ನಯಾ ಪೈಸೆ ಕಟ್ಟುವ ಹಾಗಿಲ್ಲ! ಎಸ್‌ಬಿ‌ಐ ಎಟಿಎಂ ಇದ್ರೆ ಸಾಕು, ಸಿಗುತ್ತೆ ಬರೋಬ್ಬರಿ 20 ಲಕ್ಷವರೆಗಿನ ಫ್ರೀ ಪಾಲಿಸಿ!

SBI ATM: ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನಯಾ ಪೈಸೆ ಖರ್ಚಿಲ್ಲದೆ ಬಂಪರ್ ಕೊಡುಗೆಯೊಂದನ್ನು ನೀಡುತ್ತಿದೆ. 

Written by - Yashaswini V | Last Updated : Nov 7, 2024, 08:08 AM IST
  • ನೀವು ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರೇ!

    ನಿಮ್ಮ ಬಳಿ ಎಸ್‌ಬಿ‌ಐ ಎಟಿ‌ಎಂ ಕಾರ್ಡ್ ಇದೆಯೇ?
  • ನಿಮಗೂ ಸಿಗುತ್ತೆ ಈ ಉಚಿತ ವಿಮಾ ಸೌಲಭ್ಯ
ನಯಾ ಪೈಸೆ ಕಟ್ಟುವ ಹಾಗಿಲ್ಲ! ಎಸ್‌ಬಿ‌ಐ ಎಟಿಎಂ ಇದ್ರೆ ಸಾಕು, ಸಿಗುತ್ತೆ ಬರೋಬ್ಬರಿ 20 ಲಕ್ಷವರೆಗಿನ ಫ್ರೀ ಪಾಲಿಸಿ!  title=

Free Insurance: ಪ್ರಸ್ತುತ ಕಾಲಮಾನದಲ್ಲಿ ವಿಮೆ ತುಂಬಾ ಅವಶ್ಯಕವಾಗಿದೆ.  ಜೀವ ವಿಮೆ, ಆರೋಗ್ಯ ವಿಮೆ ಸೇರಿದಂತೆ ಹಲವು ಬಗೆಯ ವಿಮಾ ಸೌಲಭ್ಯಗಳು ಲಭ್ಯವಿದ್ದು, ಪ್ರತಿ ಇನ್ಶೂರೆನ್ಸ್ ಪಾಲಿಸಿಯು ಅದರದೇ ಆದ ಮಹತ್ವವನ್ನು ಹೊಂದಿದೆ. ಆದರೆ, ಇದಕ್ಕಾಗಿ ಗ್ರಾಹಕರು ಎಷ್ಟು ಮೊತ್ತದ ವಿಮೆ ಖರೀದಿಸುತ್ತಿರೋ ಅದಕ್ಕೆ ತಕ್ಕಂತೆ ನಿರ್ದಿಷ್ಟ ಮೊತ್ತದ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರೆ, ಎಸ್‌ಬಿ‌ಐ ಗ್ರಾಹಕರಿಗೆ ವಿಶೇಷ ಸೌಲಭ್ಯವೊಂದು ಸಿಗುತ್ತಿದ್ದು ಇವರು ಒಂದು ರೂಪಾಯಿ ಖರ್ಚಿಲ್ಲದೆ ಬರೋಬ್ಬರಿ 20 ಲಕ್ಷ ಮೌಲ್ಯದ ವಿಮಾ ಪಾಲಿಸಿಯನ್ನು ಪಡೆಯಬಹುದು. 

ಹೌದು, ನೀವು ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದು ಎಟಿಎಂ ಕಾರ್ಡ್ ಹೊಂದಿದ್ದರೆ ನಿಮಗೆ ನಯಾ ಪೈಸೆ ಖರ್ಚಿಲ್ಲದೆ 20 ಲಕ್ಷ ರೂ. ಮೌಲ್ಯದ ಉಚಿತ ವಿಮೆಯನ್ನು ಪಡೆಯಬಹುದು. ಆದರೆ, ನೆನಪಿಡಿ, ಎಸ್‌ಬಿ‌ಐ ಎಟಿಎಂ ಕಾರ್ಡ್ ಇದ್ದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. 

ಇದನ್ನೂ ಓದಿ- Bank Locker Charges: ಲಾಕರ್ ಬಾಡಿಗೆ ಹೆಚ್ಚಿಸಿದ SBI, PNB! ಈಗ ಎಷ್ಟು ಹಣ ಪಾವತಿಸಬೇಕು ಗೊತ್ತಾ?

ಎಸ್‌ಬಿ‌ಐ ವಿಮೆ: 
ಎಸ್‌ಬಿ‌ಐ ಎಟಿಎಂ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ವತಿಯಿಂದ 25,000 ರೂ.ನಿಂದ ಗರಿಷ್ಠ 20 ಲಕ್ಷ ರೂ. ವರೆಗೆ ಉಚಿತ  ಅಪಘಾತ ವಿಮಾ ಸೌಲಭ್ಯ ಲಭ್ಯವಾಗಲಿದೆ. ಈ ವಿಮೆಯ ಮೊತ್ತವು ನೀವು ಯಾವ ಎಟಿಎಂ ಕಾರ್ಡ್ ಬಳಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 

ಗಮನಾರ್ಹವಾಗಿ, ಎಸ್‌ಬಿ‌ಐ ಕ್ಲಾಸಿಕ್ ಎಟಿಎಂ ಬಳಕೆದಾರರಿಗೆ 1 ಲಕ್ಷ ರೂ. ಆ್ಯಕ್ಸಿಡೆಂಟರ್ ವಿಮೆ ಲಭ್ಯವಿದ್ದರೆ, ಪ್ಲಾಟಿನಂ ಬಳಕೆದಾರರಿಗೆ 2 ಲಕ್ಷ ರೂ. ವಿಮೆ, ಸಾಮಾನ್ಯ ಮಾಸ್ಟರ್ ಕಾರ್ಡ್ ಬಳಕೆದಾರಿಗೆ 50,000 ರೂ. ವಿಮೆ, ವೀಸಾ ಕಾರ್ಡ್ ಬಳಕೆದಾರರಿಗೆ 1.50 ಲಕ್ಷದಿಂದ 2 ಲಕ್ಷ ರೂ. ವರೆಗೆ, ರೂಪೇ ಕಾರ್ಡ್ ಬಳಕೆದಾರರಿಗೆ 1-2 ಲಕ್ಷ ರೂ. ವಿಮೆ ಸಿಗಲಿದೆ. 

ಇದನ್ನೂ ಓದಿ- ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್: ವಾಹನ ಸವಾರರಿಗೆ ಗುಡ್ ನ್ಯೂಸ್

ಎಸ್‌ಬಿ‌ಐ ಎಟಿಎಂ ಆ್ಯಕ್ಸಿಡೆಂಟರ್ ವಿಮೆಯ ಪ್ರಯೋಜನ: 
ಎಸ್‌ಬಿ‌ಐ ಎಟಿಎಂ ಗ್ರಾಹಕರಿಗೆ ಸಿಗುವ ಈ ಅಪಘಾತ ವಿಮೆಯೂ ಅಪಘಾತದಿಂದ ಮೃತ್ಯುವಿನವರೆಗೆ ಲಭ್ಯವಿದೆ. ಗಾಯಾಳುಗಳಿಗೂ ಕೂಡ ಇದರ ಪ್ರಯೋಜನ ಸಿಗಲಿದೆ. 

ಈ ವಿಮೆಯನ್ನು ಪಡೆಯುವುದು ಹೇಗೆ? 
ಎಸ್‌ಬಿ‌ಐ ಗ್ರಾಹಕರು ಎಟಿಎಂ ಖರೀದಿಸಿದ ಬೆನ್ನಲ್ಲೇ ಈ ಉಚಿತ ಅಪಘಾತ ವಿಮಾ ಸೌಲಭ್ಯ ಸಕ್ರಿಯಗೊಳ್ಳಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News