ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಮೂರು ದಿನದ ಕಲೆಕ್ಷನ್‌ ಎಷ್ಟು ?

Martin Box Office Collection: ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ರಿಲೀಸ್ ಆಗಿ ಮೂರು ದಿನಗಳಾಗಿದೆ. ಮಾರ್ಟಿನ್‌ ಸಿನಿಮಾ ವೀಕ್ಷಿಸಿದವರೆಲ್ಲ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ.

Written by - Chetana Devarmani | Last Updated : Oct 15, 2024, 11:09 AM IST
  • ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ
  • ಮಾರ್ಟಿನ್‌ ರಿಲೀಸ್ ಆಗಿ ಮೂರು ದಿನಗಳಾಗಿದೆ
  • ಬಾಕ್ಸ್‌ ಆಫಿಸ್‌ನಲ್ಲಿ ಮಾರ್ಟಿನ್‌ ಕಮಾಲ್‌ ಹೇಗಿದೆ?
ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಮೂರು ದಿನದ ಕಲೆಕ್ಷನ್‌ ಎಷ್ಟು ? title=

Martin Box Office Collection: ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ರಿಲೀಸ್ ಆಗಿ ಮೂರು ದಿನಗಳಾಗಿದೆ. ಮಾರ್ಟಿನ್‌ ಸಿನಿಮಾ ವೀಕ್ಷಿಸಿದವರೆಲ್ಲ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ. ಅಭಿಮಾನಿಗಳು ಸಹ ಧ್ರುವ ಅಭಿನಯಕ್ಕೆ ಫಿದಾ ಆಗಿದ್ದಾರೆ. ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಸರಾ ಸಂದರ್ಭದಲ್ಲಿ ರಿಲೀಸ್ ಆದ ಮಾರ್ಟಿನ್‌ ಮೂರು ದಿನಗಳಲ್ಲಿಯೇ ಬಾಕ್ಸ್‌ ಆಫಿಸ್‌ನಲ್ಲಿ ಕಮಾಲ್‌ ಮಾಡಿದೆ. 

ಇದನ್ನೂ ಓದಿ: ಇವ್ರು ನಿಜವಾಗ್ಲೂ ವಿಶ್ವಸುಂದರಿನೇ ಬಿಡಿ.. ಅಪರೂಪಕ್ಕೆ ಸೀರೆಯಲ್ಲಿ ಕಂಡ ಐಶ್ವರ್ಯ ರೈ! ಫೋಟೋಸ್‌ ನೋಡಿ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳ್ತಿರ

ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಧ್ರುವ ಸರ್ಜಾ ನಟನೆಯ ಅತಿ ದೊಡ್ಡ ಬಜೆಟ್‌ನ ಸಿನಿಮಾ ಇದಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಿದೆ. 100 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾದ ಮಾರ್ಟಿನ್ ಚಿತ್ರದ ಕಲೆಕ್ಷನ್ ಬಗ್ಗೆ sacnilk ವರದಿ ಮಾಡಿದೆ.

Sacnilk ವರದಿ ಪ್ರಕಾರ ಮಾರ್ಟಿನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 3 ದಿನದಲ್ಲಿ ಸುಮಾರು 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ (ಅಕ್ಟೋಬರ್ 11) ‘ಮಾರ್ಟಿನ್’ ಚಿತ್ರ 6.7 ಕೋಟಿ ರೂಪಾಯಿ, ಎರನಡೇ ದಿನ (ಅಕ್ಟೋಬರ್ 12) 5.5 ಕೋಟಿ ರೂಪಾಯಿ ಮತ್ತು ಮೂರನೇ ದಿನ ಸುಮಾರು ನಾಲ್ಕು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 16 ಕೋಟಿ ರೂಪಾಯಿ ಆಗಿದೆ ಎಂದು ವರದಿಯಾಗಿದೆ.

ಮಾರ್ಟಿನ್ ಸಿನಿಮಾದ ಅಧಿಕೃತ ಕಲೆಕ್ಷನ್‌ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹೊರಹಾಕಿಲ್ಲ.  

ಇದನ್ನೂ ಓದಿ: ರಿಯಾಲಿಟಿ ಶೋನ ಇತಿಹಾಸದಲ್ಲೆ ಇದೇ ಮೊದಲ ಭಾರಿಗೆ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಸ್ಪೆಷಲ್‌ ಸ್ಪರ್ಧಿ! ಸಾರ್ವಜನಿಕರ ಬೇಡಿಕೆ ಮೇರಿಗೆ ಎಲಿಮಿನೇಷನ್‌?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News