ರಿರಿಲೀಸ್‌ಗೆ ಸಿದ್ಧವಾಗಿರುವ ಡೆವಿಲ್‌ ʼನವಗ್ರಹʼಕ್ಕೆ ಟಕ್ಕರ್‌ ಕೊಡುತ್ತಾ ʼಉಗ್ರಂʼ..!?

Navagraha re release : ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ ಅಂತ ಹೇಳಲಾಗುತ್ತಿದೆ. ಮೊನ್ನೆಮೊನ್ನೆಯಷ್ಟೇ ಕರಿಯ ಸಿನಿಮಾ ರಿರಿಲೀಸ್ ಆಗಿತ್ತು.. ಈಗ ಉಗ್ರಂ ಸಿನಿಮಾ ರಿರಿಲೀಸ್‌ಗೆ ಸಿದ್ಧವಾಗಿದ್ದು, ಕುತೂಹಲ ಹುಟ್ಟಿಸುತ್ತಿದೆ...

Written by - Krishna N K | Last Updated : Oct 26, 2024, 02:14 PM IST
    • ಜೈಲು ಸೇರಿದ ಬಳಿಕ ದರ್ಶನ್‌ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ
    • ಮೊನ್ನೆಮೊನ್ನೆಯಷ್ಟೇ ಕರಿಯ ಸಿನಿಮಾ ರಿರಿಲೀಸ್ ಆಗಿತ್ತು..
    • ಈಗ ಉಗ್ರಂ ಸಿನಿಮಾ ರಿರಿಲೀಸ್‌ಗೆ ಸಿದ್ಧವಾಗಿದ್ದು, ಕುತೂಹಲ ಹುಟ್ಟಿಸುತ್ತಿದೆ...
ರಿರಿಲೀಸ್‌ಗೆ ಸಿದ್ಧವಾಗಿರುವ ಡೆವಿಲ್‌ ʼನವಗ್ರಹʼಕ್ಕೆ ಟಕ್ಕರ್‌ ಕೊಡುತ್ತಾ ʼಉಗ್ರಂʼ..!? title=

Darshan case : ದರ್ಶನ್... ಚಾಲೆಂಜಿಂಗ್ ಸ್ಟಾರ್ ದರ್ಶನ್.. ಸಾಗರದಷ್ಟು ಅಭಿಮಾನಿಯನ್ನ ಹೊಂದಿರೋ ನಟ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರೋ ದರ್ಶನ್ ಜೈಲಿನಲ್ಲಿದ್ದಾರೆ. ಈ ಬೆನ್ನಲ್ಲೇ ನವಗ್ರಹ ಸಿನಿಮಾ ರಿರಿಲೀಸ್‌ಗೆ ಸಿದ್ಧವಾಗಿದೆ.. 

ಒಂದು ಮೂಲಗಳ ಮಾಹಿತಿ ಪ್ರಕಾರ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ ಅಂತ ಹೇಳಲಾಗುತ್ತಿದೆ. ಮೊನ್ನೆಮೊನ್ನೆಯಷ್ಟೇ ಕರಿಯ ಸಿನಿಮಾ ರಿರಿಲೀಸ್ ಆಗಿತ್ತು. ಜನ ಸಾಗರದಂತೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡಿದ್ರು.

ಇದನ್ನೂ ಓದಿ: Manasa Manohar: ಎರಡನೇ ಮದುವೆಗೆ ಸಜ್ಜಾದ 'ಜೊತೆ ಜೊತೆಯಲಿ' ಸೀರಿಯಲ್ 'ಮೀರಾ' ಹೇಳಿದ್ದೇನು ಗೊತ್ತಾ
 
ಇದೀಗ ನವಗ್ರಹ ಸಿನಿಮಾ ರಿರಿಲೀಸ್ ಆಗುತ್ತಿರೋ ಮ್ಯಾಟರ್ ಕೇಳಿ ದಚ್ಚು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ನವಗ್ರಹ’ ಸಿನಿಮಾಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ನಿರ್ದೇಶನ ಮಾಡಿದ್ದಾರೆ. ಅದು ಅವರ ಎರಡನೇ ಸಿನಿಮಾ. ದರ್ಶನ್ ಜೊತೆ ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. 

2008ರ ನವೆಂಬರ್ 7ರಂದು ತೆರೆಕಂಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ವರ್ಷ ನವೆಂಬರ್ 8ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ. ಎಗೈನ್ ನವಗ್ರಹ ಸಿನಿಮಾವನ್ನ ಬೆಳ್ಳಿತೆರೆ ಮೇಲೆ ನೋಡಬಹುದು ಅನ್ನೋದು ಫ್ಯಾನ್ಸ್  ಖುಷಿಗೆ ಕಾರಣವಾಗಿದೆ.. ಇನ್ನು ಉಗ್ರಂ ರಿರಿಲೀಸ್‌ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.. ಒಂದೇ ದಿನ ಈ ಎರಡೂ ಸಿನಿಮಾ ಬಿಡುಗಡೆಯಾದ್ರೆ ಫ್ಯಾನ್ಸ್‌ ರಿಯಾಕ್ಷನ್‌ ಹೇಗಿರುತ್ತೆ ಅಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News