ಕೇಂದ್ರ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಗಡುವು ನೀಡಿದ ತೆಲುಗು ದೇಶಂ

    

Last Updated : Feb 15, 2018, 09:09 PM IST
ಕೇಂದ್ರ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಗಡುವು ನೀಡಿದ ತೆಲುಗು ದೇಶಂ title=

ಅಮರಾವತಿ : ಮಾರ್ಚ್ 5 ರೊಳಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ 19 ಭರವಸೆಗಳು ಈಡೇರದಿದ್ದರೆ ಎನ್ ಡಿ ಎ ಒಕ್ಕೂಟದಿಂದ ಹೊರನಡೆಯುವದಾಗಿ ಎಂದು ತೆಲುಗು ದೇಶಂ ಪಕ್ಷ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಇತ್ತೀಚಿಗೆ ಆಂದ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆಂದು ತೆಲುಗು ದೇಶಂ ಪಕ್ಷವು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ.ಈ ಒತ್ತಾಯಕ್ಕೆ ಮಣಿದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಇತ್ತೀಚಿಗೆ 19 ಭರವಸೆಗಳನ್ನು ನೀಡಿದ್ದರು. ಒಂದು ವೇಳೆ ಈ ನೀಡಿರುವ ಭರವಸೆಗಳನ್ನು ಮಾರ್ಚ್ 19 ರ ಒಳಗಾಗಿ ಈಡೇರಿಸದಿದ್ದರೆ  ಎನ್ ಡಿ ಎ ಒಕ್ಕೂಟದಿಂದ ಹೊರ ನಡೆಯುವುದಾಗಿ ಎಂದು ಅದು ಅಂತಿಮ ಗಡುವನ್ನು ನಿಗಧಿಪಡಿಸಿದೆ.
 
ಈ ಕುರಿತಾಗಿ ರಾಜ್ಯಸಭೆಯಲ್ಲಿ ಪ್ರತಿಕ್ರಯಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಐದು ವರ್ಷಗಳ ಕಾಲ ಆಂಧ್ರಪ್ರದೇಶಕ್ಕೆ ವಿಶೇಷ ನೆರವು ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ಈ ಸಹಾಯವನ್ನು ಹಿಂದೆ ಬಾಹ್ಯ ನೆರವಿನ ರೀತಿಯಲ್ಲಿ ಅನುದಾನವನ್ನು ನೀಡಲಾಗುತ್ತಿತ್ತು, ಜನವರಿಯಲ್ಲಿ ರಾಜ್ಯಸರ್ಕಾರವು ಪರ್ಯಾಯ ವಿಧಾನಗಳನ್ನು ಸೂಚಿಸಿದ್ದರಿಂದಾಗಿ  ಕೇಂದ್ರ ಸರ್ಕಾರವು ಶೀಘ್ರ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬವಾಗಿದೆ. ಆದ್ದರಿಂದ ಸಧ್ಯದಲ್ಲಿ ಈ ವಿಷಯಕ್ಕೆ ಸಂಬಂದಪಟ್ಟಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜೈಟ್ಲಿ ತಿಳಿಸಿದ್ದಾರೆ. 

Trending News