೆ "ಸುವರ್ಣ ದಸರಾ ದರ್ಬಾರ್"..!

2003ರಲ್ಲಿ ಶ್ರೀಲಂಕಾದ ಬೌಲರ್ ಚಮಿಂದಾ ವಾಸ್ ಬಾಂಗ್ಲಾದೇಶ ವಿರುದ್ಧ ಇದೇ ರೀತಿಯ ಸಂಚಲನ ಮೂಡಿಸಿದ್ದರು. ಅವರು ಕೂಡ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸುವ ಮೂಲಕ ತಲ್ಲಣಗೊಳಿಸಿದರು. ಆದರೆ ಏಷ್ಯಾಕಪ್ ಫೈನಲ್‌ನಲ್ಲಿ ಈ ಸಾಧನೆ ಮಾಡುವ ಮೂಲಕ ಸಿರಾಜ್ ಶ್ರೀಲಂಕಾವನ್ನು ಬೆಂಡೆತ್ತಿದ್ದರು. ಒಂದೇ ಓವರ್‌ನಲ್ಲಿ 4 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News