ನವದೆಹಲಿ: ರಿಲಯನ್ಸ್ ಜಿಯೋ ತನ್ನ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್JioMeet ಅನ್ನು ಗುರುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಸದ್ಯ ಈ ಆಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಲ್ಲಿ ಲಭ್ಯವಿದೆ. ಇದು HD ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಆಗಿದ್ದು, ಕೆಲವು ಬಳಕೆದಾರರಿಗೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬೀಟಾ ಆವೃತ್ತಿಯಲ್ಲಿ ನೀಡಲಾಗಿತ್ತು. ಈಗ ಇದನ್ನು ಆಂಡ್ರಾಯ್ಡ್ ಮತ್ತು ಐಫೋನ್ ಅಪ್ಲಿಕೇಶನ್ ಸ್ಟೋರ್ ಗಳಿಗೆ ಬಿಡುಗಡೆ ಮಾಡಲಾಗಿದೆ. ಈ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಮೂಲಕ ಏಕಕಾಲಕ್ಕೆ 100 ಜನರು ಪರಸ್ಪರ ಕನೆಕ್ಟ್ ಆಗಬಹುದಾಗಿದೆ. ಇದರಲ್ಲಿ ವಿಶೇಷತೆ ಎಂದರೆ, ಇದರಲ್ಲಿ ಕಾನ್ಫಾರೆನ್ಸ್ ಕರೆ ನಡೆಸಲು ಯಾವುದೇ ರೀತಿಯ ಕೋಡ್ ಅಥವಾ ಇನ್ವಿಟೇಶನ್ ನೀಡುವ ಅವಶ್ಯಕತೆ ಇಲ್ಲ.
ಈ ಆಪ್ ನ ಇತರೆ ವೈಶಿಷ್ಟ್ಯಗಳಲ್ಲಿ ಸಂದೇಶಗಳನ್ನು ಶೆಡ್ಯೂಲ್ ಮಾಡುವುದು, ಪರಸ್ಪರ ಸ್ಕ್ರೀನ್ ಶೇರ್ ಮಾಡುವುದು ಇತ್ಯಾದಿಗಳು ಶಾಮೀಲಾಗಿವೆ. ಈ ವಿಡಿಯೋ ಕಾನ್ಫಾರೆನ್ಸ್ ಆಪ್ ಅನ್ನು ಬಳಕೆದಾರರು ಅಂಡ್ರಾಯಿಡ್, ಐಫೋನ್ ಗಳ ಜೊತೆಗೆ ಡೆಸ್ಕ್ ಟಾಪ್, ಗೂಗಲ್ ಕ್ರೋಮ್ ಹಾಗೂ ಮೊಜಿಲ್ಲ್ಲಾ ಫೈರ್ ಫಾಕ್ಸ್ ಗಳ ಮೂಲಕ ಕೂಡ ಆಕ್ಸಸ್ ಮಾಡಬಹುದಾಗಿದೆ. ಈ ಸೇವೆ ಸಂಪೂರ್ಣ ಉಚಿತ ಸೇವೆಯಾಗಿರಲಿದೆ.
ಹೇಗೆ ಮತ್ತು ಎಲ್ಲಿಂದ ಡೌನ್ಲೋಡ್ ಮಾಡಬೇಕು
ಸ್ಮಾರ್ಟ್ ಫೋನ್ - ಇದಕ್ಕಾಗಿ ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಗೆ ಭೇಟಿ ನೀಡಬೇಕು. ಅಲ್ಲಿ JioMeet ಟೈಪ್ ಮಾಡಿ ಹುಡುಕಾಟ ನಡೆಸಿ ನಂತರ ಡೌನ್ ಲೋಡ್ ಮೇಲೆ ಕ್ಲಿಕ್ಕಿಸಿ.
ಡೆಸ್ಕ್ ಟಾಪ್- ಇದಕ್ಕಾಗಿ https://jiomeetpro.jio.com/home#download ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿಂದ ಈ ಆಪ್ ಅನ್ನು ಡೌನ್ಲೋಡ್ ಮಾಡಬೇಕಾಗಲಿದೆ.
Zoom, Google Meetಗೆ ಭಾರಿ ಪೈಪೋಟಿ
ರಿಲಯನ್ಸ್ ಜಿಯೋ ಏಪ್ರಿಲ್ 30 ರಂದು ದೇಶಾದ್ಯಂತ ತನ್ನ ವಿಡಿಯೋ ಕರೆ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಣೆ ನೀಡಿತ್ತು . ವಿಶ್ವಾದ್ಯಂತ ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ, ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ತಮ್ಮ ಕಚೇರಿ ಕೆಲಸವನ್ನು ಮನೆಯಿಂದಲೇ ಮಾಡುತ್ತಿದ್ದಾರೆ ಮತ್ತು ಉತ್ತಮ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್ಫಾರ್ಮ್ನ ಅವಶ್ಯಕತೆಯಿರುವ ಸಮಯದಲ್ಲಿ ಈ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.
ಜಿಯೋನ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅಧಿಕೃತವಾಗಿ ಪ್ರಾರಂಭವಾದ ನಂತರ, ಕಂಪನಿಯು ಜೂಮ್, ಗೂಗಲ್ ಮೀಟ್, ವೆಬ್ಎಕ್ಸ್ ಇತ್ಯಾದಿ ಸೇರಿದಂತೆ ಇತರ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್ಫಾರ್ಮ್ಗಳಿಗೆ ಭಾರಿ ಪೈಪೋಟಿ ನೀಡುವ ನಿರೀಕ್ಷೆ ಇದೆ.