ವಾಷಿಂಗ್ಟನ್: ಜನರು ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ವಿಫಲವಾದರೆ ಅಮೆರಿಕಾ (America) ದಲ್ಲಿ ಪ್ರತಿದಿನವೂ ಲಕ್ಷಾಂತರ ಜನರಿಗೆ ಕೋವಿಡ್-19 (COVID-19) ಸೋಂಕು ತಗುಲುವ ಸಾಧ್ಯತೆ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿದ್ದು ಕೊರೊನಾವೈರಸ್ ಟಾಸ್ಕ್ ಫೋರ್ಸ್ ಸದಸ್ಯ ಡಾ. ಆಂಥೋನಿ ಫೌಸಿ ಈ ಬಗ್ಗೆ ಮಂಗಳವಾರ (ಜೂನ್ 30) ಎಚ್ಚರಿಸಿದ್ದಾರೆ.
ನಮ್ಮ ದೇಶದಲ್ಲಿ ಈಗ ದಿನಕ್ಕೆ 40 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಈಗಲೂ ಜನ ಇದರ ಗಾಂಭೀರ್ಯತೆ ಅರಿತು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾವು ದಿನಕ್ಕೆ 100,000 ವರೆಗೆ ಕರೋನಾವೈರಸ್ (Coronavirus) ಪ್ರಕರಣಗಳನ್ನು ದಾಖಲಿಸುವುದರಲ್ಲಿ ನನಗೆ ಆಶ್ಚರ್ಯವಾಗುವುದಿಲ್ಲ. ಇದು ನಿಜಕ್ಕೂ ಆತಂಕಕಾರಿ ಎಂದು ಫೌಸಿ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ವಿಚಾರಣೆಯ ಸಂದರ್ಭದಲ್ಲಿ ಸೆನೆಟ್ ಆರೋಗ್ಯ, ಶಿಕ್ಷಣ, ಕಾರ್ಮಿಕ ಮತ್ತು ಪಿಂಚಣಿ ಸಮಿತಿಯನ್ನು ಉದ್ದೇಶಿಸಿ ಫೌಸಿ ಈ ಎಚ್ಚರಿಕೆ ನೀಡಿದ್ದಾರೆ.
ಚೀನಾದೊಂದಿಗಿನ ಭಾರೀ ಉದ್ವಿಗ್ನತೆಯ ಮಧ್ಯೆ ಭಾರತಕ್ಕೆ ದೊಡ್ಡ ಗೆಲುವು
ಸಾಂಕ್ರಾಮಿಕ ರೋಗದ ನಿಯಂತ್ರಣದ ಬಗ್ಗೆ ಮಾತನಾಡುತ್ತಿದ್ದ ಅವರು ಹೊಸ ಪ್ರಕರಣಗಳನ್ನು ಗಮನಿಸಿದರೆ ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಸದ್ಯ ಏನಾಗುತ್ತಿದೆ ಎಂಬುದರ ಬಗ್ಗೆ ನನಗೆ ತೃಪ್ತಿಯಿಲ್ಲ. ಹಾಗಾಗಿ ಕರೋನಾವೈರಸ್ ನಿಯಂತ್ರಣಕ್ಕೆ ನಿಜವಾಗಿಯೂ ಏನಾದರೂ ಮಾಡಬೇಕಾಗಿದೆ. ಅದನ್ನು ತ್ವರಿತವಾಗಿ ಮಾಡಬೇಕಾಗಿರುವುದು ಇನ್ನೂ ಮುಖ್ಯ. ಸ್ಪಷ್ಟವಾಗಿ ಹೇಳಬೇಕಾದರೆ ದೇಶದಲ್ಲಿ ಕರೋನಾ ಇನ್ನೂ ನಿಯಂತ್ರಣದಲ್ಲಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಸೈನಿಕರ ಹುತಾತ್ಮತೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅಮೆರಿಕ ಹೇಳಿದ್ದೇನು?
ಯುಎಸ್ನಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚಾಗಿದ್ದರೂ, ಜನರು ಒಂದೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡುತ್ತಿದ್ದಾರೆ ಮತ್ತು ಮಾಸ್ಕ್ ಧರಿಸದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಫೌಸಿ, ಅಮೆರಿಕನ್ನರು ಅನ್ ಲಾಕ್ ಮಾರ್ಗಸೂಚಿಗಳ ಬಗ್ಗೆ ಸರಿಯಾದ ಗಮನ ಹರಿಸುತ್ತಿಲ್ಲ ಎಂದರು. ನಾವು ಈಗಾಗಲೇ ಸಾಕಷ್ಟು ತೊಂದರೆಯಲ್ಲಿ ಇದ್ದೇವೆ. ಈಗಲಾದರೂ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ನೋವು ಅನುಭವಿಸಬೇಕಾಗುತ್ತದೆ ಎಂದು ಅವರು ಮತ್ತೊಮ್ಮೆ ಅಮೆರಿಕನ್ನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
"ವ್ಯಕ್ತಿಗಳು ಮತ್ತು ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಸಾಮಾಜಿಕ ಪ್ರಯತ್ನದ ಭಾಗವಾಗಿ ನಾವು ಹೊಂದಿರುವ ಜವಾಬ್ದಾರಿಯನ್ನು ನಾವು ಒತ್ತಿಹೇಳಬೇಕಾಗಿದೆ. ನಾವೆಲ್ಲರೂ ಅದರಲ್ಲಿ ಒಂದು ಪಾತ್ರವನ್ನು ವಹಿಸಬೇಕಾಗಿದೆ" ಎಂದು ಫೌಸಿ ಸಾರ್ವಜನಿಕರಿಗೆ ಕರೆ ನೀಡಿದರು.
COVID-19 ಚಿಕಿತ್ಸೆಯ ಲಸಿಕೆ ಬಗ್ಗೆ ಮಾತನಾಡಿದ ಫೌಸಿ, ಮಾರಕ ವೈರಲ್ ಕಾಯಿಲೆಗೆ 2020 ರ ಅಂತ್ಯದ ವೇಳೆಗೆ ಅಥವಾ 2021 ರ ಆರಂಭದಲ್ಲಿ ಲಸಿಕೆ ಸಿದ್ಧವಾಗಬಹುದೆಂದು ಆಶಯ ವ್ಯಕ್ತಪಡಿಸಿದ್ದಾರೆ.