ನವದೆಹಲಿ: ಉತ್ತರ ಪ್ರದೇಶದ ರೈತರಿಗೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಹೆಚ್ಚಿನ ಪರಿಹಾರ ನೀಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM YogiAadityanath) ರಾಜ್ಯದ ಕೋಟ್ಯಂತರ ರೈತರಿಗೆ ಮಂಡಿಯಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಲು ಮತ್ತು ಮಂಡಿಯಲ್ಲಿ ಕೆಲಸ ಮಾಡುವ ವ್ಯಾಪಾರಿಗಳನ್ನು ಉತ್ತೇಜಿಸಲು ಮಂಡಿ ತೆರಿಗೆ ಶುಲ್ಕವನ್ನು ಅರ್ಧದಷ್ಟು ಕಡಿಮೆ ಮಾಡಿದ್ದಾರೆ. ಇದನ್ನು ಶೇಕಡಾ 2 ರಿಂದ ಕೇವಲ 1 ಕ್ಕೆ ಇಳಿಸಲು ಸಿಎಂ ಆದೇಶಿಸಿದ್ದಾರೆ. ಮಂಡಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು, ಅಭಿವೃದ್ಧಿ ತೆರಿಗೆ ದರ (0.5 ಪ್ರತಿಶತ) ಎಂದಿನಂತೆ ಮುಂದುವರೆಯಲಿದೆ.
ಹೀಗಾಗಿ ಇದೀಗ ಮಂಡಿ ಆವರಣದಲ್ಲಿ ವ್ಯಾಪಾರ ಮಾಡುವುದರಿಂದ ರೈತರಿಗೆ ಪ್ರಸ್ತುತ ಅನ್ವಯವಾಗುವ ಶೇ.2.5 ರಷ್ಟು ಒಟ್ಟು ಶುಲ್ಕದ ಬದಲು ಒಟ್ಟು ಶೇ.1.5 ರಷ್ಟು ತೆರೆಗೆಯನ್ನು ಮಾತ್ರ ರೈತರು ಪಾವತಿಸಬೇಕಾಗಲಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ - ಮುಖ್ಯಮಂತ್ರಿಯವರ ಈ ನಿರ್ಧಾರವು ರೈತರು ಮತ್ತು ಸಂಬಂಧಿತ ವ್ಯಾಪಾರ ಸಂಸ್ಥೆಗಳಿಗೆ ದೀಪಾವಳಿಯ ಉಡುಗೊರೆಯಾಗಿದೆ.
ಇದನ್ನು ಓದಿ- ಯುಪಿಯಲ್ಲಿ ಫಿಲಂ ಸಿಟಿ: ಸಿಂಗಾಪುರ ಮೂಲದ ಕಂಪನಿಯಿಂದ ಬಂಡವಾಳ ಹೂಡಿಕೆ
ಇದಕ್ಕೂ ಮೊದಲು ಕೊರೊನಾ ಮಹಾಮಾರಿಯ ಕಾಲದಲ್ಲಿ ರೈತರಿಗೆ ಹಣ್ಣು ಮತ್ತು ತರಕಾರಿಗಳ ಮಾರ್ಕೆಟಿಂಗ್ ಗಾಗಿ ಮೇ ತಿಂಗಳಿನಲ್ಲಿ ಒಟ್ಟು 45 ಸರಕುಗಳನ್ನು ಒಟ್ಟಿಗೆ ಡಿನೋಟಿಫೈ ಮಾಡಲಾಗಿತ್ತು. ಇದಾದ ಬಳಿಕ ಅವರು ಈ ಸರಕುಗಲಿಗಾಗಿ ಮಂಡಿ ಶುಲ್ಕದಿಂದ ವಿನಾಯ್ತಿ ಪಡೆದಿದ್ದರು. ಈ ಉತ್ಪನ್ನಗಳನ್ನು ಮಂಡಿ ಆವರಣದಲ್ಲಿ ತರಲು ಅವರಿಗೆ ಕೇವಲ ಶೇ.1 ರಷ್ಟು ತೆರಿಗೆ ಅನ್ವಯಿಸುತ್ತಿತ್ತು.
ಈ ಹಿಂದೆ ಉತ್ತರ ಪ್ರದೇಶ ಸರ್ಕಾರವು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ರಾಜ್ಯದ ಹಲವಾರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಪೆಪ್ಸಿಕೋ ಮಥುರಾದಲ್ಲಿ ಆಲೂಗೆಡ್ಡೆ ಚಿಪ್ಸ್ ಉತ್ಪಾದನೆಗೆ 814 ಕೋಟಿ ರೂ. ಯೋಜನೆಯನ್ನು ಘೋಷಿಸಿದೆ. ಈ ಸ್ಥಾವರವನ್ನು ಮಥುರಾದ ಕೋಸಿಯಲ್ಲಿ ಸ್ಥಾಪಿಸಲಾಗುವುದು ಮತ್ತು ಮುಂದಿನ ವರ್ಷದ ಮಾರ್ಚ್ ವೇಳೆಗೆ ಈ ಸ್ಥಾವರದಲ್ಲಿ ಚಿಪ್ಸ್ ಉತ್ಪಾದನೆ ಪ್ರಾರಂಭಿಸಲಾಗುವುದು ಎಂದು ಕಂಪನಿ ಹೇಳಿದೆ.
ಇದನ್ನು ಓದಿ- ರೈತ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ: ಪ್ರಾಯೋಗಿಕ ಹಂತದಲ್ಲಿ ಶೇ. 88ರಷ್ಟು ಪ್ರಗತಿ
ಕೋಸಿ ಪ್ರದೇಶದಲ್ಲಿ 35 ಎಕರೆ ಭೂಮಿಯಲ್ಲಿ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ. ಈ ಭೂಮಿಯನ್ನು ಯುಪಿ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಎಸ್ಐಡಿಎ) ಒದಗಿಸಿದೆ. ಚಿಪ್ಸ್ ತಯಾರಿಸಲು ಮಥುರಾ ರೈತರಿಂದ ಹೆಚ್ಚಿನ ಆಲೂಗಡ್ಡೆಯನ್ನು ಖರೀದಿಸುವುದಾಗಿ ಪೆಪ್ಸಿಕೋ ಹೇಳಿದೆ. ಇದು ರೈತರ ಆದಾಯವನ್ನು ಹೆಚ್ಚಿಸಲಿದೆ. ಚಿಪ್ಸ್ ಪ್ಲಾಂಟ್ ಸಿದ್ಧವಾದ ನಂತರ ಸುಮಾರು 1500 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ರಾಜ್ಯ ಕೈಗಾರಿಕಾ ಅಭಿವೃದ್ಧಿ ಸಚಿವ ಸತೀಶ್ ಮಹಾನಾ ಅವರ ಪ್ರಕಾರ, ಈ ಯೋಜನೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೈಗಾರಿಕಾ ಪರ ನೀತಿಗಳ ಪರಿಣಾಮವಾಗಿದೆ. ವ್ಯವಹಾರವನ್ನು ಸುಲಭಗೊಳಿಸಲು ಸರ್ಕಾರವು ವಾಣಿಜ್ಯ ಸುಧಾರಣೆಗಳನ್ನು ಮಾಡಿದ ಇಂತಹ ನೀತಿಗಳು ರಾಜ್ಯವನ್ನು ಹೂಡಿಕೆಗಾಗಿ ಹೆಚ್ಚು ಆಕರ್ಷಕ ರಾಜ್ಯವನ್ನಾಗಿ ಮಾಡಿವೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- ಇನ್ಮುಂದೆ ಕಡಿಮೆ ಬೆಲೆಗೆ ರೈತರು ತಮ್ಮ ಧಾನ್ಯಗಳನ್ನು ಮಾರಾಟ ಮಾಡಬೇಕಾಗಿಲ್ಲ.. ಕಾರಣ ಇಲ್ಲಿದೆ
ಈ ಯೋಜನೆಯಲ್ಲಿ ಆರಂಭದಲ್ಲಿ 500 ಕೋಟಿ ರೂ.ಗಳ ಹೂಡಿಕೆಯನ್ನು ಯೋಜಿಸಲಾಗಿದೆ ಎಂದು ಪೆಪ್ಸಿಕೋ ಭಾರತದ ಅಧ್ಯಕ್ಷ ಅಹ್ಮದ್ ಅಲ್ ಶೇಖ್ ಹೇಳಿದ್ದಾರೆ, ಇದಕ್ಕಾಗಿ ಕಂಪನಿಯು 2018 ರ ಹೂಡಿಕೆದಾರರ ಶೃಂಗಸಭೆಯಲ್ಲಿ ಯುಪಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಮತ್ತು ಬಳಿಕ ಇದನ್ನು 814 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ.