ಪಾಕ್ ಆಕ್ರಮಿತ ಪ್ರದೇಶಗಳು ಭಾರತೀಯ ಹವಾಮಾನ ಮುನ್ಸೂಚನೆ ವ್ಯಾಪ್ತಿಯಲ್ಲಿ..!

ಭಾರತ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರವು ತನ್ನ ಹವಾಮಾನ ಮುನ್ಸೂಚನೆಯಲ್ಲಿ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ ಪ್ರದೇಶಗಳನ್ನು ಒಳಗೊಳ್ಳಲು ಪ್ರಾರಂಭಿಸಿದೆ.

Last Updated : May 7, 2020, 06:40 PM IST
ಪಾಕ್ ಆಕ್ರಮಿತ ಪ್ರದೇಶಗಳು ಭಾರತೀಯ ಹವಾಮಾನ ಮುನ್ಸೂಚನೆ ವ್ಯಾಪ್ತಿಯಲ್ಲಿ..!  title=
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರವು ತನ್ನ ಹವಾಮಾನ ಮುನ್ಸೂಚನೆಯಲ್ಲಿ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ ಪ್ರದೇಶಗಳನ್ನು ಒಳಗೊಳ್ಳಲು ಪ್ರಾರಂಭಿಸಿದೆ.

ಹವಾಮಾನ ಇಲಾಖೆ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಾಕಿಸ್ತಾನದ ಆಕ್ರಮಿತ ಪ್ರದೇಶಗಳಾದ  (ಗಿಲ್ಗಿಟ್-ಬಾಲ್ಟಿಸ್ತಾನ್) ಮತ್ತು ಮುಜಫರಾಬಾದ್ ಗಳನ್ನು, ಮೇ 5 ರಿಂದ ಜಮ್ಮು ಮತ್ತು ಕಾಶ್ಮೀರ ಹವಾಮಾನ ಉಪವಿಭಾಗದ ಅಡಿಯಲ್ಲಿವೆ ಎಂದು ಕುಲದೀಪ್ ಶ್ರೀವಾಸ್ತವ ಹೇಳಿದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿದಾಗಿನಿಂದಲೂ ಅವರು ತಮ್ಮ ದೈನಂದಿನ ಹವಾಮಾನ ಬುಲೆಟಿನ್ ಅಡಿಯಲ್ಲಿ ಪಿಒಕೆ ಅಡಿಯಲ್ಲಿರುವ ಪ್ರದೇಶಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಆದರೆ, ಇದನ್ನು ಈಗ ಜಮ್ಮು ಮತ್ತು ಕಾಶ್ಮೀರ ಉಪವಿಭಾಗದ ಅಡಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಈ ಪ್ರದೇಶಗಳು ಈಗ ಭಾರತದ ವಾಯುವ್ಯ ವಿಭಾಗದ ಒಟ್ಟಾರೆ ಮುನ್ಸೂಚನೆಯಲ್ಲಿ ಸ್ಥಾನ ಪಡೆದಿವೆ.

ವಾಯುವ್ಯ ವಿಭಾಗವು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ-ಚಂಡೀಗಡ- ಹರಿಯಾಣ, ಪಂಜಾಬ್, ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ರಾಜಸ್ಥಾನ ಎಂಬ ಒಂಬತ್ತು ಉಪವಿಭಾಗಗಳನ್ನು ಒಳಗೊಂಡಿದೆ.

ವಿಶ್ವ ಹವಾಮಾನ ಇಲಾಖೆಯು ಪ್ರಾದೇಶಿಕ ಹವಾಮಾನ ಕೇಂದ್ರವಾಗಿ ನಾಮನಿರ್ದೇಶನಗೊಂಡಿರುವ ಐಎಂಡಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಥೈಲ್ಯಾಂಡ್, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಮುಂದಿನ ಐದು ದಿನಗಳ ಮುನ್ಸೂಚನೆಗಳನ್ನು ವಿವರಿಸುತ್ತದೆ ಎಂದು ಶ್ರೀ ಮೋಹಪಾತ್ರ ಹೇಳಿದರು.

Trending News