ನಟ ಸುಶಾಂತ್ ಸಿಂಗ್ ರಜಪೂತ್ ಅವರ 2 ಬ್ಯಾಂಕ್ ಖಾತೆಗಳಿಂದ ರಿಯಾ ಚಕ್ರವರ್ತಿಗೆ ಹಣ ವರ್ಗಾವಣೆ

ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಾಲ್ಕು ಬ್ಯಾಂಕ್ ಖಾತೆಗಳಲ್ಲಿ ಎರಡು ಖಾತೆಗಳಿಂದ ಹಣವನ್ನು ರಿಯಾ ಚಕ್ರವರ್ತಿಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. 

Last Updated : Aug 6, 2020, 09:30 PM IST
ನಟ ಸುಶಾಂತ್ ಸಿಂಗ್ ರಜಪೂತ್ ಅವರ 2 ಬ್ಯಾಂಕ್ ಖಾತೆಗಳಿಂದ ರಿಯಾ ಚಕ್ರವರ್ತಿಗೆ ಹಣ ವರ್ಗಾವಣೆ title=
file photo

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಾಲ್ಕು ಬ್ಯಾಂಕ್ ಖಾತೆಗಳಲ್ಲಿ ಎರಡು ಖಾತೆಗಳಿಂದ ಹಣವನ್ನು ರಿಯಾ ಚಕ್ರವರ್ತಿಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. 

ಮನಿ ಲಾಂಡರಿಂಗ್ ಸಾಧ್ಯತೆಯನ್ನು ಪರಿಶೀಲಿಸಲು ಜೂನ್ 14 ರಂದು ನಿಧನರಾದ ನಟನ ಆರ್ಥಿಕ ಪರಿಸ್ಥಿತಿಯನ್ನು ಸಂಸ್ಥೆ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದ ಸಂದರ್ಭದಲ್ಲಿ ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದರು. ಆದರೆ  ಇನ್ನೊಂದೆಡೆಗೆ ಬಾಲಿವುಡ್‌ನ ಸ್ವಜನಪಕ್ಷಪಾತ ಮತ್ತು ಗುಂಪುಗಳಿಂದ  ಅವರನ್ನು ಹೊರಗೆ ಇಟ್ಟಿರುವುದು ಅವರ ಸಾವಿಗೆ ಕಾರಣವಾಯಿತು ಎಂದು ಆರೋಪಗಳು ಕೇಳಿ ಬರುತ್ತಿವೆ.ಈಗ ಈ ಪ್ರಕರಣದ ವಿಚಾರವಾಗಿ ಸುದೀರ್ಘ ತನಿಖೆ ನಡೆಯುತ್ತಿದೆ.

Sushant singh Rajput Case: ಜಾರಿ ನಿರ್ದೇಶನಾಲಯದಿಂದ ಶುಕ್ರವಾರ ರಿಯಾ ಚಕ್ರವರ್ತಿ ವಿಚಾರಣೆ

ಈ ಮಧ್ಯೆ, ಸುಶಾಂತ್ ಸಿಂಗ್ ರಜಪೂತ್ ಅವರ ಪಾಟ್ನಾ ಮೂಲದ ಕುಟುಂಬ, ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದು, ಆಕೆ ಮತ್ತು ಅವರ ಕುಟುಂಬವು ಸುಶಾಂತ್ ಗೆ ಆರ್ಥಿಕವಾಗಿ ಮೋಸ ಮಾಡಿದ್ದಲ್ಲದೆ ಮಾನಸಿಕ ಕಿರುಕುಳಕ್ಕೆ ನೀಡುವ ಮೂಲಕ ಅವರನ್ನು ಆತ್ಮಹತ್ಯೆಗೆ ದೂಡುವಂತೆ ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್ ಅವರು ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್‌ನಲ್ಲಿ ಖಾತೆಗಳನ್ನು ಹೊಂದಿದ್ದರು. ಕೊಟಾಕ್ ಮತ್ತು ಎಚ್‌ಡಿಎಫ್‌ಸಿಯ ಅತಿದೊಡ್ಡ ಖಾತೆಯಿಂದ ಹಣವನ್ನು ರಿಯಾ ಚಕ್ರವರ್ತಿಗೆ ವರ್ಗಾಯಿಸಲಾಗಿದೆ.ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬವು ಮುಂಬೈನ ಪ್ರಧಾನ ಸ್ಥಳದಲ್ಲಿ ಎರಡು ಆಸ್ತಿಗಳನ್ನು ಹೊಂದಿದ್ದು, ಅವುಗಳನ್ನು ಇತ್ತೀಚೆಗೆ ಖರೀದಿಸಲಾಗಿದೆ. ಈ ಆಸ್ತಿಗಳ ದಾಖಲೆಗಳನ್ನು ತೋರಿಸಲು ಸಂಸ್ಥೆ ಅವಳನ್ನು ಕೇಳಿದೆ.

Big Expose- Pooja ಹೆಸರಿನಡಿ Sushant Singh Rajput ಅವರ ಖಾತೆಯಿಂದ ಹಣ ವಿಥ್ ಡ್ರಾ ಮಾಡಿದ್ದೆಷ್ಟು? ಇಲ್ಲಿದೆ ವಿವರ

ಮುಂಬೈನ ಹೊರವಲಯದಲ್ಲಿರುವ ಪವಾನಿ ಎಂಬಲ್ಲಿ ಸಣ್ಣ ಫಾರ್ಮ್ ಹೌಸ್ ಇತ್ತು ಎಂದು ನಟನ ಮೂಲಗಳು ತಿಳಿಸಿವೆ. ಮುಂಬೈ ಬಳಿಯ ಗೋರೆಗಾಂವ್‌ನಲ್ಲಿ ಅಪಾರ್ಟ್‌ಮೆಂಟ್ ಕೂಡ ಹೊಂದಿದ್ದರು. ಎರಡು ಕಾರುಗಳನ್ನು ಹೊಂದಿದ್ದ ನಟ ಕೂಡ ಕಾರು ಸಾಲವನ್ನು ತೀರಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆಗೆ ಸುಶಾಂತ್ ತಂದೆ ನೀಡಿರುವ ದೂರುಗಳು ತನಗೆ ಕಿರುಕುಳ ನೀಡಲು ದಾಖಲಿಸಲಾಗಿದೆ ಎಂದು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಪಾಟ್ನಾ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ, ಬಿಹಾರ ಪೊಲೀಸ್ ಸದಸ್ಯರಾದ ಸುಶಾಂತ್ ರಜಪೂತ್ ಅವರ ತಂದೆ ಕೆ.ಕೆ.ರಜಪೂತ್ ಅವರು ಸ್ಥಳೀಯವಾಗಿ ಸಾಕಷ್ಟು ಪ್ರಭಾವವನ್ನು ಹೊಂದಿದ್ದಾರೆ ಮತ್ತು ಆಕೆಗೆ ನ್ಯಾಯಯುತ ವಿಚಾರಣೆ ಸಿಗುವುದಿಲ್ಲ ಎಂದು ರಿಯಾ ಹೇಳಿದರು.

ರಿಯಾ ಚಕ್ರವರ್ತಿ ವಿಮಾನ ಹಾಗೂ ಹೋಟೆಲ್ ವೆಚ್ಚವೆಲ್ಲವನ್ನು ಭರಿಸಿದ್ದ ಸುಶಾಂತ್ ಸಿಂಗ್ ರಜಪೂತ್ ...!

ರಿಯಾ ಚಕ್ರವರ್ತಿ ಅವರು ಸುಶಾಂತ್ ರಜಪೂತ್ ಜೊತೆಗೆ ಕಳೆದ ಒಂದು ವರ್ಷದಿಂದ  ವಾಸಿಸುತ್ತಿದ್ದರು ಮತ್ತು ಜೂನ್ ನಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.ಅವರ ಕುಟುಂಬದ ಕೋರಿಕೆಯ ಮೇರೆಗೆ ಬಿಹಾರದಲ್ಲಿ ದಾಖಲಾದ ಪ್ರಕರಣವನ್ನು ಈಗ ಕೇಂದ್ರ ತನಿಖಾ ದಳಕ್ಕೆ ವರ್ಗಾಯಿಸಲಾಗುತ್ತಿದೆ. ಸಿಬಿಐ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿಲ್ಲ.

ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ನಿರ್ದೇಶಕ-ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ, ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ, ನಿರ್ದೇಶಕ ಮುಖೇಶ್ ಛಾಬ್ರಾ, ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಮತ್ತು ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಸೇರಿದಂತೆ ಮಹಾರಾಷ್ಟ್ರ ಪೊಲೀಸರು ಈಗಾಗಲೇ 40 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

 

Trending News