ರೈಲು ನಿಲ್ದಾಣದಲ್ಲಿ ಟಿಕೆಟ್ ಸ್ಟೇಟಸ್ ತಿಳಿದುಕೊಳ್ಳುವ ಮೊದಲು ರಿಸರ್ವೇಶನ್ ಚಾರ್ಟ್ ಕುರಿತ ಈ ಹೊಸ ಸಂಗತಿ ನಿಮಗೆ ತಿಳಿದಿರಲಿ

ರಿಸರ್ವೆಶನ್ ಚಾರ್ಟ್‌ಗಳನ್ನು ಸಿದ್ಧಪಡಿಸುವ ನಿಯಮಗಳನ್ನು ಮತ್ತೆ ಬದಲಾಯಿಸಲಾಗಿದೆ ಎಂದು ರೈಲ್ವೆ ಹೇಳಿದೆ. ಈಗ ಮತ್ತೆ ಎರಡನೇ ರಿಸರ್ವೆಶನ್  ಚಾರ್ಟ್ ಅನ್ನು ರೈಲು ಹೊರಡುವ ಸಮಯ ಅಥವಾ ರೈಲು ಹೊರಡುವ ಸಮಯಕ್ಕೆ 30 ನಿಮಿಷಗಳ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎನ್ನಲಾಗಿದೆ.

Last Updated : Oct 6, 2020, 08:01 PM IST
  • ರಿಸರ್ವೇಶನ್ ಪಟ್ಟಿ ಬಿಡುಗಡೆ ನಿಯಮಗಳಲ್ಲಿ ಮತ್ತೆ ಬದಲಾವಣೆ ಮಾಡಿದ ರೈಲು ಇಲಾಖೆ.
  • ಇದೀಗ ರೈಲು ನಿಲ್ದಾಣದಿಂದ ನಿರ್ಗಮಿಸುವ 30 ನಿಮಿಷಗಳ ಮುಂಚಿತವಾಗಿ ಎರಡನೇ ರಿಸರ್ವೇಶನ್ ಪಟ್ಟಿ ಬಿಡುಗಡೆ.
  • ಕೊರೊನಾ ಕಾಲದಲ್ಲಿ ಈ ಅವಧಿಯನ್ನು 2 ಗಂಟೆಗೆ ಹೆಚ್ಚಿಸಲಾಗಿತ್ತು.
ರೈಲು ನಿಲ್ದಾಣದಲ್ಲಿ ಟಿಕೆಟ್ ಸ್ಟೇಟಸ್ ತಿಳಿದುಕೊಳ್ಳುವ ಮೊದಲು ರಿಸರ್ವೇಶನ್ ಚಾರ್ಟ್ ಕುರಿತ ಈ ಹೊಸ ಸಂಗತಿ ನಿಮಗೆ ತಿಳಿದಿರಲಿ title=

ನವದೆಹಲಿ: ರಿಸರ್ವೇಷನ್ ಚಾರ್ಟ್ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಂಡಿರುವ ಭಾರತೀಯ ರೈಲ್ವೆ (Indian Railways) ಇಲಾಖೆ  ಅಕ್ಟೋಬರ್ 10 ರಿಂದ ರೈಲು ಹೊರಡುವ 30 ನಿಮಿಷಗಳ ಮೊದಲು ಎರಡನೆಯ ರಿಸರ್ವೇಶನ್ ಚಾರ್ಟ್ ಅನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದೆ. ಕೋವಿಡ್ ಕಾಲದಲ್ಲಿ ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿದ್ದ ಇಲಾಖೆ, ಎರಡನೆಯ ರಿಸರ್ವೇಶನ್ ಪಟ್ಟಿಯನ್ನು ರೈಲು ಹೊರಡುವುದಕ್ಕೂ ಎರಡು ಗಂಟೆ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎಂದು ಹೇಳಿತ್ತು.

ಇದನ್ನು ಓದಿ- ಹಬ್ಬದ ಪ್ರಯುಕ್ತ 80 ವಿಶೇಷ ರೈಲುಗಳನ್ನು ಓಡಿಸಲಿರುವ ಭಾರತೀಯ ರೈಲ್ವೆ

ಚಾರ್ಟ್‌ಗಳನ್ನು ಸಿದ್ಧಪಡಿಸುವ ನಿಯಮಗಳನ್ನು ಇದೆಗ ಮತ್ತೆ ಬದಲಾಯಿಸಲಾಗಿದೆ ಎಂದು ರೈಲ್ವೆ ಹೇಳಿದೆ. ಹೊಸ ನಿಯಮದ ಪ್ರಕಾರ ಇದೀಗ ಮತ್ತೆ ಎರಡನೆಯ ರಿಸರ್ವೇಶನ್  ಚಾರ್ಟ್ ಅನ್ನು ರೈಲು ಹೊರಡುವ ಸಮಯ ಅಥವಾ ರೈಲು ಹೊರಡುವ ಸಮಯಕ್ಕೆ 30 ನಿಮಿಷಗಳ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎಂದು ಹೇಳಿದೆ.

ಇದಲ್ಲದೆ, ಎರಡನೇ ಚಾರ್ಟ್ ತಯಾರಿಸುವ ಮೊದಲು ಆನ್‌ಲೈನ್ ಮತ್ತು PRS (ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್) ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯವಿರುತ್ತದೆ ಎಂದು ಇಲಾಖೆ ಹೇಳಿದೆ.

ಇದನ್ನು ಓದಿ- Indian Railways: ಈಗ ಈ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್‌ಗಳು ಮಾತ್ರ ಲಭ್ಯ

ಹೀಗಾಗಿ ಚಾರ್ಟ್‌ಗಳ ತಯಾರಿಕೆಗಾಗಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದೀಗ ರಿಸರ್ವೇಶನ್ ನ ಎರಡನೇ ಚಾರ್ಟ್ ಅನ್ನು ರೈಲು ಹೊರಡುವ ಸಮಯ ಅಥವಾ ರೈಲು ಹೊರಡುವ ಸಮಯಕ್ಕೆ 30 ನಿಮಿಷಗಳ ಮೊದಲು ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.

ಇದನ್ನು ಓದಿ- ಭಾರತೀಯ ರೈಲು ಇಲಾಖೆ ನೀಡುತ್ತಿದೆ ಗಳಿಕೆಯ ಸುವರ್ಣಾವಕಾಶ, ಇಲ್ಲಿದೆ ಅರ್ಜಿ ಸಲ್ಲಿಕೆಯ ವಿಧಾನ

ರಿಸರ್ವೇಶನ್ ಚಾರ್ಟ್ ತಯಾರಿಕೆಯ ನಿಯಮಗಳೇನು?
- ಟ್ರೈನ್ ಡಿಪಾರ್ಚರ್ ಗೆ 4 ಗಂಟೆಗಳ ಮುಂಚಿತವಾಗಿ ಮೊದಲ ರಿಸರ್ವೇಶನ್ ಪಟ್ಟಿ ಬಿಡುಗಡೆ.
- ಎರಡನೆಯ ರಿಸರ್ವೇಶನ್ ಚಾರ್ಟ್ ರೈಲು ನಿಲ್ದಾಣ ಬಿಡುಗಡೆಗೂ 30 ನಿಮಿಷ ಮುಂಚಿತವಾಗಿ ಬಿಡುಗಡೆ.

Trending News