ನಿಮ್ಮ ಶರೀರದಲ್ಲಿ ನೀರಿನ ಕೊರತೆ ಇದೆ ಎನ್ನುತ್ತವೆ ಈ ಲಕ್ಷಣಗಳು

ಸಾಮಾನ್ಯವಾಗಿ, ನಾವೆಲ್ಲರೂ ದೇಹದಲ್ಲಿನ ನೀರಿನ ಕೊರತೆಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುತ್ತೇವೆ. ನಿರ್ಜಲೀಕರಣದಿಂದಾಗಿ ಅನೇಕ ಬಾರಿ ಹೆಚ್ಚಿನ ಸಂಖ್ಯೆಯ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಾರೆ.

Last Updated : Oct 5, 2020, 06:52 PM IST
  • ಸಾಮಾನ್ಯವಾಗಿ, ನಾವೆಲ್ಲರೂ ದೇಹದಲ್ಲಿನ ನೀರಿನ ಕೊರತೆಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುತ್ತೇವೆ.
  • ನಿರ್ಜಲೀಕರಣದಿಂದಾಗಿ ಅನೇಕ ಬಾರಿ ಪ್ರಾಣಾಪಾಯಕ್ಕೂ ಕೂಡ ಕಾರಣವಾಗುತ್ತದೆ.
  • ದೇಹದಲ್ಲಿ ನೀರಿನ ಕೊರತೆ ರಕ್ತದಲ್ಲಿ ಆಮ್ಲಜನಕ ಕೊರತೆಗೂ ಕೂಡ ಕಾರಣವಾಗುತ್ತದೆ.
ನಿಮ್ಮ ಶರೀರದಲ್ಲಿ ನೀರಿನ ಕೊರತೆ ಇದೆ ಎನ್ನುತ್ತವೆ ಈ ಲಕ್ಷಣಗಳು title=

ನವದೆಹಲಿ: ನಮ್ಮ ದೇಹಕ್ಕೆ ನೀರು ಎಷ್ಟು ಮುಖ್ಯ ಎಂದು ತಿಳಿದಿದ್ದರೂ, ಅನೇಕ ಜನರು ಸಾಕಷ್ಟು ನೀರು ಕುಡಿಯುವುದಿಲ್ಲ. ಅಗತ್ಯವಾದ ಪ್ರಮಾಣದ ನೀರನ್ನು ಕುಡಿಯದಿರುವುದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅಂತಹ ಕೆಲವು ಸಂಕೇತಗಳನ್ನೂ ನಾವು ನಿಮಗೆ ಹೇಳುತ್ತಿದ್ದೇವೆ, ಈ ಸಂಕೇತಗಳು ನೀವು ನಿಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣದ ನೀರನ್ನು ಪಡೆಯುತ್ತಿಲ್ಲ ಎಂದು ಸೂಚಿಸುತ್ತದೆ. ಇದರಿಂದ ನೀವು ಇರುವಾಗಲೇ ನಿಮ್ಮಈ ಅಭ್ಯಾಸವನ್ನು ಸುಧಾರಿಸಬಹುದು. 

- ದೇಹದಲ್ಲಿ ನೀರಿನ ಕೊರತೆ ಇದ್ದಾಗ, ಬಾಯಿ ಒಣಗಲು ಪ್ರಾರಂಭಿಸುತ್ತದೆ. ಬಾಯಿ ಪದೇ ಪದೇ ಒಣಗಿದರೆ, ದೇಹದಲ್ಲಿ ನೀರಿನ ಕೊರತೆ ಇದೆ ಎಂದು ಅರ್ಥಮಾಡಿಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ, ತಕ್ಷಣ ನೀರನ್ನು ಕುಡಿಯಬೇಕು.

ಇದನ್ನು ಓದಿ- ಥೈರಾಯ್ಡ್‌ ರೋಗಿಗಳಿಗೆ ಹೆಚ್ಚು ಹಾನಿ ಉಂಟುಮಾಡುವ ಆಹಾರ ಪದಾರ್ಥಗಳಿವು!

-  ಕಡಿಮೆ ನೀರು ಕುಡಿಯುವುದರಿಂದ ಬೆವರುವುದು ಕಡಿಮೆಯಾಗುತ್ತದೆ ಮತ್ತು ದೇಹದಿಂದ ತ್ಯಾಜ್ಯ ಪದಾರ್ಥಗಳನ್ನು ದೇಹದಿಂದ ಹೊರಹಾಕುವುದಿಲ್ಲ. ದೇಹದಲ್ಲಿ ನೀರಿನ ಕೊರತೆಯಿಂದಾಗಿ ಚರ್ಮವು ಒಣಗುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳ ಅಪಾಯವಿರುತ್ತದೆ.

- ನೀರಿನ ಕೊರತೆಯು ಬಾಯಿ ಮತ್ತು ಗಂಟಲಿನ ಮೇಲೆ ಮಾತ್ರವಲ್ಲ, ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಕಣ್ಣುಗಳು ಒಣಗುತ್ತವೆ ಮತ್ತು ಕೆಂಪಾಗುತ್ತವೆ.

-ದೇಹದಲ್ಲಿ ನೀರಿನ ಕೊರತೆ ಎಂದರೆ ದೇಹದಲ್ಲಿ ಸ್ನಾಯುವಿನ ದ್ರವ್ಯರಾಶಿ ಕಡಿಮೆಯಾಗುತ್ತದೆ. ವ್ಯಾಯಾಮದ ಮೊದಲು, ನಡುವೆ ಮತ್ತು ನಂತರ ನೀರು ಕುಡಿಯುವುದರಿಂದ ದೇಹವು ಹೈಡ್ರೇಟ ಆಗಿರುತ್ತದೆ ಮತ್ತು ನೀರಿನ ಸರಿಯಾದ ಬಳಕೆಯಾಗುತ್ತದೆ. 

ಇದನ್ನು ಓದಿ- ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ

- ದೇಹದಲ್ಲಿ ನೀರಿನ ಕೊರತೆ ಇದ್ದಾಗ ಮೂತ್ರ ದಪ್ಪ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರೊಂದಿಗೆ ಮೂತ್ರದ ಪ್ರಮಾಣವು ಕೂಡ ಸಾಮಾನ್ಯಕ್ಕಿಂತ ಕಡಿಮೆಯಿರುತ್ತದೆ ಮತ್ತು ಮೂತ್ರ ವಿಸರ್ಜನೆಯ ನಂತರ, ಖಾಸಗಿ ಭಾಗದಲ್ಲಿ ಉರಿ ಅಥವಾ ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

- ದೇಹದಲ್ಲಿ ನೀರಿನ ಕೊರತೆ ಇದ್ದರೆ, ದೇಹವು ರಕ್ತದಿಂದ ನೀರನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ. ಇದು ರಕ್ತದಲ್ಲಿನ ಆಮ್ಲಜನಕದ ಕೊರತೆಯನ್ನು ಉಂಟುಮಾಡುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೀವು ದಣಿದ ಮತ್ತು ಆಲಸ್ಯ ಅನುಭವಿಸಲು ಪ್ರಾರಂಭಿಸುತ್ತೀರಿ.

(ಯಾವುದೇ ಉಪಾಯ ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯಲು ಮರೆಯದಿರಿ)

Trending News