ನವದೆಹಲಿ:Facebook ಬಳಕೆದಾರರು ಶೀಘ್ರದಲ್ಲಿಯೇ ಭವಿಷ್ಯವಾಣಿ ಕೂಡ ಹೇಳಲಿದ್ದಾರೆ. ಹೌದು, ಸಾಮಾಜಿಕ ಮಾಧ್ಯಮದ ಈ ದೈತ್ಯ ಕಂಪನಿ ಶೀಘ್ರದಲ್ಲಿಯೇ Forcast App ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸದ್ಯ ಇದೊಂದು ಐಓಎಸ್ ಆಪ್ ಆಗಿದ್ದು, ಇದು ಕೊವಿಡ್ ಮಹಾಮಾರಿ ಸೇರಿದಂತೆ ವಿಶ್ವದ ಇತರೆ ಘಟನೆಗಳ ಭವಿಷ್ಯವಾಣಿಗೆ ಸಂಬಂಧಿಸಿದ ಒಂದು ಕಮ್ಯೂನಿಟಿ ರಚಿಸಲಿದೆ. ಆದರೆ, ಸದ್ಯ ಐಓಎಸ್ ಬಳಕೆದಾರರಿಗೆ ಮಾತ್ರ ಇದರ ಆಕ್ಸಸ್ ನೀಡಲಾಗಿದೆ.
ಹೇಗಿರಲಿದೆ ಕಮ್ಯೂನಿಟಿ
ಈ ಕಮ್ಯೂನಿಟಿಯ ಭಾಗವಾಗಿರುವ ಜನರು ಭವಿಷ್ಯದ ಕುರಿತು ತಮ್ಮ ಪ್ರಶ್ನೆಗಳನ್ನು ಕೇಳಬಹುದು. ಅಷ್ಟೇ ಅಲ್ಲ ಭವಿಷ್ಯವಾಣಿ ಕೂಡ ಮಾಡಬಹುದು ಮತ್ತು ಆದರೆ ಮೇಲೆ ಚರ್ಚೆ ಮಾಡಿ ತಮಗಿರುವ ಮಾಹಿತಿಯನ್ನು ಹಂಚಿಕೊಲ್ಲಬಹುದಾಗಿದೆ. ಸದ್ಯ ಇದೊಂದು ಇನ್ವೈಟ್ ಓನ್ಲಿ (Invite Only) ಬೀಟಾ ಆವೃತ್ತಿಯಲ್ಲಿದೆ.
ಈ ಕುರಿತು ಮಾಹಿತಿ ನೀಡಿರುವ ಫೇಸ್ ಬುಕ್ ಈ ಆಪ್ ನ ಕಮ್ಯೂನಿಟಿಯಲ್ಲಿ ಶಾಮೀಲಾಗಿರುವ ಸದಸ್ಯರಿಗೆ ಪರಸ್ಪರ ಚಾಟಿಂಗ್ ನಡೆಸುವ ಮೂಲಕ ತಮ್ಮಲ್ಲಿರುವ ಮಾಹಿತಿಯನ್ನು ಮುಂದುವರೆಸಲು ಅವಕಾಶ ಸಿಗಲಿದೆ. ಅಷ್ಟೇ ಅಲ್ಲ ಹಲವು ಸ್ವಾರಸ್ಯಕರ ಸಂಗತಿಗಳನ್ನು ಅರಿಯಲು ಆಸಕ್ತಿ ಕೂಡ ತೋರಬಹುದಾಗಿದೆ ಎಂದಿದೆ.
ಫೇಸ್ ಬುಕ್ ನ ಈ ಆಪ್ ಕೇಂದ್ರಿತ ನ್ಯೂ ಪ್ರಾಡಕ್ಟ್ ಎಕ್ಸ್ಪರಿಮೆಂಟೆಶೇನ್ ತಂಡ ಮೊದಲು ಅಮೇರಿಕಾ ಹಾಗೂ ಕೆನಡಾ ನಾಗರಿಕರಿಗೆ Forecast ಮಾಡಲು ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿದೆ.
ಈ ಎಲ್ಲ ಪೂರ್ವಾನುಮಾನಗಳು ವೆಬ್ಸೈಟ್ ಮೇಲೂ ಇರಲಿದ್ದು, ವಿಭಿನ್ನ ಪ್ಲಾಟ್ಫಾರ್ಮ್ ಗಳ ಮೇಲೆ ಇವುಗಳನ್ನು ಹಂಚಿಕೊಲ್ಲಬಹುದಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಫೇಸ್ ಬುಕ್ , ಸಂಸ್ಥೆ ಕೊವಿಡ್ 19 ಮಹಾಮಾರಿ ಹಾಗೂ ನಮ್ಮ ವಿಶ್ವದ ಮೇಲೆ ಇದರ ಪ್ರಭಾವದ ಪೂರ್ವಾನುಮಾನ ಹಚ್ಚಲು ಆರೋಗ್ಯ, ರಿಸರ್ಚ್ ಹಾಗೂ Intellectual ಗಳನ್ನು ಕಮ್ಯೂನಿಟಿಗಳಲ್ಲಿ ಸೇರಿಸಲಾಗುವುದು ಎಂದು ಹೇಳಿದೆ.
ಇದಕ್ಕೂ ಮೊದಲು ಫೇಸ್ ಬುಕ್ ನ NPE ತಂಡ CatchUP ಹೆಸರಿನ ಆಪ್ ಬಿಡುಗಡೆ ಮಾಡಿತ್ತು. ಈ ಆಪ್ ಸಹಾಯದಿಂದ ಏಕಕಾಲಕ್ಕೆ 8 ಜನರ ಜೊತೆಗೆ ವಾಯ್ಸ್ ಕಾಲ್ ಮಾಡಬಹುದಾಗಿದ್ದು, ಸದ್ಯ ಅಮೆರಿಕಾದ ಜನರು ಮಾತ್ರ ಈ ಆಪ್ ಅನ್ನು ಬಳಸುತ್ತಿದ್ದಾರೆ.