Shoaib Akhtar statement: ಚಾಂಪಿಯನ್ಸ್ ಟ್ರೋಫಿ 2025ರ ವಿವಾದ ಇನ್ನೂ ಮುಗಿದಿಲ್ಲ. ಪಾಕಿಸ್ತಾನದಲ್ಲಿ ಆತಿಥ್ಯ ನೀಡುವ ವಿಷಯದ ಸುತ್ತ ವಿವಾದ ಬೆಳೆಯುತ್ತಿದೆ. ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಕೆ ನೀಡಿದ ಬಳಿಕ ಈ ವಿವಾದ ಭುಗಿಲೆದ್ದಿದೆ. ಈ ಬಗ್ಗೆ ಬಿಸಿಸಿಐ ಐಸಿಸಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಇದರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕಠಿಣ ನಿಲುವು ತಳೆದಿದೆ. ಪಿಸಿಬಿ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳದ ಕಾರಣ, ಎರಡೂ ಮಂಡಳಿಗಳು ತಮ್ಮ ನಿರ್ಧಾರಗಳಲ್ಲಿ ದೃಢವಾಗಿ ನಿಂತಿವೆ.
ಇದನ್ನೂ ಓದಿ: ಎ.ಆರ್. ರೆಹಮಾನ್ ಡಿವೋರ್ಸ್ ನೀಡುತ್ತಿದ್ದಂತೆ ತನ್ನ ಗಂಡನಿಗೂ ವಿಚ್ಛೇದನ ನೀಡಿದ 29 ವರ್ಷದ ಮೋಹಿನಿ..! ಯಾರಿಕೆ..?
ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಿ ಆಡಲು ಸಿದ್ಧವಿಲ್ಲದ ಕಾರಣ ಆ ದೇಶದ ಚಾಂಪಿಯನ್ಸ್ ಟ್ರೋಫಿ ಮೇಲೆ ಎಫೆಕ್ಟ್ ಆಗಿದೆ. ಇದೇ ವಿಷಯದ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ಚಾಂಪಿಯನ್ಸ್ ಟ್ರೋಫಿ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಐಸಿಸಿಯ ಪ್ರಾಯೋಜಕತ್ವದ 95-96 ಪ್ರತಿಶತ ಭಾರತದಿಂದ ಬರುತ್ತದೆ ಎಂದು ನಮಗೆ ತಿಳಿದಿದೆ. ಇದು ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು. ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಆಡಲಿದ್ದಾರೆ. ಪಾಕಿಸ್ತಾನದಲ್ಲಿ ವಿರಾಟ್ ಶತಕ ಸಿಡಿಸಿದರೆ ಅದು ಐತಿಹಾಸಿಕ ಕ್ಷಣವಾಗಲಿದೆ" ಎಂದು ಅಖ್ತರ್ ಹೇಳಿದ್ದಾರೆ.
"ಆದರೆ, ಭಾರತವಿಲ್ಲದೆ ಟೂರ್ನಿ ನಡೆದರೆ ಪಿಸಿಬಿ-ಐಸಿಸಿ 100 ಮಿಲಿಯನ್ ಡಾಲರ್ (ಸುಮಾರು 844 ಕೋಟಿ ರೂ.) ನಷ್ಟವನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ. ‘‘ಭಾರತವಿಲ್ಲದೆ ಚಾಂಪಿಯನ್ಸ್ ಟ್ರೋಫಿ ನಡೆದರೆ ಆತಿಥೇಯ ದೇಶ ಪ್ರಾಯೋಜಕತ್ವ ಕಳೆದುಕೊಳ್ಳುವುದಲ್ಲದೆ, ವಿಶ್ವ ಕ್ರಿಕೆಟ್ ಕೂಡ ಭಾರಿ ನಷ್ಟ ಅನುಭವಿಸಲಿದೆ. ಭಾರತ ಕ್ರಿಕೆಟ್ನ ಬೆಳವಣಿಗೆಗೆ ಪಾಕಿಸ್ತಾನದಲ್ಲಿ ಆಡುವುದು ಅಗತ್ಯವಾಗಿದೆ", ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮನಸ್ಸಿಗೆ ಇಳಿಯುವಂತಹ ಕಥೆ ಹೇಳಲಿದ್ದಾರೆ ನಾಗರಾಜ್ ಸೋಮಯಾಜಿ...ನ.22ಕ್ಕೆ 'ಮರ್ಯಾದೆ ಪ್ರಶ್ನೆ' ತೆರೆ
ಈ ಕುರಿತ ಚರ್ಚೆಗಳು ಇನ್ನೂ ನಡೆಯುತ್ತಿದ್ದು, ಈ ವಾರದ ಅಂತ್ಯದ ವೇಳೆಗೆ ಐಸಿಸಿ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಚಾಂಪಿಯನ್ಸ್ ಟ್ರೋಫಿ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ವಿವಾದ ವಿಶ್ವ ಕ್ರಿಕೆಟ್ನಲ್ಲಿ ಹೊಸ ತಿರುವುಗಳನ್ನು ತರಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ