ಇಸ್ಲಾಮಾಬಾದ್ : 2019ರ ಪುಲ್ವಾಮಾ ದಾಳಿಯನ್ನು (Pulwama Attack) ಮಾಡಿದ್ದು ತಾನೇ ಎಂದು ಪಾಕಿಸ್ತಾನವು ತನ್ನ ಸಂಸತ್ತಿನಲ್ಲೇ ಖುಲ್ಲಂಖುಲ್ಲಾ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ಪುಲ್ವಾಮಾ ದಾಳಿಯು ಇಮ್ರಾನ್ ಖಾನ್ ಸರ್ಕಾರದ ಮಹತ್ವದ ಸಾಧನೆ ಎಂದು ಬಣ್ಣಿಸಿದೆ.
ಗುರುವಾರ ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ, ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವನ್ನು ಬಯಲು ಮಾಡಿದರು.
ಸಚಿವ ಫವಾದ್ ಸಂಸತ್ತಿನಲ್ಲಿ ಹೇಳಿದ್ದೇನು..?
ನಾವು ಅವರ ಮನೆಗೆ ನುಗ್ಗಿ ಅವರನ್ನು ಹೊಡೆದಿದ್ದೇವೆ, (ghar me ghus ke maara)." ಇದು ಇಮ್ರಾನ್ ಖಾನ್ (Imran Khan) ಸರ್ಕಾರದ ಮಹತ್ವದ ಸಾಧನೆ ಎಂದು ಫವಾದ ಚೌಧರಿ ಪಾಕ್ ಸಂಸತ್ತಿನಲ್ಲಿ ಹೇಳಿದರು.ಬುಧವಾರ ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡಿದ ಪಾಕಿಸ್ತಾನ ಮುಸ್ಲಿಮ್ ಲೀಗ್ – ನವಾಜ್ ಪಕ್ಷದ ನಾಯಕ ಅಯಾಜ್ ಸಾದಿಕ್ , ಭಾರತ ಕ್ಷಿಪಣಿ ದಾಳಿ ಮಾಡಬಹುದೆಂದು ಹೆದರಿ ಪಾಕಿಸ್ತಾನವು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿತ್ತು ಎಂಬುದನ್ನು ಸ್ಪಷ್ಟ ವಾಗಿ ಹೇಳಿದ್ದರು.
ಪುಲ್ವಾಮಾ ದಾಳಿಗೆ ಉಗ್ರ ಸಂಘಟನೆ ಹೊಣೆಯಲ್ಲ: ಮತ್ತೆ JeM ಸಮರ್ಥಿಸಿಕೊಂಡ ಪಾಕಿಸ್ತಾನ
“ಭಾರತಕ್ಕೆ ಹೆದರಿ ಅಭಿನಂದನ್ ಬಿಡುಗಡೆ ಎಂದು ಹೇಳಿದ್ದ ಆಯಾಜ್ ಸಾಧಿಕ್ ”
ಆಯಾಜ್ ಹೇಳಿಕೆ ಪ್ರಕಾರ ಅಂದು ಪಾಕ್ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ (Shaa MehamoodQureshi) ಸಂಸದೀಯ ನಾಯಕರ ಸಭೆ ನಡೆಸಿದ್ದರು. ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸದಿದ್ದಲ್ಲಿ ರಾತ್ರಿ 9 ಗಂಟೆಗೆ ಭಾರತ ಪಾಕಿಸ್ತಾನದ ಮೇಲೆ ದಾಳಿ(Attack) ನಡೆಸುವ ಸಂಭವವಿದೆ ಎಂದು ಈ ಸಭೆಯಲ್ಲಿ ಅವರು ಆತಂಕ ವ್ಯಕ್ತಪಡಿಸಿದ್ದರು.
ಈ ಸಭೆಗೆ ಹಾಜರಾಗಲು ಇಮ್ರಾನ್ ಖಾನ್ ನಿರಾಕರಿಸಿದ್ದರು.ಆದರೆ ಸಭೆಗೆ ಮಿಲಿಟರಿ ಚೀಫ್ ಜನರಲ್ ಬಾಜ್ವಾ ಹಾಜರಾಗಿದ್ದರು. ಸಭೆಗೆ ಆಗಮಿಸಿದ ಜನರಲ್ ಬಾಜ್ವಾ ಅವರ ಕಾಲುಗಳು ನಡುಗುತ್ತಿತ್ತು. ಮಾತುಗಳು ತೊದಲುತ್ತಿತ್ತು ಎಂದು ಸಂಸದ ಆಯಾಜ್ ಹೇಳಿದ್ದಾರೆ. ಈ ಸಭೆಯಲ್ಲಿ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದೇ ಹೋದರೆ ಭಾರತ ರಾತ್ರಿ 9 ಗಂಟೆಗೆ ಪಾಕ್ ಮೇಲೆ ದಾಳಿ ನಡೆಸಲಿದೆ ಎಂದು ಖುರೇಷಿ ಹೇಳಿದ್ದರು.
ಪುಲ್ವಾಮ ದಾಳಿ: 100 ಗಂಟೆಯೊಳಗೆ ಕಾಶ್ಮೀರದಲ್ಲಿ JeM ನಾಯಕರನ್ನು ಹೊಡೆದುರುಳಿಸಿದ ಸೇನೆ
ಈ ಬಗ್ಗೆ ಪಾಕ್ ಮಾಧ್ಯಮದ ವರದಿಯನ್ನು ಖುರೇಷಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದಾದ ಬಳಿಕ ಸಭೆಯಲ್ಲಿ ಚರ್ಚೆ ನಡೆಸಿ ಅಭಿನಂದನ್ ಅವರು ಭಾರತಕ್ಕೆ ಹಸ್ತಾಂತರಿಸಲಾಯಿತು ಎಂದು ಆಯಾಜ್ ಪಾಕ್ ಸಂಸತ್ತಿನಲ್ಲಿ ಹೇಳಿದ್ದರು. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು.
ಅಯಾಜ್ ಸಾದಿಕ್ ಹೇಳಿಕೆಯನ್ನು ಅಲ್ಲಗಳೆಯುವ ಭರದಲ್ಲಿ ಫವಾದ್ ಚೌಧರಿ ಪುಲ್ವಾಮಾ ದಾಳಿ ಪಾಕಿಸ್ತಾನ ರೂಪಿತ ಸಂಚು ಎಂಬುದನ್ನು ಒಪ್ಪಿಕೊಂಡಿದ್ದಾರೆ.
2019ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಬಾಲಾಕೋಟ್ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಭಾರತ ಇದರ ಪ್ರತೀಕಾರ ತೀರಿಸಿಕೊಂಡಿತ್ತು.
ಇದೀಗ ಸಚಿವ ಫವಾದ್ ಚೌಧರಿ, ಹೇಳಿಕೆಗೆ ಎಲ್ಲೆಡೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪುಲ್ವಾಮಾ ದಾಳಿಯ ಬಳಿಕ ಏನಾಗಿತ್ತು ಎನ್ನುವುದರ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದೆ. ಅದು ಬಿಟ್ಟು ಭಾರತದ ಜೊತೆ ಪಾಕಿಸ್ತಾನ ಎಂದೂ ಯುದ್ಧ ಬಯಸಿರಲಿಲ್ಲ. ಸಂಸತ್ತಿನಲ್ಲಿಮಾತನಾಡಿರುವ ದೊಡ್ಡ ಭಾಷಣವಾಗಿತ್ತು. ಈ ಭಾಷಣದಲ್ಲಿ ಎಲ್ಲಿಯೂ ಪುಲ್ವಾಮಾ ದಾಳಿಯನ್ನು ಪಾಕಿಸ್ತಾನ ಮಾಡಿರುವುದು ಎಂದು ನಾನು ಹೇಳಲೇ ಇಲ್ಲ ಎಂದಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಚೌಧರಿ ಹೇಳಿದ್ದಾರೆ.
Aa