ವರ್ಷದ ಮೊದಲ ದಿನವೇ ಈ ವಸ್ತುಗಳು ಕಣ್ಣಿಗೆ ಬಿದ್ದರೆ ವರ್ಷ ಪೂರ್ತಿ ಇರುವುದು ಮಹಾ ಲಕ್ಷ್ಮೀ ಕೃಪೆ !ನೀವೆಷ್ಟು ಅದೃಷ್ಟವಂತರು ಈ ಮೂಲಕ ತಿಳಿಯಿರಿ

ಹೊಸ ವರ್ಷದಲ್ಲಿ ಕಣ್ಣಿಗೆ ಬೀಳುವ ಕೆಲವು ಜ್ಯೋತಿಷ್ಯ ಚಿಹ್ನೆಗಳು ನಿಮ್ಮ ಇಡೀ ವರ್ಷ ಹೇಗೆ ಸಾಗಲಿದೆ ಎನ್ನುವುದನ್ನು ತಿಳಿಸಬಹುದು.   

Written by - Ranjitha R K | Last Updated : Dec 24, 2024, 01:59 PM IST
  • ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ.
  • ಹೊಸ ವರ್ಷವು ಎಷ್ಟು ಅದೃಷ್ಟ ಎನ್ನುವುದನ್ನು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ.
  • ಜ್ಯೋತಿಷ್ಯ ಚಿಹ್ನೆಗಳು ನಿಮ್ಮ ಇಡೀ ವರ್ಷ ಹೇಗೆ ಸಾಗಲಿದೆ ಎನ್ನುವುದನ್ನು ತಿಳಿಸಬಹುದು.
ವರ್ಷದ ಮೊದಲ ದಿನವೇ ಈ ವಸ್ತುಗಳು ಕಣ್ಣಿಗೆ ಬಿದ್ದರೆ ವರ್ಷ ಪೂರ್ತಿ ಇರುವುದು ಮಹಾ ಲಕ್ಷ್ಮೀ ಕೃಪೆ !ನೀವೆಷ್ಟು ಅದೃಷ್ಟವಂತರು ಈ ಮೂಲಕ ತಿಳಿಯಿರಿ  title=

ಬೆಂಗಳೂರು : ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ.  ಹೊಸ ವರ್ಷ ಹೇಗಿರಲಿದೆ? ಹಳೆಯ ವರ್ಷದ ನೋವು, ಕಷ್ಟಗಳೇ ಮುಂದುವರಿಯುವುದೇ ಅಥವಾ ಸಂತೋಷ ನೆಮ್ಮದಿಯಿಂದ ಕೂಡಿರುವುದೇ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಹೊಸ ವರ್ಷವು ನಿಮಗೆ ಎಷ್ಟು ಅದೃಷ್ಟ ಎನ್ನುವುದನ್ನು ಖಚಿತವಾಗಿ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ.  ಆದರೆ ಹೊಸ ವರ್ಷದಲ್ಲಿ ಕಣ್ಣಿಗೆ ಬೀಳುವ ಕೆಲವು ಜ್ಯೋತಿಷ್ಯ ಚಿಹ್ನೆಗಳು ನಿಮ್ಮ ಇಡೀ ವರ್ಷ ಹೇಗೆ ಸಾಗಲಿದೆ ಎನ್ನುವುದನ್ನು ತಿಳಿಸಬಹುದು. 

ಹೊಸ ವರ್ಷದ ಆರಂಭದಲ್ಲಿ ಇವೆಲ್ಲಾ ಕಣ್ಣಿಗೆ ಬಿದ್ದರೆ ಶುಭ : 
ಪೂಜೆ ಅಥವಾ ಹವನ :

ದೇವರ ಪೂಜೆ ಅಥವಾ ಹವನವನ್ನು ನೋಡಿದರೆ, ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ದೇವರ ಕೃಪೆ ನಿಮ್ಮ ಇರಲಿದೆ ಎಂದು. ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಖಂಡಿತಾ ಎನ್ನುವುದು ಈ ಮೂಲಕ ತಿಳಿಯುತ್ತದೆ. 

ಇದನ್ನೂ ಓದಿ : ಮಹಿಳೆಯರು ವಾರದ ಈ ದಿನ ತಪ್ಪಿಯೂ ಕುಂಕುಮ ಹಚ್ಚಬಾರದಂತೆ !ದೀರ್ಘಾಯುಷ್ಯಕ್ಕಾಗಿ ಹಚ್ಚುವ ಕುಂಕುಮವೇ ಪತಿಯ ಆಯುಷ್ಯಕ್ಕೆ ಕುತ್ತು ತರುತ್ತದೆಯಂತೆ !

ಬಿಳಿ ಹೂವು ಅಥವಾ ಆನೆ :
ಮುಂಜಾನೆ ಬಿಳಿ ಹೂವುಗಳು ಅಥವಾ ಆನೆ ನೋಡಿದರೆ, ಅದನ್ನು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯೊಳಗೆ ಲಕ್ಷ್ಮೀ ದೇವಿಯ ಪ್ರವೇಶವಾಗುತ್ತಿದೆ ಎನ್ನುವುದು ಈ ಮೂಲಕ ತಿಳಿಯುವುದು. ಅದೃಷ್ಟದ ಬಾಗಿಲು ತೆರೆಯುವ ಸಮಯ ಬಂದಿದೆ ಎನ್ನುವ ಸಂಕೇತವನ್ನು ಸ್ವಯಂ ಲಕ್ಷ್ಮೀಯೇ ನೀಡುತ್ತಾಳೆ. 

ಹಕ್ಕಿ ಗೂಡು :
ಹೊಸ ವರ್ಷದ ಮೊದಲ ದಿನದಂದು ನಿಮ್ಮ ಮನೆಯಲ್ಲಿ ಹಕ್ಕಿಯ ಗೂಡನ್ನು ನೋಡಿದರೆ, ಅದು ದೇವತೆಗಳೇ ನೀಡುವ ಸಕಾರಾತ್ಮಕ ಸಂಕೇತವಾಗಿದೆ ಎನ್ನಲಾಗಿದೆ. ಇದು ನಿಮ್ಮ ಒಳ್ಳೆಯ ದಿನಗಳು ಬರಲಿವೆ ಎಂಬುದರ ಸಂಕೇತವಾಗಿದೆ. ಮನೆಯಲ್ಲಿ ಹಕ್ಕಿ ಗೂಡು ಕಟ್ಟಿದರೆ ಅದನ್ನು ಮುರಿಯಲು ಹೋಗಬೇಡಿ, ಬದಲಿಗೆ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. 

ಈ ಶಬ್ದಗಳನ್ನು ಕೇಳುವುದು:
ಜ್ಯೋತಿಷಿಗಳ ಪ್ರಕಾರ, ಹೊಸ ವರ್ಷದ ಮೊದಲ ದಿನದಂದು ದೇವಾಲಯದ ಗಂಟೆ ಅಥವಾ ಶಂಖದ ಶಬ್ದ ಕೇಳಿಸಿದರೆ ಅದು ತುಂಬಾ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಪಕ್ಷಿಗಳ ಚಿಲಿಪಿಲಿ ಕೂಡಾ ಮಧುರವಾದ ಧ್ವನಿಯಾಗಿದ್ದು, ಇದು ಮಂಗಳಕರ ಹೊಸ ವರ್ಷದ ಸಂದೇಶವನ್ನು ನೀಡುತ್ತದೆ.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನಸಿನಲ್ಲಿ ಈ ವಸ್ತುಗಳು ಕಂಡರೆ : 
ಡಿಸೆಂಬರ್ 31 ರ ರಾತ್ರಿ ಮಲಗುವಾಗ ನಿಮ್ಮ ಕನಸಿನಲ್ಲಿ ಚಿನ್ನ, ಬೆಳ್ಳಿ ಅಥವಾ ಹಣ ಕಾಣಿಸಿಕೊಂಡರೆ ಹೊಸ ವರ್ಷದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವಿವಾಹಿತರಾಗಿದ್ದರೆ ವಿವಾಹ ಭಾಗ್ಯವನ್ನು ಕೂಡಾ ಇದು ಸಾರುತ್ತದೆ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News