ಬೆಂಗಳೂರು : 2020-21 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ ಅಡಿಯಲ್ಲಿ ಜೀವರಕ್ಷಕ (ಲೈಫ್ ಗಾರ್ಡ್) ಜಿಮ್/ಫಿಟ್ನೆಸ್ ತರಬೇತುದಾರರು, ಕ್ರೀಡಾ ಅಂಕಣ ಗುರುತುಗಾರ (ಮಾರ್ಕರ್) ಯುವಜನರಿಗೆ ತರಬೇತಿ ನೀಡಲು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ಆಸಕ್ತ ಯುವಕ, ಯುವತಿಯರು ಸೆ. 30, 2020 ರ ಒಳಗಾಗಿ ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪಡೆದು ಭರ್ತಿ ಮಾಡಿ ಪ್ರಸ್ತಾವನೆಗಳನ್ನು ಸಲ್ಲಿಸಲು ತಿಳಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸುವವರಿಗೆ ಕ್ರೀಡಾಗಂಟು, ಊಟೋಪಹಾರ, ವಸತಿ ವ್ಯವಸ್ಥೆ ಹಾಗೂ ಪ್ರಯಾಣ ಭತ್ಯೆ ಇಲಾಖೆಯಿಂದ ನೀಡಲಾಗುವುದು. ಯುವಕ, ಯುವತಿಯರಿಗೆ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಯುವಜನರು ಸದುಪಯೋಗಪಡೆದುಕೊಳ್ಳಬೇಕು ಹಾಗೂ ಇಲಾಖೆ ವತಿಯಿಂದ ವಿವಿಧ ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ತರಬೇತಿ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆ ಮತ್ತು ಮಾರ್ಗಸೂಚಿಗಳನ್ನು ಪಡೆಯಲು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ದೂರವಾಣಿ ಸಂಖ್ಯೆ:0836-2447424 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.