ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ಬೆಸ್ಟ್ ಐಡಿಯಾ ನೀಡಿದ ಐವರಿಗೆ ಸಿಕ್ತು 10 ಲಕ್ಷ: ಇದು ನಿಖಿಲ್ ಕಾಮತ್ ಯೋಜನೆ

Written by - YASHODHA POOJARI | Last Updated : Dec 15, 2024, 06:06 PM IST
    • ಅನ್‌ಬಾಕ್ಸಿಂಗ್‌ ಬೆಂಗಳೂರು ಹಾಗೂ ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ಸಹಯೋಗ
    • WTFund ನಮ್ಮ ಬೆಂಗಳೂರು ಚಾಲೆಂಜ್‌ನ ಐದು ವಿಜೇತರನ್ನು ಹೆಮ್ಮೆಯಿಂದ ಘೋಷಣೆ ಮಾಡಿದೆ
    • ನವೆಂಬರ್ ತಿಂಗಳಲ್ಲಿ ಪ್ರಾರಂಭವಾದ ನಮ್ಮ ಬೆಂಗಳೂರು ಚಾಲೆಂಜ್‌ಗೆ ಸುಮಾರು 600 ರಿಜಿಸ್ಟ್ರೇಶನ್ ಆಗಿತ್ತು
ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ಬೆಸ್ಟ್ ಐಡಿಯಾ ನೀಡಿದ ಐವರಿಗೆ ಸಿಕ್ತು 10 ಲಕ್ಷ: ಇದು ನಿಖಿಲ್ ಕಾಮತ್ ಯೋಜನೆ title=
File Photo

ಅನ್‌ಬಾಕ್ಸಿಂಗ್‌ ಬೆಂಗಳೂರು ಹಾಗೂ ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ಸಹಯೋಗದೊಂದಿಗೆ ನಡೆದ “ನಮ್ಮ ಬೆಂಗಳೂರು ಚಾಲೆಂಜ್”ಅನ್ನು 5 ಜನ ಗೆದ್ದಿದ್ದಾರೆ. ಬೆಂಗಳೂರು ಸಮಸ್ಯೆಗೆ ಪರಿಹಾರ ನೀಡಿ ಎಂದು “ನಮ್ಮ ಬೆಂಗಳೂರು ಚಾಲೆಂಜ್”ಅನ್ನು ಆಯೋಜನೆ ಮಾಡಲಾಗಿತ್ತು.

ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ ಅನುದಾನ ನೀಡುವಂತೆ ಘೋಷಣೆ ಮಾಡಲಾಗಿತ್ತು. Unboxing ಬೆಂಗಳೂರು ಫೌಂಡೇಶನ್ ಮತ್ತು ನಿಖಿಲ್ ಕಾಮತ್ ಅವರ WTFund ನಮ್ಮ ಬೆಂಗಳೂರು ಚಾಲೆಂಜ್‌ನ ಐದು ವಿಜೇತರನ್ನು ಹೆಮ್ಮೆಯಿಂದ ಘೋಷಣೆ ಮಾಡಿದೆ.

ಇದನ್ನೂ ಓದಿ: ಮಲಗುವ ಅರ್ಧ ಗಂಟೆ ಮುನ್ನ ಈ ನೀರು ಕುಡಿಯಿರಿ: ದಿಂಬಿಗೆ ತಲೆಕೊಟ್ಟಂತೆ ಆವರಿಸುವುದು ಗಾಢನಿದ್ದೆ! ಯಾವತ್ತೂ ನಿದ್ರಾಹೀನತೆ ಕಾಡಲ್ಲ

ಬಿಎಲ್‌ಆರ್ ಹಬ್ಬದಲ್ಲಿ ನಡೆದ ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಫ್ಯೂಚರ್ಸ್ ಕಾನ್ಫರೆನ್ಸ್‌ನಲ್ಲಿ ಈ ಘೋಷಣೆ ಮಾಡಲಾಗಿದ್ದು ಉತ್ತಮ ಐಡಿಯಾ ಮತ್ತು ದೂರದೃಷ್ಟಿಯ ಆಲೋಚನೆಯಗಳೊಂದಿಗೆ ಬಂದ 5 ತಂಡಗಳಿಗೆ ತಲ ₹10 ಲಕ್ಷ ಅನುದಾನ ನೀಡಲಾಯಿತು. ಅನುದಾನಿಗಳು ಬೆಂಗಳೂರು ನಗರದ ಸವಾಲುಗಳನ್ನುನಿಭಾಯಿಸಲು ಮತ್ತು ನಗರದ ಅಭಿವೃದ್ಧಿಗೆ ಚಾಲನೆ ನೀಡುವ ಹೊಸ ಮತ್ತು ಸುಸ್ಥಿರ ಪರಿಹಾರಗಳನ್ನು ಕಾರ್ಯಗತಗೊಳಿಸುವ ಗುರಿಯನ್ನು ವಿಜೇತ ತಂಡಗಳು ಹೊಂದಿದ್ದಾರೆ.

ನವೆಂಬರ್ ತಿಂಗಳಲ್ಲಿ ಪ್ರಾರಂಭವಾದ ನಮ್ಮ ಬೆಂಗಳೂರು ಚಾಲೆಂಜ್‌ಗೆ ಸುಮಾರು 600 ರಿಜಿಸ್ಟ್ರೇಶನ್ ಆಗಿತ್ತು. ಬಳಿಕ Unboxing BLR ಫೌಂಡೇಶನ್ ಮತ್ತು WTFund ಕೊನೆಯದಾಗಿ 16 ಬೆಸ್ಟ್ ಐಡಿಯಾಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಬಳಿಕ 8 ತಂಡವನ್ನು ಆಯ್ಕೆ ಮಾಡಿ ಕೊನೆಯದಾಗಿ 5 ತಂಡಗಳಿಗೆ ಅವಾರ್ಡ್ ನೀಡಲಾಗಿದೆ.

ಶುದ್ಧ ನೀರು: ಬೆಂಗಳೂರು ಜಲಮೂಲಗಳು ಸಂಸ್ಕರಿಸದ ಒಳಚರಂಡಿ, ಕೈಗಾರಿಕಾ ತ್ಯಾಜ್ಯ ಮತ್ತು ತೀವ್ರ ಮಾಲಿನ್ಯವನ್ನು ಎದುರಿಸುತ್ತಿವೆ, ಇದು ನೀರಿನ ಗುಣಮಟ್ಟವನ್ನು ಕಡಿಮೆ ಮಾಡಿದೆ. ವಾಟರ್‌ಬಾಡಿ ಪುನರುಜ್ಜೀವನ ಯೋಜನೆಯು ಈ ಪ್ರಮುಖ ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಮತ್ತು ಕುಡಿಯುವ ನೀರಿನ ಗುಣಮಟ್ಟಕ್ಕೆ ಹತ್ತಿರ ತರಲು ಅದರ ಸಮರ್ಥನೀಯ, ಪ್ರಕೃತಿ ಆಧಾರಿತ ಪರಿಹಾರಗಳೊಂದಿಗೆ ಈ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಮಹಿಳಾ ಶಕ್ತಿ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್ ತರಬೇತಿ ಕಾರ್ಯಕ್ರಮ: ಮಹಿಳಾ ಶಕ್ತಿ ಕಾರ್ಯಕ್ರಮ ಸುರಕ್ಷಿತ ಮತ್ತು ಬೆಂಗಳೂರಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಪುರುಷ ಪ್ರಾಬಲ್ಯ ಕ್ಷೇತ್ರವನ್ನು ಪ್ರವೇಶಿಸಲು ಮಹಿಳೆಯರಿಗೆ ಸಹಕಾರಿಯಾಗಲಿದೆ.

ಆಟೋ ಮೀಟರ್: ಪಾರದರ್ಶಕ ಮತ್ತು ಸರ್ಕಾರದಿಂದ ಅನುಮೋದಿತ ಮೀಟರ್ ದರದ ಆಟೋರಿಕ್ಷಾ ಸೇವೆಗಳನ್ನು ನೀಡುವುದು.
ಅನಾಹತ್ ಫೌಂಡೇಶನ್ - ನಗರ ಪ್ರದೇಶದ ಬಡವರಿಗಾಗಿ ಪ್ರಾಥಮಿಕ ಮತ್ತು ಆರೋಗ್ಯ ರಕ್ಷಣೆ ಸುಧಾರಿಸುವುದು. ಆರೋಗ್ಯ ಸೇವೆಯು ಎಲ್ಲಾ ನಾಗರಿಕರಿಗೆ ತಲುಪುವಂತೆ ಮಾಡುವುದು.

ಬದಲಾಗೋಣ: ಸುಸ್ಥಿರತೆಯ ತ್ಯಾಜ್ಯ ನಿರ್ವಹಣಾ ಯೋಜನೆದೃಷ್ಟಿ ಅವರು ಉತ್ಪಾದಿಸುವ ತ್ಯಾಜ್ಯಕ್ಕೆ ನಾಗರಿಕರನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ 1% ಕ್ಕಿಂತ ಕಡಿಮೆ ತ್ಯಾಜ್ಯವನ್ನು ವ್ಯವಸ್ಥಿತ ಗುಂಡಿಗಳಿಗೆ ಕಳುಹಿಸುವುದು.  ನಾಗರಿಕರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ನಡುವೆ ಒಂದು ಸಹಕಾರ ಬೆಳೆಸುವುದು.

ಇದನ್ನೂ ಓದಿ: ಟೀಂ ಇಂಡಿಯಾ ಸ್ಟಾರ್‌ ಆಟಗಾರನ ಪ್ರೀತಿಯಲ್ಲಿ ಬಿದ್ದ ಆಸ್ಟ್ರೇಲಿಯಾ ಆಟಗಾರನ ಪುತ್ರಿ..! ತಂದೆಯ ಮುಂದೆ ಮನದ ಆಸೆ ಬಿಚ್ಚಿಟ್ಟಳು ಸುಂದರಿ!

ಈ ಐದು ಬೆಸ್ಟ್‌ ಐಡಿಯಾಗಳನ್ನ ನೀಡಿದ ತಂಡಕ್ಕೆ ತಲಾ ೧೦ ಲಕ್ಷ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಜೀರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಬೆಂಗಳೂರು ನನಗೆ ತುಂಬಾ ನೀಡಿದೆ. ಅದರ ಪ್ರತಿಯಾಗಿ ಬೆಂಗಳೂರಿಗೆ ಏನಾದರೂ ನೀಡುವುದು  ನನ್ನ ಮಾರ್ಗವಾಗಿದೆ. ಈ ಚಾಲೆಂಜ್ ಈ ನಗರದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಜನರನ್ನು ಒಟ್ಟುಗೂಡಿಸುತ್ತದೆ. ಇದರಲ್ಲಿ  ಭಾಗವಹಿಸಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು. ಈ ಆಲೋಚನೆಗಳು ಹೇಗೆ ವಿಕಸನಗೊಳ್ಳುತ್ತವೆ ಮತ್ತು ಮುಂಬರುವ ವರ್ಷಗಳಲ್ಲಿ ಬದಲಾವಣೆಯನ್ನು ಮಾಡುತ್ತವೆ ಎಂಬುದನ್ನು ನೋಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ’ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News