iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!

iPhone: ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In ) ಆಪಲ್ ಉತ್ಪನ್ನಗಳಲ್ಲಿ ದೋಷಗಳು ಇವೆ ಎಂಬುದನ್ನು ಗುರುತಿಸಿದೆ.

Written by - Yashaswini V | Last Updated : Nov 25, 2024, 02:25 PM IST
  • ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In ) ಆಪಲ್ ಉತ್ಪನ್ನಗಳಲ್ಲಿ ದೋಷಗಳು ಇವೆ ಎಂಬುದನ್ನು ಗುರುತಿಸಿದೆ.
  • ಹಾಗಾಗಿ ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
  • ಇದು ಒಂದು ಥರ ರೆಡ್ ಅಲರ್ಟ್ ಆಗಿದ್ದು, ಇದನ್ನು ನಿರ್ಲಕ್ಷಿಸಿದ್ರೆ ಅಪಾಯ ಕಟ್ಟಿಟ್ಟಬುತ್ತಿ...!
iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!  title=

iPhone ಆಪಲ್ ಮೊಬೈಲ್ ಗಳಲ್ಲಿನ ನ್ಯೂನತೆಗಳನ್ನು ಗುರುತಿಸಿರುವ ಸರ್ಕಾರಿ ಸಂಸ್ಥೆ CERT-In ಇದರಿಂದ ಗ್ರಾಹಕರಿಗೆ ಆಗಬಹುದಾದ ಅಪಾಯಗಳನ್ನು ತಪ್ಪಿಸಲು ತಕ್ಷಣವೇ ಹಳೆಯ ಸಾಫ್ಟ್ವೇರ್ ಗಳನ್ನೂ ಅಪಡೇಟ್ ಮಾಡಿ ಅಥವಾ ನವೀಕರಿಸಿ ಎಂದು ನಿರ್ದೇಶಿಸಿದೆ. ನವೀಕರಣ ಸಾಧ್ಯವಾಗದ ಆಪಲ್ ಮೊಬೈಲ್ ಗಳನ್ನು ಬದಲಾಯಿಸಬೇಕು ಎಂದು ಕೂಡ ಶಿಫಾರಸ್ಸು ಮಾಡಿದೆ.

ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In ) ಆಪಲ್ ಉತ್ಪನ್ನಗಳಲ್ಲಿ ದೋಷಗಳು ಇವೆ ಎಂಬುದನ್ನು ಗುರುತಿಸಿದೆ. ಹಾಗಾಗಿ ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇದು ಒಂದು ಥರ ರೆಡ್ ಅಲರ್ಟ್. ಕೂಡಲೇ ಆಪಲ್ ನ ಎಲ್ಲಾ ಹಳೆಯ ಸಾಫ್ಟವೇರ್ ಅನ್ನು ಅಪಡೇಟ್ ಮಾಡಬೇಕು ಅಥವಾ ನವೀಕರಿಸಬೇಕು ಎಂದಿರುವ CERT-In ಸೂಚನೆಗಳನ್ನು ನಿರ್ಲಕ್ಶ್ಯ ಮಾಡಿದರೆ ಮೊಬೈಲ್ ನಲ್ಲಿರುವ ನಿಮ್ಮ ಖಾಸಗಿ ಮಾಹಿತಿಗಳಿಗೆ ಧಕ್ಕೆ ಆಗುತ್ತದೆ ಎಂಬುದಾಗಿ ಎಚ್ಚರಿಸಿದೆ. 

ಸೈಬರ್ ಅಪಾಯದ ಮುನ್ಸೂಚನೆ!
CERT-In ಮುಖ್ಯವಾಗಿ  iOS, iPadOS, macOS, VisionOS ಹಾಗು Safari ಆವೃತ್ತಿಗಳನ್ನು ಹೊಂದಿರುವ Apple ಮೊಬೈಲ್ ಗಳಿಗೆ ಭದ್ರತಾ ಎಚ್ಚರಿಕೆ  ನೀಡಿದೆ. ನೀವು ಆಪಲ್‌ನ ಹಳೆಯ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಐಫೋನ್ ಅಥವಾ ಇತರ ಸಾಧನವನ್ನು ಬಳಸುತ್ತಿದ್ದರೆ ಅತ್ಯಂತ ಜಾಗರೂಕರಾಗಿರಬೇಕು, ಏಕೆಂದರೆ ಇದು ಸಂಭವನೀಯ ಸೈಬರ್ ಅಪಾಯವನ್ನು ತಂದೊಡ್ಡಬಹುದು ಎಂದು ತಿಳಿಸಿದೆ. 

ಇದನ್ನೂ ಓದಿ- ವಿಜ್ಞಾನ ಎಂದರೆ ತಟ್ಟನೆ ನೆನಪಾಗುವ ಅಕ್ಕರೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್

ಕೂಡಲೇ ಸಾಫ್ಟವೇರ್ ಅಪಡೇಟ್ ಮಾಡಿ! 
ಆಪಲ್ ಮೊಬೈಲ್ ಬಳಸುವವರು ಈ ಕೂಡಲೇ ನಿಮ್ಮ ಮೊಬೈಲ್ ಗಳನ್ನು, ಅದರ ಸಾಫ್ಟವೇರ್ ಗಳನ್ನು ಅಪಡೇಟ್ ಮಾಡಲೇಬೇಕು ಎಂದು CERT-In ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ನಿಮ್ಮ ಮೊಬೈಲ್ ಗೆ ಸಾಫ್ಟ್‌ವೇರ್ ಅಪ್‌ಡೇಟ್ ಲಭ್ಯವಿಲ್ಲದಿದ್ದರೆ ನೀವು ಹಳೆಯ ಮೊಬೈಲ್ ಅನ್ನೇ ಬದಲಾಯಿಸುವುದು ಉತ್ತಮ, ಏಕೆಂದರೆ ಸಾಫ್ಟ್‌ವೇರ್ ನವೀಕರಣವನ್ನು ಆಪಲ್ ನಿಗದಿತ ಸಂಖ್ಯೆಯ ವರ್ಷಗಳವರೆಗೆ ಮಾತ್ರ ಒದಗಿಸಿರುತ್ತದೆ ಎಂದು ತಿಳಿಸಿದೆ. 

CERT-In ಸಲಹಾ ವರದಿಯ ಪ್ರಕಾರ, ಆಪಲ್ ಉತ್ಪನ್ನಗಳಲ್ಲಿನ ನ್ಯೂನತೆಗಳು ಸೈಬರ್ ಅಪಾಯಗಳನ್ನು ತಂದೊಡ್ಡಬಹುದು. ರೆಡ್ ಅಲರ್ಟ್ ನೀಡಲಾದ Appleನ OS ಆವೃತ್ತಿಗಳು Apple iOS ಆವೃತ್ತಿ 18.1.1 ಮತ್ತು iPadOS ಆವೃತ್ತಿ 17.7.2 ಗಿಂತ ಹಳೆಯದಾದ ಸಾಧನಗಳನ್ನು ಒಳಗೊಂಡಿವೆ. MacOS ಆವೃತ್ತಿ 15.1.1 ರಿಂದ ಪ್ರಾರಂಭವಾಗುವ ಸಾಧನಗಳನ್ನು ಸಹ ಸೇರಿಸಲಾಗಿದೆ. ಅದು 18.1.1 ಕ್ಕಿಂತ ಹಳೆಯದಾದ ಸಫಾರಿ ಆವೃತ್ತಿಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಅಪಡೇಟ್ ಅತ್ಯಗತ್ಯ ಎಂದು ತಿಳಿಸಿದೆ.

ಇದನ್ನೂ ಓದಿ- IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್'ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್'ನಲ್ಲಿ ಮಾಡಿ!

ಐಫೋನ್ ನವೀಕರಣ ಹೇಗೆ?
>> ಮೊದಲು ನೀವು ನಿಮ್ಮ ಐಫೋನ್ ಸೆಟ್ಟಿಂಗ್ ಗೆ ಹೋಗಿ. 
>> ನಂತರ ಸಾಫ್ಟವೇರ್ ಅಪಡೇಟ್ ಗೆ ಹೋಗಿ 
>> ಸಾಫ್ಟವೇರ್ ಅಪಡೇಟ್ ಮಾಡಿ 
>> ಅಲ್ಲದೆ ಸಾಫ್ಟವೇರ್ ನವೀಕರಣವನ್ನು ಸ್ವಯಂ ಚಾಲಿತ ಮಾಡಿ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News