ಸಮಿತಿ ಹೇಳಿದ ಬಟ್ಟೆ ಹಾಕಿಲ್ಲ ಅಂತಾ ಆಟದಿಂದಲೇ DISQUALIFY ಆದ ವಿಶ್ವ ಚಾಂಪಿಯನ್‌ ಸ್ಟಾರ್‌ ಪ್ಲೇಯರ್...‌ ಜೊತೆಗೆ ಭಾರೀ ದಂಡ ವಿಧಿಸಿ ಶಿಕ್ಷೆ!

Magnus Carlsen: FIDE ʼXʼ ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, "ಇಂದು ಮ್ಯಾಗ್ನಸ್ ಕಾರ್ಲ್ಸನ್ ಜೀನ್ಸ್ ಧರಿಸಿ ಡ್ರೆಸ್ ಕೋಡ್ ಉಲ್ಲಂಘಿಸಿದ್ದಾರೆ. ಈವೆಂಟ್‌ನ ದೀರ್ಘಕಾಲದ ನಿಯಮಗಳ ಅಡಿಯಲ್ಲಿ ಇದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಉಲ್ಲಂಘನೆಯ ಬಗ್ಗೆ ಮುಖ್ಯ ರೆಫರಿ ಕಾರ್ಲ್‌ಸನ್‌ಗೆ ಮಾಹಿತಿ ನೀಡಿದರು. ಆತನಿಗೆ US$200 ದಂಡ ವಿಧಿಸಿ ತನ್ನ ಬಟ್ಟೆಯನ್ನು ಬದಲಾಯಿಸುವಂತೆ ವಿನಂತಿಸಿದರು" ಎಂದು ಬರೆಯಲಾಗಿದೆ.  

Written by - Bhavishya Shetty | Last Updated : Dec 28, 2024, 03:40 PM IST
    • ಮಾಜಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ FIDEನಿಂದ ಡಿಸ್‌ಕ್ವಾಲಿಫೈ
    • ಇಂದು ಮ್ಯಾಗ್ನಸ್ ಕಾರ್ಲ್ಸನ್ ಜೀನ್ಸ್ ಧರಿಸಿ ಡ್ರೆಸ್ ಕೋಡ್ ಉಲ್ಲಂಘಿಸಿದ್ದಾರೆ
    • ಈ ಕಾರಣಕ್ಕೆ ಪಂದ್ಯಾವಳಿಯ ಒಂಬತ್ತನೇ ಸುತ್ತಿನಿಂದ ಹೊರಬಿದ್ದಿದ್ದಾರೆ
ಸಮಿತಿ ಹೇಳಿದ ಬಟ್ಟೆ ಹಾಕಿಲ್ಲ ಅಂತಾ ಆಟದಿಂದಲೇ DISQUALIFY ಆದ ವಿಶ್ವ ಚಾಂಪಿಯನ್‌ ಸ್ಟಾರ್‌ ಪ್ಲೇಯರ್...‌ ಜೊತೆಗೆ ಭಾರೀ ದಂಡ ವಿಧಿಸಿ ಶಿಕ್ಷೆ! title=
Magnus Carlsen

Magnus Carlsen disqualified: ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ (FIDE) ಡ್ರೆಸ್ ಕೋಡ್ ಉಲ್ಲಂಘಿಸಿದ್ದಕ್ಕಾಗಿ ಮಾಜಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ವಿಶ್ವ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಡಿಸ್‌ಕ್ವಾಲಿಫೈ ಆಗಿದ್ದಾರೆ. ಕಾರ್ಲ್ಸೆನ್ ಜೀನ್ಸ್ ಧರಿಸಿದ್ದು, ಇದರ ಬದಲಿದೆ ಟ್ರೋಷರ್‌ ಧರಿಸುವಂತೆ ಸೂಚಿಸಲಾಗಿತ್ತು. ಆದರೆ ಕಾರ್ಲ್‌ಸನ್ ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಪಂದ್ಯಾವಳಿಯ ಒಂಬತ್ತನೇ ಸುತ್ತಿನಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ಈ ಹಣ್ಣನ್ನು ಸಿಪ್ಪೆ ಸಮೇತ ಕಚ್ಚಿ ತಿಂದರೆ ಕಣ್ಣ ದೃಷ್ಟಿ ಎಷ್ಟೇ ಮಂಜಾಗಿದ್ದರೂ ಶಾರ್ಪ್‌ ಆಗುತ್ತೆ: 80ರ ವಯಸ್ಸಲ್ಲೂ ಕನ್ನಡಕ ಹಾಕುವ ಅಗತ್ಯವೇ ಬರಲ್ಲ

FIDE ʼXʼ ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, "ಇಂದು ಮ್ಯಾಗ್ನಸ್ ಕಾರ್ಲ್ಸನ್ ಜೀನ್ಸ್ ಧರಿಸಿ ಡ್ರೆಸ್ ಕೋಡ್ ಉಲ್ಲಂಘಿಸಿದ್ದಾರೆ. ಈವೆಂಟ್‌ನ ದೀರ್ಘಕಾಲದ ನಿಯಮಗಳ ಅಡಿಯಲ್ಲಿ ಇದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಉಲ್ಲಂಘನೆಯ ಬಗ್ಗೆ ಮುಖ್ಯ ರೆಫರಿ ಕಾರ್ಲ್‌ಸನ್‌ಗೆ ಮಾಹಿತಿ ನೀಡಿದರು. ಆತನಿಗೆ US$200 ದಂಡ ವಿಧಿಸಿ ತನ್ನ ಬಟ್ಟೆಯನ್ನು ಬದಲಾಯಿಸುವಂತೆ ವಿನಂತಿಸಿದರು" ಎಂದು ಬರೆಯಲಾಗಿದೆ.  

"ಡ್ರೆಸ್ ಕೋಡ್ ನಿಯಮಗಳನ್ನು FIDE ಅಥ್ಲೀಟ್‌ಗಳ ಆಯೋಗದ ಸದಸ್ಯರು ಸಿದ್ಧಪಡಿಸುತ್ತಾರೆ. ಈ ಆಯೋಗವು ವೃತ್ತಿಪರ ಆಟಗಾರರು ಮತ್ತು ತಜ್ಞರಿಂದ ಮಾಡಲ್ಪಟ್ಟಿದೆ. ಈ ನಿಯಮಗಳು ವರ್ಷಗಳಿಂದ ಜಾರಿಯಲ್ಲಿದ್ದು, ಎಲ್ಲಾ ಭಾಗವಹಿಸುವವರು ಅವುಗಳನ್ನು ಚೆನ್ನಾಗಿ ತಿಳಿದಿದ್ದಾರೆ. ಪ್ರತಿ ಸ್ಪರ್ಧೆಗೂ ಮುನ್ನ ಅವರಿಗೆ ನಿಯಮಗಳ ಬಗ್ಗೆ ತಿಳಿಸಲಾಗುತ್ತದೆ" ಎಂದು ಹೇಳಿದೆ

ನಾರ್ವೆಯ ಗ್ರ್ಯಾಂಡ್‌ಮಾಸ್ಟರ್ ಕಾರ್ಲ್‌ಸೆನ್ ಅತ್ಯುತ್ತಮ ಚೆಸ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು FIDEಯ ನಿಯಮಗಳಿಂದ ಬಹಳ ನಿರಾಶೆಗೊಂಡಿದ್ದೇನೆ. ಆದ್ದರಿಂದ ನಾನು ಇನ್ನು ಮುಂದೆ ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುವುದಿಲ್ಲ" ಎಂದು ಕಾರ್ಲ್ಸೆನ್ ನಾರ್ವೇಜಿಯನ್ ಪ್ರಸಾರ ಚಾನಲ್ NRK ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸಂಜೆಯಾದರೆ ಸೊಳ್ಳೆ ಕಾಟವೇ.. ಬಾಳೆಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿದರೆ ಮನೆಯಲ್ಲಿ ಒಂದು ಸೊಳ್ಳೆಯೂ ಇರುವುದಿಲ್ಲ!

"ನಾನು ಅವರೊಂದಿಗೆ ಏನನ್ನೂ ಮಾಡಲು ಬಯಸುವುದಿಲ್ಲ. ನನ್ನ ತವರು ರಾಷ್ಟ್ರದವರು ಎಲ್ಲರೂ ನನ್ನನು ಕ್ಷಮಿಸಿ, ಬಹುಶಃ ಇದು ಮೂರ್ಖ ಸಿದ್ಧಾಂತವಾಗಿದೆ, ಆದರೆ ಇದು ಯಾವುದೇ ಉತ್ಪ್ರೇಕ್ಷೆ ಅಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಈಗ ಡ್ರೆಸ್‌ ಬದಲಾಯಿಸುವುದಿಲ್ಲ, ಮುಂದಿನ ಪಂದ್ಯದಿಂದ ಅನುಸರಿಸುತ್ತೇನೆ ಎಂದು ಹೇಳಿದೆ. ಆದರೆ ಅವರು ಅದಕ್ಕೆ ಸಿದ್ಧರಿರಲಿಲ್ಲ. FIDE ಯೊಂದಿಗೆ ತುಂಬಾ ಅಸಮಾಧಾನಗೊಳ್ಳುವ ಹಂತಕ್ಕೆ ಬಂದಿದ್ದೇನೆ. ಹಾಗಾಗಿ ಇನ್ಮುಂದೆ ಇವರ ಯಾವುದೇ ಟೂರ್ನಿಯಲ್ಲಿ ನಾನು ಭಾಗವಹಿಸುವುದಿಲ್ಲ" ಎಂದು ಕಾರ್ಲ್‌ಸನ್‌ ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News