ನವದೆಹಲಿ: ಕಾರ್ಗಿಲ್ ಯುದ್ಧದ ಕಾರಣದಿಂದಾಗಿ ದೀರ್ಘ ಅಂತರದ ನಂತರ ಭಾರತವು 2004 ರಲ್ಲಿ ಪೂರ್ಣ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು.ಆಗ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಪಾಕ್ ವಿರುದ್ಧ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿತು.
Great memories, this was I believe after one of my favourite Test inns in Lahore against India in 2006, Shoaib was always a threat for batsmen but this was a very flat wicket and bowlers were left to share jokes to overcome their pain 😂 https://t.co/9kTCuH4pYU
— Shahid Afridi (@SAfridiOfficial) May 29, 2020
ಒಂದೆರಡು ವರ್ಷಗಳ ನಂತರ ಭಾರತವು ಮತ್ತೊಂದು ಮೂರು ಪಂದ್ಯಗಳ ಸರಣಿಗಾಗಿ ಪಾಕಿಸ್ತಾನಕ್ಕೆ ಮರಳಿತು, ದ್ರಾವಿಡ್ ತಂಡದ ನಾಯಕತ್ವದ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತುಕೊಂಡರು.ಸ್ವಾಭಾವಿಕವಾಗಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರು ಭಾರತದ ಬ್ಯಾಟಿಂಗ್ ಆಧಾರ ಸ್ಥಂಬವಾಗಿದ್ದರು.ಲಾಹೋರ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ದ್ರಾವಿಡ್ ಮತ್ತು ಸೆಹ್ವಾಗ್ ಅವರು 410 ರನ್ಗಳ ಜೊತೆಯಾಟವನ್ನು ಆಡಿದ್ದರು.ವಿನೂ ಮಂಕಡ್ ಮತ್ತು ಪಂಕಜ್ ರಾಯ್ ಅವರು ನಿರ್ಮಿಸಿದ ಭಾರತೀಯ ದಾಖಲೆಯ ಕೇವಲ ಮುರಿಯಲು ಕೇವಲ 3 ರನ್ ಗಳ ಅಗತ್ಯವಿತ್ತು.
ಈ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಕೇವಲ 247 ಎಸೆತಗಳಲ್ಲಿ 254 ರನ್ ಗಳಿಸಿದ್ದರು, ಇದು ಅವರು ಎರಡನೇ ಟೆಸ್ಟ್ ದ್ವಿಶತಕವಾಗಿತ್ತು.ಈಗ ಈ ಟೆಸ್ಟ್ ಪಂದ್ಯದ ಕುರಿತಾಗಿ ಮಾತನಾಡಿದ ಆಫ್ರಿಧಿ ಈ ಪಂದ್ಯದಲ್ಲಿ ಬೌಲರ್ ಗಳು ವಿಕೆಟ್ ಗಳು ಬೀಳದ ಹಿನ್ನಲೆಯಲ್ಲಿ ಬೌಲರ್ ಗಳು ತಮ್ಮ ನೋವನ್ನು ಮರೆಯಲು ಜೋಕ್ಸ್ ಗಳನ್ನು ಮಾಡುತ್ತಿದ್ದರು ಎಂದು ಹೇಳಿದ್ದಾರೆ.