ನವದೆಹಲಿ: ನಿಮಗಾಗಿ ಅಥವಾ ನಿಮ್ಮ ಪ್ರೀತಿ ಪಾತ್ರರಿಗಾಗಿ ಕಡಿಮೆ ಬೆಲೆಯ ಫೋನ್ ಖರೀದಿಸಲು ನೀವು ಯೋಚಿಸುತ್ತಿದ್ದೀರಾ? ನಿಮ್ಮ ಉತ್ತರ ಹೌದು ಎಂದಾದರೆ ನಿಮಗಾಗಿ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಟೆಲಿಕಾಂ ಕಂಪನಿ ಜಿಯೋ (Jio) 500 ರೂ.ಗಿಂತ ಕಡಿಮೆ ಬೆಲೆಯಿರುವ ಫೋನ್ ಅನ್ನು ಬಿಡುಗಡೆ ಮಾಡಬಹುದು.
ಅದು ಜಿಯೋ ಬಿಡುಗಡೆಗೊಳಿಸಲು ನಿರ್ಧರಿಸಿರುವ ಜಿಯೋ ಫೋನ್ 5 (JioPhone 5) ಆಗಿರುವ ಸಾಧ್ಯತೆ ಇದೆ. 91 ಮೊಬೈಲ್ಸ್ ಎಂಬ ವೆಬ್ಸೈಟ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಕಂಪನಿಯು ಜಿಯೋಫೋನ್ 5 ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಮುಂಬರುವ ಸಮಯದಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೇ. ಕಂಪನಿಯು ಈಗಾಗಲೇ ಒಂದು ಸಾವಿರ ರೂಪಾಯಿ ಬೆಲೆಗೆ ಜಿಯೋಫೋನ್ ಅನ್ನು ಬಿಡುಗಡೆ ಮಾಡಿದೆ, ಅದು ವ್ಯಾಪಕ ಜನಪ್ರೀಯತೆ ಕೂಡ ಗಳಿಸಿದೆ. ಇದರ ನಂತರ ಕಂಪನಿಯು ಜಿಯೋ ಫೋನ್ 2 ಅನ್ನು ಸಹ ಪರಿಚಯಿಸಿದೆ. ಈ ಫೋನ್ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ.
ಜಿಯೋಫೋನ್ 5 ಮೂಲ ಜಿಯೋ ಫೋನ್ನ ಲೈಟರ್ ಆವೃತ್ತಿಯಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಅದರ ಬೆಲೆ ಕೂಡ ಹಿಂದಿನ ಫೋನ್ಗಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ವರದಿಯನ್ನು ಓದಿ ನೀವೂ ಕೂಡ ಆಶ್ಚರ್ಯಚಕಿತರಾಗಿರಬಹುದು. ಜಿಯೋ ಮೂಲಗಳಿಂದ ಸೋರಿಕೆಯಾಗಿರುವ ಮಾಹಿತಿಯನ್ನು ಪರಿಗಣಿಸಿದರೆ, ಜಿಯೋ ಫೋನ್ 5 ರ ಆರಂಭಿಕ ಬೆಲೆ 399 ರೂ. ಇರಲಿದ್ದು, ಈ ವರದಿ ನಿಜ ಎಂದು ಸಾಬೀತಾದಲ್ಲಿ ಇದು ಅತ್ಯಂತ ಅಗ್ಗದ ಬೆಲೆಯ ಫೋನ್ ಆಗಲಿದೆ.
ಜಿಯೋ ಬಿಡುಗಡೆಗೊಳಿಸಲು ಹೊರಟಿರುವ ಈ ಫೋನ್ ನಲ್ಲಿ ಬಳಕೆದಾರರಿಗೆ 4ಜಿ ಸಪೋರ್ಟ್ ಕೂಡ ಸಿಗುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಈ ಫೋನ್ KaiOS ಪ್ಲಾಟ್ಫಾರ್ಮ್ ಮೇಲೆ ಕಾರ್ಯ ನಿರ್ವಹಿಸಲಿದೆ. ಈ ಫೋನ್ ನಲ್ಲಿ ಕೆಲ ಪ್ರೀ-ಇನ್ಸ್ತಾಲ್ದ್ ಆಪ್ ಗಳನ್ನು ಕೂಡ ನೀಡಲಾಗುತ್ತಿದೆ. ಇದಲ್ಲದೆ ವಾಟ್ಸ್ ಆಪ್, ಫೇಸ್ ಬುಕ್ ಹಾಗೂ ಗೂಗಲ್ ಆಪ್ ಗಳು ಈ ಫೋನ್ ನಲ್ಲಿ ಮೊದಲಿನಿಂದಲೇ ಇರಲಿವೆ. ಈ ಫೋನ್ ಬಳಸಿ ಜಿಯೋ-ಜಿಯೋ ವೈಸ್ ಕರೆಗಳಿಗೆ ಯಾವುದೇ ಶುಲ್ಕ ವಿಧಿಸಲಾಗುತ್ತಿಲ್ಲ ಎನ್ನಲಾಗಿದೆ. ಈ ಫೋನ್ ಮೂಲಕ ಒಂದು ವೇಳೆ ನೀವು ಇಂಟರ್ನೆಟ್ ಬಳಸಿದರೆ, ನೀವು ವಿಭಿನ್ನ ಪ್ಲಾನ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಲಿದೆ.