ನವದೆಹಲಿ: ಇಂದಿನಿಂದ ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಲಾಗುತ್ತಿದೆ. ಇದರೊಂದಿಗೆ ನಿಮ್ಮ ಕೆಲಸಕ್ಕೆ ಮರಳಲು ಸಹ ನೀವು ಸಿದ್ಧರಾಗುತ್ತಿದ್ದೀರಿ. ಅಂತಹ ಪರಿಸ್ಥಿತಿಯಲ್ಲಿ ನಾವು ನಿಮಗೆ ಬ್ಯಾಂಕಿಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಯನ್ನು ನೀಡುತ್ತಿದ್ದೇವೆ. ಇದರಿಂದಾಗಿ ಬ್ಯಾಂಕಿಗೆ ಸಂಬಂಧಿತ ಕೆಲಸಗಳಿಗೆ ಅನುಕೂಲವಾಗುವಂತೆ ಬ್ಯಾಂಕ್ ರಜಾದಿನಗಳ ಬಗ್ಗೆ ಮಾಹಿತಿ ಒದಗಿಸುತ್ತಿದ್ದೇವೆ.
ಜೂನ್ನಲ್ಲಿ ಬರಲಿದೆ ಈ ವಿಶೇಷ ಹಬ್ಬ:
ಈ ತಿಂಗಳು ಅನೇಕ ಹಬ್ಬಗಳು ಬರಲಿವೆ, ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮದಿನವು ಜೂನ್ನಲ್ಲಿ ಬರಲಿದೆ. ಇದರೊಂದಿಗೆ ಪುರಿಯಲ್ಲಿನ ಜಗನ್ನಾಥ ರಥಯಾತ್ರೆಯನ್ನೂ ಈ ತಿಂಗಳು ನಡೆಸಲಾಗುತ್ತಿದೆ. ಈ ಎರಡು ದೊಡ್ಡ ಹಬ್ಬಗಳಿಂದಾಗಿ ಸ್ಥಳೀಯ ಬ್ಯಾಂಕುಗಳು ಅನೇಕ ರಾಜ್ಯಗಳಲ್ಲಿ ಮುಚ್ಚಲ್ಪಡುತ್ತವೆ. ಇದಲ್ಲದೆ ಎಲ್ಲಾ ಬ್ಯಾಂಕುಗಳು ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಈ ತಿಂಗಳ ಎಲ್ಲಾ ಭಾನುವಾರಗಳನ್ನು ಮುಚ್ಚಲಿವೆ.
ಈ ತಿಂಗಳ ಶನಿವಾರ ಮತ್ತು ಭಾನುವಾರದ ರಜೆ ದಿನಾಂಕಗಳು:
7 ಜೂನ್ - (ಭಾನುವಾರ)
13 ಜೂನ್ (ಎರಡನೇ ಶನಿವಾರ)
14 ಜೂನ್ - (ಭಾನುವಾರ)
21 ಜೂನ್ - (ಭಾನುವಾರ
27 ಜೂನ್ - (ಶನಿವಾರ)
28 ಜೂನ್ - (ಭಾನುವಾರ)
ಜೂನ್ನಲ್ಲಿ ಬರುವ ಹಬ್ಬಗಳು:
ಜೂನ್ 15 - ಐಜ್ವಾಲ್ ಮತ್ತು ಭುವನೇಶ್ವರದಲ್ಲಿ ರಜೆ
ಜೂನ್ 18 - ಗುರು ಗೋವಿಂದ್ ಸಿಂಗ್ ಜನ್ಮದಿನ
ಜೂನ್ 23 - ಒಡಿಶಾದಲ್ಲಿ ಬ್ಯಾಂಕುಗಳರಜಾದಿನ
ಜೂನ್ 30 - ಮಿಜೋರಾಂನಲ್ಲಿ ಬ್ಯಾಂಕುಗಳ ರಜಾದಿನ