ಆರ್ಥಿಕ ಕುಸಿತ: 44 ವರ್ಷಗಳಲ್ಲೇ ಪ್ರಪಾತಕ್ಕಿಳಿದ ಚೀನಾ ಜಿಡಿಪಿ

NBS ಮಾಹಿತಿಯ ಪ್ರಕಾರ ಈ ತ್ರೈಮಾಸಿಕದ ಮೊದಲ ಎರಡು ತಿಂಗಳಲ್ಲಿ ಚೀನಾದ ಆರ್ಥಿಕತೆಯಲ್ಲಿ ಶೇಕಡಾ 20.5 ರಷ್ಟು ಇಳಿಕೆ ಕಂಡುಬಂದಿದೆ.

Last Updated : Apr 17, 2020, 03:35 PM IST
ಆರ್ಥಿಕ ಕುಸಿತ: 44 ವರ್ಷಗಳಲ್ಲೇ ಪ್ರಪಾತಕ್ಕಿಳಿದ ಚೀನಾ ಜಿಡಿಪಿ title=

ಬೀಜಿಂಗ್: ಚೀನಾದ ಒಟ್ಟು ದೇಶೀಯ ಉತ್ಪನ್ನವು 1976ರ ವಿನಾಶಕಾರಿ ಕ್ರಾಂತಿಯ ನಂತರದ ಅತಿದೊಡ್ಡ ಕುಸಿತವನ್ನು ಕಂಡಿದೆ. 2020ರ ಮೊದಲ ತ್ರೈಮಾಸಿಕದಲ್ಲಿ ಇದು ಶೇಕಡಾ 6.8 ರಷ್ಟು ಕುಸಿದಿದೆ. ಈ ಸಮಯದಲ್ಲಿ ಕರೋನವೈರಸ್  ಕೋವಿಡ್ 19 (Covid-19) ಸಾಂಕ್ರಾಮಿಕ ರೋಗವನ್ನು ಎದುರಿಸಲು ಚೀನಾ (China) ಕೈಗೊಂಡ ಅನಿರೀಕ್ಷಿತ ಕ್ರಮಗಳಿಂದಾಗಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶದಲ್ಲಿ ಜಿಡಿಪಿ (GDP) ಪ್ರಪಾತಕ್ಕಿಳಿದಿದೆ.

ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (NBS) 2020ರ ಮೊದಲ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್ ವರೆಗೆ) ಚೀನಾದ ಜಿಡಿಪಿ 20,650 ಬಿಲಿಯನ್ ಯುವಾನ್ (ಸುಮಾರು 10 2910 ಬಿಲಿಯನ್) ಆಗಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು 6.8 ರಷ್ಟು ಅವನತಿಯನ್ನು ಸೂಚಿಸುತ್ತದೆ ಎಂದು ಅದು ಹೇಳಿದೆ. 

NBS ಅಂಕಿಅಂಶಗಳ ಪ್ರಕಾರ ಈ ತ್ರೈಮಾಸಿಕದ ಮೊದಲ ಎರಡು ತಿಂಗಳಲ್ಲಿ ಚೀನಾದ ಆರ್ಥಿಕತೆಯಲ್ಲಿ ಶೇಕಡಾ 20.5 ರಷ್ಟು ಇಳಿಕೆ ಕಂಡುಬಂದಿದೆ. ಆದರೆ ಮೂರನೇ ತಿಂಗಳಲ್ಲಿ ತುಲನಾತ್ಮಕವಾಗಿ ಇದು ಸುಧಾರಣೆಯಾಗಿದೆ.

ಚೀನಾದ ಆರ್ಥಿಕತೆಯು 2019ರಲ್ಲಿ ಶೇಕಡಾ 6.1 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಬೆಳವಣಿಗೆಯ ದರವು ಯುಎಸ್‌ನೊಂದಿಗಿನ ವ್ಯಾಪಾರ ಯುದ್ಧದ ಕಾರಣದಿಂದಾಗಿ ಕಳೆದ 29 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್(Wuhan) ನಗರದಿಂದ ಹೊರಬಂದ ಕರೋನಾ ವೈರಸ್ ಚೀನಾ ಮಾತ್ರವಲ್ಲದೆ ಪ್ರಪಂಚದ ಮೇಲೆ ತೀವ್ರ ಪರಿಣಾಮ ಬೀರಿತು. ಅಲ್ಲದೆ ಇದು ಚೀನಾದ ಆರ್ಥಿಕತೆಗೆ ತೀವ್ರ ಹೊಡೆತವನ್ನು ಉಂಟುಮಾಡಿದೆ ಎಂಬುದು ಇತ್ತೀಚಿನ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.
 

Trending News