ಮಹಿಳೆಯರಿಗಾಗಿ PNB ವತಿಯಿಂದ ವಿಶೇಷ ಸ್ಕೀಮ್, ದ್ವಿಚಕ್ರ ವಾಹನ ಖರೀದಿಗೆ ಜಬರ್ದಸ್ತ್ ಆಫರ್

ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ( PNB) ಮಹಿಳೆಯರಿಗಾಗಿ ತನ್ನ ವಿಶೇಷ ಆಫರ್ PNB ಪಾವರ್ ರೇಡ್ ಸ್ಕೀಮ್ (PNB Power Ride) ಜಾರಿಗೊಳಿಸಿದೆ. ಈ ಯೋಜನೆಯಡಿ ಬ್ಯಾಂಕ್ ಅತ್ಯಂತ ಕಡಿಮೆ ತಿಂಗಳ ಆದಾಯ ಹೊಂದಿದ ಮಹಿಳೆಯರಿಗೂ ಕೂಡ ಬೈಕ್, ಸ್ಕೂಟರ್ ಹಾಗೂ ಮೊಪೆಡ್ ಖರೀದಿಸಲು ಫೈನಾನ್ಸ್ ನೀಡುವುದಾಗಿ ಹೇಳಿದೆ.

Last Updated : Sep 22, 2020, 11:20 AM IST
  • ಮಹಿಳೆಯರಿಗಾಗಿ ಪಿಎನ್‌ಬಿಯ ಹೊಸ ಯೋಜನೆ.
  • ದ್ವಿಚಕ್ರ ವಾಹನವನ್ನು ಖರೀದಿಸಲು ಪಿಎನ್‌ಬಿ ಕೊಡುಗೆ ನೀಡುತ್ತದೆ.
  • ಕೇವಲ 8000 ಸಂಬಳ ಇರುವವರಿಗೂ ಕೂಡ ಸಾಲ ಲಭ್ಯವಿರುತ್ತದೆ
ಮಹಿಳೆಯರಿಗಾಗಿ PNB ವತಿಯಿಂದ ವಿಶೇಷ ಸ್ಕೀಮ್, ದ್ವಿಚಕ್ರ ವಾಹನ ಖರೀದಿಗೆ ಜಬರ್ದಸ್ತ್ ಆಫರ್  title=

ನವದೆಹಲಿ: ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ( PNB) ಮಹಿಳೆಯರಿಗಾಗಿ ತನ್ನ ವಿಶೇಷ ಆಫರ್ PNB ಪಾವರ್ ರೇಡ್ ಸ್ಕೀಮ್ (PNB Power Ride) ಜಾರಿಗೊಳಿಸಿದೆ. ಈ ಯೋಜನೆಯಡಿ ಬ್ಯಾಂಕ್ ಅತ್ಯಂತ ಕಡಿಮೆ ತಿಂಗಳ ಆದಾಯ ಹೊಂದಿದ ಮಹಿಳೆಯರಿಗೂ ಕೂಡ ಬೈಕ್, ಸ್ಕೂಟರ್ ಹಾಗೂ ಮೊಪೆಡ್ ಖರೀದಿಸಲು ಫೈನಾನ್ಸ್ ನೀಡುವುದಾಗಿ ಹೇಳಿದೆ. ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಓರ್ವ ಮಹಿಳೆ ತಿಂಗಳಿಗೆ ರೂ.8000 ಆದಾಯ ಹೊಂದಿದ್ದರು ಕೂಡ ಸುಲಭವಾಗಿ ಬೈಕ್ ಅಥವಾ ಸ್ಕೂಟರ್ ಸುಲಭವಾಗಿ ಖರೀದಿಸಬಹುದು ಮತ್ತುPNB ಧನಸಹಾಯ ಮಾಡಲಿದೆ.

ಇದನ್ನು ಓದಿ- Driving Licence, RC ಎಕ್ಸ್ಪೈರ್ ಆಗಿದೆಯೇ? ಇಲ್ಲಿದೆ ಒಂದು ಉಪಯುಕ್ತ ಮಾಹಿತಿ

ಯಾರು ಇದಕ್ಕೆ ಅಪ್ಲೈ ಮಾಡಬಹುದು?
ಈ ಧನ ಸಹಾಯ ಪಡೆಯಲು ಓರ್ವ ಮಹಿಳೆ ತನ್ನ ನೌಕರಿಯಲ್ಲಿ ಕನಿಷ್ಠ ಅಂದರೆ 6 ತಿಂಗಳುಗಳ ಸೇವೆ ಪೂರೈಸಿರಬೇಕು. ಒಂದು ವೇಳೆ ಸೆಲ್ಫ್ ಎಂಪ್ಲಾಯಿಡ್ ಆಗಿದ್ದರೆ ನಿಮಗೆ ನಿಮ್ಮ ಕೆಲಸದಲ್ಲಿ ಕನಿಷ್ಠ ಅಂದರೆ ಒಂದು ವರ್ಷದ ಅನುಭವವಿರಬೇಕು.  ವಿದ್ಯಾರ್ಥಿಗಳಾಗಿದ್ದರೆ ಅವರು ತಮ್ಮ ಪೋಷಕರನ್ನು ಅಪ್ಲಿಕೆಂಟ್ ಮಾಡಬಹುದು.  ಆದರೆ ಯಾವುದೇ ಮಹಿಳೆ ಇದರಲ್ಲಿ ಅರ್ಜಿಸಲ್ಲಿಸಲು ಕನಿಸ್ಥ 18 ವರ್ಷ ಪೂರ್ಣಗೊಳಿಸಿರಬೇಕು ಹಾಗೂ ಗರಿಷ್ಟ 65 ವರ್ಷ ದಾಟಿರಬಾರದು.  ನಿಮ್ಮ ಬಳಿ ಅಧಿಕೃತ ಡ್ರೈವಿಂಗ್ ಲೈಸನ್ಸ್ (Driving License) ಕೂಡ ಇರಬೇಕು.

ಆದಾಯ ಎಷ್ಟಿರಬೇಕು?
ಒಂದು ವೇಳೆ ನಿಮ್ಮ ತಿಂಗಳ ಆದಾಯ ಕನಿಷ್ಠ ಅಂದರೆ 8000 ರೂ.ಗಳಾಗಿದ್ದರೆ ನೀವು ಈ ಸ್ಕೀಮ್ ಲಾಭ ಪಡೆಯಬಹುದು. ಇದಕ್ಕಾಗಿ ನೀವು ಲೇಟೆಸ್ಟ್ 3 ತಿಂಗಳ ನಿಮ್ಮ ಸ್ಯಾಲರಿ ಸ್ಲಿಪ್ ನೀಡಬೇಕು. ಕಳೆದ ವರ್ಷದ ಫಾರ್ಮ್ 16 ಅಥವಾ ITR ಕಾಪಿ ನೀಡಬೇಕು. ಒಂದು ವೇಳೆ ಸೆಲ್ಫ್ ಎಂಪ್ಲಾಯಿಡ್ ಆಗಿದ್ದರೆ. ಕಳೆದ ಆರ್ಥಿಕ ವರ್ಷದ ITR ಕಾಪಿ ಬ್ಯಾಂಕ್ ಗೆ ನೀಡಬೇಕು.

ಇದನ್ನು ಓದಿ- ಇನ್ಮುಂದೆ DL-RCಗಾಗಿ RTO ಕಚೇರಿಯ ಚಕ್ಕರ್ ಹೊಡೆಯಬೇಕಾಗಿಲ್ಲ... ಕಾರಣ ಇಲ್ಲಿದೆ

ಎಷ್ಟು ಸಾಲ ಪಡೆಯಬಹುದು?
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಈ ಸ್ಕೀಮ್ ನಲ್ಲಿ ಗರಿಷ್ಟ ಅಂದರೆ 60000 ಸಾಲ ಪಡೆಯಬಹುದು. ಇದರಲ್ಲಿ ಎಕ್ಸ್ ಷೋರೂಂ  ಬೆಲೆಯ ಶೇ. 10 ರಷ್ಟು ಮಾರ್ಜಿನ್ ಇರಲಿದೆ. ಈ ಸಾಲವನ್ನು ಗರಿಷ್ಟ ಅಂದರೆ 36 ತಿಂಗಳ ಅವಧಿಯಲ್ಲಿ ನೀವು ಮರುಪಾವತಿಸಬೇಕು ಎಂಬುದನ್ನು ನೆನಪಿಡಿ.

ಲೋನ್ ಪಡೆಯಲು ಚಾರ್ಜ್ ನೀಡಬೇಕು?
ಈ ಫೈನಾನ್ಸ್  ಆಫಾರ್ ಅಡಿ ಲೋನ್ ಪಡೆಯಲು ಬ್ಯಾಂಕ್ ನಿಮ್ಮ ಬಳಿಯಿಂದ ನಿರ್ಧಾರಿತ ಬಡ್ಡಿದರ, ಪ್ರಾಸೆಸಿಂಗ್ ಶುಲ್ಕ, ಡಾಕ್ಯುಮೆಂಟೆಶನ್ ಚಾರ್ಜ್ ಹಾಗೂ ಇತರೆ ಶುಲ್ಕಗಳನ್ನು ವಸೂಲಿ ಮಾಡಲಿದೆ.

Trending News