ನವದೆಹಲಿ: ಭಾರತಕ್ಕೆ ಶೀಘ್ರದಲ್ಲಿಯೇ ಏರ್ ಇಂಡಿಯಾ ಒನ್ (Air India One) Boeing 777-300ERs ಸಿಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಈ ವಿಮಾನ ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರ್ಪತಿಗಳು ಸೇರಿದಂತೆ VVIP ಪ್ರವಾಸಕ್ಕೆ ಬಳಸಲಾಗುವುದು.
ಈ ವಿಮಾನದ ರಕ್ಷಣೆಯು ಅಭೇಧ್ಯವಾಗಿರಲಿದೆ. ಜೊತೆಗೆ ಇದು ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಇದರ ಕ್ಯಾಬಿನ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದರಲ್ಲಿ ಲಾರ್ಜ್ ಏರ್ ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್‌ಮೆಶರ್ಸ್ (LAIRCM) ಮತ್ತುಸೆಲ್ಫ್ ಪ್ರೊಟೆಕ್ಷನ್ ಸೂಟ್ (SPS) ಶಾಮೀಲಾಗಿವೆ. ವಿಮಾನವು ಸುಧಾರಿತ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅನ್ನು ಸಹ ಹೊಂದಿರುತ್ತದೆ, ಇದು ವಿಮಾನವನ್ನು ಯಾವುದೇ ರೀತಿಯ ನೆಲದಿಂದ ಗಾಳಿಯ ದಾಳಿಯಿಂದ ರಕ್ಷಿಸಲಿದೆ ಹಾಗೂ ಪ್ರತೀಕಾರ ತೀರಿಸುವ ಸಾಮರ್ಥ್ಯ ಹೊಂದಿದೆ.
ಭಾರತೀಯ ವಾಯುಪಡೆಯ ಪೈಲಟ್‌ಗಳ ಜೊತೆಗೆ ಈ ಅತ್ಯಾಧುನಿಕ ವಿವಿಐಪಿ ವಿಮಾನವನ್ನು ಹಾರಿಸಲು 40 ಏರ್ ಇಂಡಿಯಾ ಪೈಲಟ್‌ಗಳ ತಂಡಕ್ಕೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಭಾರತದ ವಿವಿಐಪಿ 747 ವಿಮಾನಗಳು ಬೋಯಿಂಗ್ ಜೆಟ್‌ಗಳಲ್ಲಿ ಪ್ರಯಾಣ ಕೈಗೊಳ್ಳುತ್ತಿದ್ದರು. ಇದನ್ನು ಸಾರ್ವಜನಿಕರಿಗೆ ಮತ್ತು ಏರ್ ಇಂಡಿಯಾದ ಸಂಬಂಧಿತ ಸೇವೆಗಳಿಗಾಗಿ ಬಳಸಲಾಗುತ್ತಿತ್ತು.
ವಿವಿಐಪಿಗಳ ಪ್ರಯಾಣಕ್ಕಾಗಿ ಹೊಸ ಮತ್ತು ಅತ್ಯಾಧುನಿಕ ವಿಮಾನ ಸೇರಿಸುವ ಸಿದ್ಧತೆಗಳು ಬಹಳ ಸಮಯದಿಂದ ನಡೆಯುತ್ತಿತ್ತು. ಏಕೆಂದರೆ 747 ಬೋಯಿಂಗ್ ದೀರ್ಘ ಪ್ರಯಾಣಕ್ಕೆ ಹೆಚ್ಚು ಸೂಕ್ತವಲ್ಲ. ಇಂಧನ ತುಂಬಿದ ನಂತರ ಈ ವಿಮಾನಗಳು 10 ಗಂಟೆಗಳ ವರೆಗೆ ಪ್ರಯಾಣ ನಡೆಸಬಲ್ಲವು. ಆದರೆ ಹೊಸ ವಿಮಾನ ನಿರಂತರವಾಗಿ 17 ಗಂಟೆಗಳಿಗಿಂತ ಹೆಚ್ಚು ಕಾಲ ಪ್ರಯಾಣಿಸುವ ಸಾಮರ್ಥ್ಯ ಹೊಂದಿವೆ.
ವಿಮಾನದ ಸುಧಾರಿತ ಸಂವಹನ ವ್ಯವಸ್ಥೆಯಿಂದಾಗಿ, ಪ್ರಧಾನಿ ಅಥವಾ ರಾಷ್ಟ್ರಪತಿಗಳು ಯಾವುದೇ ಟ್ಯಾಪಿಂಗ್ ಇಲ್ಲದೆ ವಿಡಿಯೋ ಅಥವಾ ಆಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂಬಂಧಪಟ್ಟ ಭೂಮಿಯ ಮೇಲಿರುವ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ. ಇದಲ್ಲದೆ , ಏರ್ ಇಂಡಿಯಾ ಒನ್‌ನಲ್ಲಿ ಲ್ಯಾಬ್, ಊಟದ ಕೋಣೆ, ದೊಡ್ಡ ಕಚೇರಿ ಮತ್ತು ಕಾನ್ಫರೆನ್ಸ್ ಕೊಠಡಿ ಇರಲಿದೆ. ಅಷ್ಟೇ ಅಲ್ಲ, ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ವೈದ್ಯಕೀಯ ಸೂಟ್ ಸಹ ವಿಮಾನದಲ್ಲಿ ಲಭ್ಯವಿರಲಿದೆ.
ಬೇರೆ ಬೇರೆ ದೇಶಗಳ ಪ್ರಮುಖರು ಯಾವ ಯಾವ ವಿಮಾನಗಳನ್ನು ಬಳಸುತ್ತಾರೆ ತಿಳಿಯೋಣ
ಅಮೆರಿಕಾದ ರಾಷ್ಟ್ರಪತಿ
ಅಮೆರಿಕಾದ ರಾಷ್ಟ್ರಾಧ್ಯಕ್ಷರು'ಏರ್ ಫೋರ್ಸ್ ಒನ್' ಬಳಕೆ ಮಾಡುತ್ತಾರೆ. ಇದೊಂದು ಬೋಯಿಂಗ್ 747-200B ಸರಣಿಯ ವಿಮಾನವಾಗಿದೆ. ಈ ವಿಮಾನದಲ್ಲಿ ಗಾಳಿಯಲ್ಲಿಯೂ ಕೂಡ ಇಂಧನ ತುಂಬಿಸುವ ವ್ಯವಸ್ಥೆ ಇದೆ. ಇದು ಅಡ್ವಾನ್ಸ್ಡ್ ಸಿಕ್ಯೋರಿಟಿ ಕಮ್ಯೂನಿಕೇಶನ್ ಉಪಕರಣಗಳನ್ನು ಹೊಂದಿದೆ. ದೇಶದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಇದು ಮೊಬೈಲ್ ಕಮಾಂಡ್ ಸೆಂಟರ್ ರೂಪದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.
ರಶಿಯಾ ರಾಷ್ಟ್ರಪತಿ
ರಶಿಯಾ ರಾಷ್ಟ್ರಧ್ಯಕ್ಷರು ILP-96-300PU ಜೆಟ್ ನ ಬಳಕೆ ಮಾಡುತ್ತಾರೆ. ಇದೊಂದು ಓಡಾಡುವ ಅಭೇಧ್ಯ ಕೋಟೆಗಿಂತ ಕಮ್ಮಿ ಏನು ಇಲ್ಲ. ಉನ್ನತ ಸಂಚಾರ ತಂತ್ರಜಾನ ಪ್ರಣಾಳಿಯನ್ನು ಒಳಗೊಂಡ ಈ ವಿಮಾನ, ದಾಳಿಯ ಸ್ಥಿತಿಯಲ್ಲಿ ಸೈನಿಕರಿಗೆ ಆದೇಶ ನೀಡುವ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಕಚೇರಿ, ಬೆಡ್ ರೂಮ್ ಹಾಗೂ ಜಿಮ್ ಅನ್ನು ನಿರ್ಮಿಸಲಾಗಿದೆ. ಆದರೆ, ರಾಷ್ಟ್ರಾಧ್ಯಕ್ಷ ಪುಟಿನ್ ಯಾವ ವಿಮಾನದಲ್ಲಿ ಪ್ರಯಾಣ ಕೈಗೊಳ್ಳಲಿದ್ದಾರೆ ಎಂಬುದು ಕೊನೆಯ ಗಳಿಗೆಯವರೆಗೂ ಗೊತ್ತಾಗುವುದಿಲ್ಲ.
ಚೀನಾ ರಾಷ್ಟ್ರಪತಿ
ಚೀನಾ ರಾಷ್ಟ್ರಪತಿಗಳು ದೊಡ್ಡ ಬೋಯಿಂಗ್ 747-400 ಶ್ರೇಣಿಯ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ಇದೂ ಕೂಡ ಒಂದು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ವಿಮಾನವಾಗಿದೆ. ಇದರಲ್ಲಿ ಲಿವಿಂಗ್ ರೂಮ್, ಬೆಡ್ ರೂಮ್ ಹಾಗೂ ಆಫೀಸ್ ಇದೆ. ಇಲ್ಲಿ ರಾಷ್ಟ್ರಪತಿಗಳಿಗಾಗಿ ಯಾವುದೇ ವಿಶೇಷ ವಿಮಾನವಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಅವರ ಸೇವೆಗಾಗಿ ಯಾವುದೇ ವಿಮಾನ ಇಲ್ಲ ಎಂದಾದ ಸಂದರ್ಭದಲ್ಲಿ ಏರ್ ಚೈನಾ ಅವರಿಗಾಗಿ ವಿಮಾನದ ವ್ಯವಸ್ಥೆ ಮಾಡುತ್ತದೆ.