ಕೊರೊನಾ ಸೊಂಕಿತರಾಗಿ ಆಸ್ಪತ್ರೆಗೆ ದಾಖಲಾಗಿ ಯೋಗ ಗುರು ಆದ ಚಾಂದಪಾಶಾ!

ಕೊರೊನಾ ಸೊಂಕಿತರಾಗಿ ಬಳ್ಳಾರಿಯ ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದಲ್ಲಿ 8 ದಿನಗಳ ಹಿಂದೆ ದಾಖಲಾಗಿರುವ ಕಂಪ್ಲಿ ಪುರಸಭೆಯ ಸದಸ್ಯ ಚಾಂದಪಾಶಾ ಅವರು ಸೊಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳು ಹಾಗೂ ಸೂರ್ಯನಮಸ್ಕಾರಗಳನ್ನು ಕಲಿಸುವುದರ ಜತೆಗೆ ನೈತಿಕ ಸ್ಥೈರ್ಯ ತುಂಬುವುದರ ಮೂಲಕ ಗಮನಸೆಳೆಯುತ್ತಿದ್ದಾರೆ.

Last Updated : Jul 17, 2020, 08:19 PM IST
ಕೊರೊನಾ ಸೊಂಕಿತರಾಗಿ ಆಸ್ಪತ್ರೆಗೆ ದಾಖಲಾಗಿ ಯೋಗ ಗುರು ಆದ ಚಾಂದಪಾಶಾ! title=

ಬೆಂಗಳೂರು: ಕೊರೊನಾ ಸೊಂಕಿತರಾಗಿ ಬಳ್ಳಾರಿಯ ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದಲ್ಲಿ 8 ದಿನಗಳ ಹಿಂದೆ ದಾಖಲಾಗಿರುವ ಕಂಪ್ಲಿ ಪುರಸಭೆಯ ಸದಸ್ಯ ಚಾಂದಪಾಶಾ ಅವರು ಸೊಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳು ಹಾಗೂ ಸೂರ್ಯನಮಸ್ಕಾರಗಳನ್ನು ಕಲಿಸುವುದರ ಜತೆಗೆ ನೈತಿಕ ಸ್ಥೈರ್ಯ ತುಂಬುವುದರ ಮೂಲಕ ಗಮನಸೆಳೆಯುತ್ತಿದ್ದಾರೆ.

ಆತ್ಮಸ್ಥೈರ್ಯವೇ ಸರ್ವಸ್ವ;ಧೈರ್ಯವೇ ಮುಖ್ಯ, ನೊಂದು ಈ ಕೊರೊನಾ ಚಿಕಿತ್ಸೆಗೆ ಸೊಂಕಿತರಾಗಿ ಬರಬೇಡಿ ಪಿಕ್‍ನಿಕ್ ಅಂತ ತಿಳಿದುಕೊಂಡು ಅರಾಮವಾಗಿ ಬನ್ನಿ;ಏನು ಆಗಲ್ಲ ಬಿ ಹ್ಯಾಪಿಯಾಗಿರಿ ಎಂದು ಹೊಸದಾಗಿ ಬರುವ ಸೊಂಕಿತರಲ್ಲಿ ಹಾಗೂ ಊಟ-ನೀರು ಸೇವಿಸದೇ ಮುಂದೇನು ನಮ್ಮಗತಿ ಅಂತ ಸೊಂಕಿತರ ವಾರ್ಡ್‍ನಲ್ಲಿ ತಲೆಮೇಲೆ ಕೈಯೆತ್ತಿ ಕುಳಿತವರಿಗೆ ಸ್ಪೂರ್ತಿಯ ಮಾತುಗಳನ್ನಾಡಿ, ಅವರಿಗೆ ಪ್ರತಿನಿತ್ಯ ಬೆಳಗ್ಗೆ ಯೋಗಾಸನದ ವಿವಿಧ ಭಂಗಿಗಳನ್ನು ಕಲಿಸಿಕೊಡುತ್ತಿದ್ದಾರೆ ಮತ್ತು ಸೂರ್ಯನಮಸ್ಕಾರದ ಮಹತ್ವದ ಬಗ್ಗೆ ತಿಳಿಸಿಕೊಡುವುದರ ಜತೆಗೆ ಸಂಸ್ಕøತ ಶ್ಲೋಕಗಳನ್ನು ಪಠಿಸುತ್ತಿರುವುದು ವಿಶೇಷ!.

ತಾವು ಅಲ್ಪಸಂಖ್ಯಾತ ಸಮುದಾಯದವರಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಮೊದಲು ನಾನು ಭಾರತೀಯ; ನನಗೆ ಯಾವುದೇ ಧರ್ಮವಿಲ್ಲ ಎಂದು ಹೇಳುವ ಚಾಂದಪಾಶಾ ಕಳೆದ 8 ದಿನಗಳಿಂದಲೂ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಯೋಗ ಹಾಗೂ ಸೂರ್ಯನಮಸ್ಕಾರ ಕಲಿಸುವುದರ ಜತೆಗೆ ತನ್ನೊಂದಿಗೆ ಚಿಕಿತ್ಸೆಗೆ ದಾಖಲಾಗಿರುವವರಿಗೆ ಸ್ವತಃ ತನ್ನದೇ ಖರ್ಚಿನಲ್ಲಿ ಕಷಾಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಿ ತನ್ನ ಕೈಯಾರೆ ಪ್ರತಿನಿತ್ಯ ಕಷಾಯ ಸಿದ್ದಪಡಿಸಿ 50 ಜನರಿಗೆ ಕುಡಿಸುತ್ತಿದ್ದಾರೆ.

14 ವರ್ಷಗಳಿಂದಲೂ ಈ ರೀತಿಯ ಯೋಗಾಸನ ಮತ್ತು ಸೂರ್ಯನಮಸ್ಕಾರ ಹಾಗೂ ವಿವಿಧ ರೀತಿಯ ಸಂಸ್ಕøತ ಶ್ಲೋಕಗಳನ್ನು ಪಠಿಸುತ್ತಿದ್ದೇನೆ. ಈ ಕೊರೊನಾವೇನು ದೊಡ್ಡ ರೋಗವಲ್ಲ. ಬೇಗ ಗುಣಮುಖರಾಗಿ ಮನೆಗೆ ಹೋಗುತ್ತೇವೆ ಎಂದು ತಿಳಿಸುವ ಚಾಂದಪಾಶಾ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕೊರೊನಾ ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

ಚಾಂದಪಾಶಾ ಅವರು ಇಲ್ಲಿ ದಾಖಲಾಗಿನಿಂದ ಇಲ್ಲಿಯವರೆಗೆ ಸೊಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳನ್ನು ಹಾಗೂ ಸೂರ್ಯನಮಸ್ಕಾರ ಕಲಿಸಿಕೊಡುತ್ತಿದ್ದಾರೆ. ಆಗಾಗ ಸಂಸ್ಕøತ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಜೊತೆಗೆ ಇಲ್ಲಿರುವ ಎಲ್ಲರಿಗೂ ತನ್ನ ಕೈಯಾರೇ ಕಷಾಯ ತಯಾರು ಮಾಡಿ ಒದಗಿಸುತ್ತಿದ್ದಾರೆ.ಇಲ್ಲಿ ದಾಖಲಾಗಿರುವ ಎಲ್ಲರಿಗೂ ಆತ್ಮಸ್ಥೈರ್ಯದ ಮಾತುಗಳನ್ನಾಡುವ ಮೂಲಕ ಅವರನ್ನು ಚಿಂತೆಯಿಂದ ವಿಮುಕ್ತಿ ಮಾಡಿಸಿ ಅವರನ್ನು ಸಂತೋಷದಿಂದ ಇರುವಂತೆ ಮಾಡುತ್ತಿದ್ದಾರೆ. ನಿಜಕ್ಕೂ ಈ ವ್ಯಕ್ತಿ ಅದ್ಭುತಸ್ಪೂರ್ತಿ ನಮಗೆಲ್ಲರಿಗೂ ಎಂದು ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದ ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಅವರು ಸಂತಸ ವ್ಯಕ್ತಪಡಿಸುತ್ತಾರೆ.

ಚಾಂದಪಾಶಾ ಅವರು ವಿವಿಧ ಯೋಗಾಸನದ ಭಂಗಿಗಳ ವಿಡಿಯೋ ಗಮನಿಸಿದೆ ಹಾಗೂ ಅವರಾಡುವ ಸ್ಪೂರ್ತಿಯುತ ಮಾತುಗಳನ್ನ ಆಲಿಸಿದೆ ತುಂಬಾ ಸಂತೋಷವಾಯ್ತು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದರು.
 

Trending News