ತನ್ನ Report ವೈಶಿಷ್ಟ್ಯವನ್ನು ಅಪ್ಡೇಟ್ ಮಾಡಲು ಮುಂದಾದ WhatsApp, ಇತ್ತೀಚಿನ ಚ್ಯಾಟ್ ಪುರಾವೆ ನೀಡಬೇಕು

ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ರಿಪೋರ್ಟ್ ವೈಶಿಷ್ಟ್ಯವನ್ನು ನವೀಕರಿಸಲಿದೆ. ಹೊಸ ವೈಶಿಷ್ಟ್ಯದಲ್ಲಿ, ಬಳಕೆದಾರರು ವಾಟ್ಸಾಪ್‌ನಲ್ಲಿ ಸಂಖ್ಯೆಯನ್ನು ವರದಿ ಮಾಡಿದರೆ, ಇತ್ತೀಚಿನ ಚಾಟ್ ಅನ್ನು ಪುರಾವೆಯಾಗಿ ತೋರಿಸಬೇಕಾಗಬಹುದು.

Last Updated : Nov 5, 2020, 05:10 PM IST
  • ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ರಿಪೋರ್ಟ್ ವೈಶಿಷ್ಟ್ಯವನ್ನು ನವೀಕರಿಸಲಿದೆ.
  • ಹೊಸ ವೈಶಿಷ್ಟ್ಯದಲ್ಲಿ, ಬಳಕೆದಾರರು ವಾಟ್ಸಾಪ್ನಲ್ಲಿ ಸಂಪರ್ಕವನ್ನು ವರದಿ ಮಾಡುವ ಮೊದಲು ಪುರಾವೆಗಳನ್ನು ಒದಗಿಸಬೇಕು.
  • ಈ ವೈಶಿಷ್ಟ್ಯವು ಅಪ್ಲಿಕೇಶನ್‌ನ 2.20.206.3 ಆಂಡ್ರಾಯ್ಡ್ ಆವೃತ್ತಿಯಲ್ಲಿ ನೇರ ಪ್ರಸಾರವಾಗಿದೆ.
ತನ್ನ Report ವೈಶಿಷ್ಟ್ಯವನ್ನು ಅಪ್ಡೇಟ್ ಮಾಡಲು ಮುಂದಾದ WhatsApp, ಇತ್ತೀಚಿನ ಚ್ಯಾಟ್ ಪುರಾವೆ ನೀಡಬೇಕು  title=

ನವದೆಹಲಿ: ಖ್ಯಾತ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ (WhatsApp) ತನ್ನ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಹೊಸ ವೈಶಿಷ್ಟ್ಯದಲ್ಲಿ, ಬಳಕೆದಾರರು ವಾಟ್ಸಾಪ್ನಲ್ಲಿ ಸಂಪರ್ಕವನ್ನು ವರದಿ ಮಾಡುವ ಮೊದಲು ಪುರಾವೆಗಳನ್ನು ಒದಗಿಸಬೇಕು. ಬಳಕೆದಾರರು ಇತ್ತೀಚಿನ ಚಾಟ್ ಅನ್ನು ಸಾಕ್ಷಿಯಾಗಿ ತೋರಿಸಬೇಕಾಗಬಹುದು. ವರದಿಯ ಪ್ರಕಾರ, ಈ ವೈಶಿಷ್ಟ್ಯವು ಅಪ್ಲಿಕೇಶನ್‌ನ 2.20.206.3 ಆಂಡ್ರಾಯ್ಡ್ ಆವೃತ್ತಿಯಲ್ಲಿ ನೇರ ಪ್ರಸಾರವಾಗಿದೆ, ಇದನ್ನು ಈ ಸಮಯದಲ್ಲಿ ಬೀಟಾ ಪರೀಕ್ಷಕರು ಬಳಸಬಹುದು.

ಇದನ್ನು ಓದಿ- WhatsApp ತೆರೆಯದೆಯೇ ಯಾರು ಯಾರು ಆನ್ಲೈನ್ ನಲ್ಲಿದ್ದಾರೆ ಹೀಗೆ ತಿಳಿಯಿರಿ

ಇಲ್ಲಿಯವರೆಗೆ, ವಾಟ್ಸ್ ಆಪ್ ಬಳಕೆದಾರರು ತಮ್ಮ ಖಾತೆಯಲ್ಲಿ ಯಾವುದೇ ರೀತಿಯ  ಸ್ಪ್ಯಾಮಿಂಗ್ ಅಥವಾ ಕಿರುಕುಳವನ್ನು ಗಮನಿಸಿದರೆ, ನಂತರ ಅಂತಹ ಪರಿಸ್ಥಿತಿಯಲ್ಲಿ, ಅವರು ಯಾವುದೇ ಸಾಮಾನ್ಯ ಅಥವಾ ವ್ಯವಹಾರ ಖಾತೆಯಾ ಕುರಿತು ವರದಿ ಮಾಡಬಹುದಾಗಿತ್ತು. ಆದರೆ, ಇನ್ಮುಂದೆ ಹೊಸ ವೈಶಿಷ್ಟ್ಯ ಪ್ರಕಾರ  ವಾಟ್ಸಾಪ್ಗೆ ವರದಿ ಮಾಡಲು ಕಾರಣದ ಪುರಾವೆಗಳ ಅಗತ್ಯ ಬೀಳಲಿದೆ.

ಇದನ್ನು ಓದಿ- ಮೊಬೈಲ್‌ನಲ್ಲಿ 'WhatsApp has stopped'ಎಂದು ಕಂಡರೆ ಚಿಟಿಕೆಯಲ್ಲಿ ಸರಿಪಡಿಸಿ

Report ಮಾಡಿದ ಮೇಲೆ ಫಾರ್ವರ್ಡ್ ಆಗಲಿದೆ ಚ್ಯಾಟ್
ಒಂದೊಮ್ಮೆ ಈ ವೈಶಿಷ್ಟ್ಯ ಲೈವ್ ಆದ ಮೇಲೆ ಬಳಕೆದಾರರು ಯಾವುದೇ ಅಕೌಂಟ್ ಗೆ ಸಂಬಂಧಿಸದಂತೆ ವರದಿ ಮಾಡಿದರೆ, ಅವರಿಗೆ ಸಂದೇಶವೊಂದು ಕಾಣಿಸಿಕೊಳ್ಳಲಿದೆ. ಈ ಸಂದೇಶದಲ್ಲಿ  'Most recent messages from this user will be forwarded to WhatsApp' ಎಂದು ಬರೆದಿರಲಾಗುವುದು.  Wabetainfo ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, WhatsApp ನಿಮ್ಮ ಚಾಟ್ ವೆರಿಫಿಕೆಶನ್ ಮಾಡಿದ ಬಳಿಕ ಮಾತ್ರವೇ ನೀವು ರಿಪೋರ್ಟ್ ಮಾಡಿರುವ ಖಾತೆಯ ವಿರುದ್ಧ ಕ್ರಮ ಕೈಗೊಳ್ಳಲಿದೆ.

ಇದನ್ನು ಓದಿ- ಮೊಬೈಲ್ ನಂಬರ್ ಇಲ್ಲದೆ WhatsApp ನಿರ್ವಹಿಸುವುದು ಹೇಗೆ, ಇಲ್ಲಿದೆ ವಿಧಾನ

ಪ್ರಸ್ತುತ ಈ Report ವೈಶಿಷ್ಟ್ಯ ಇಂತಿದೆ
ವರ್ತಮಾನದಲ್ಲಿ ಒಂದು ವೇಳೆ ನಿಮಗೆ ಯಾವುದೇ ಒಂದು ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದರೆ, WhatsApp ನಿಮಗೆ ಆ ಸಂಖ್ಯೆಯನ್ನು ರಿಪೋರ್ಟ್, ಬ್ಲಾಕ್ ಅಥವಾ ಆ ಸಂಖ್ಯೆಯನ್ನು ಸೇವ್ ಮಾಡುವ ವಿಕಲ್ಪಗಳನ್ನು ನೀಡುತ್ತದೆ. ಆದರೆ, ನಿಮ್ಮ ಬಳಿಯಿಂದ ಸಬೂತು ರೂಪದಲ್ಲಿ ಯಾವುದೇ ಚಾಟ್ ಅನ್ನು ಕೇಳಲಾಗುವುದಿಲ್ಲ.

Trending News